Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಳಿವಯಸ್ಸಿನಲ್ಲೂ ನವತರುಣನಾಗಿ ಮಿಂಚಿದ ಅಮಿತಾಬ್ ಬಚ್ಚನ್
ಬಾಲಿವುಡ್ ಅಂಗಳದಲ್ಲಿ ಬಿಗ್ ಬಿ ಅಮಿತಾಬ್ರನ್ನು ಮೆಚ್ಚಿಕೊಳ್ಳದವರು ಯಾರಿದ್ದಾರೆ ಹೇಳಿ? ತಮ್ಮ ಇಳಿವಯಸ್ಸಿನಲ್ಲೂ ಬಿಗ್ ಬಿ ಇಂದಿಗೂ ಚಿರಯೌವನದ ಯುವಕರಂತೆಯೇ ಕಂಗೊಳಿಸುತ್ತಿದ್ದಾರೆ. ಕಂಚಿನ ಕಂಠ ಮತ್ತು ಅಜಾನುಬಾಹು ವ್ಯಕ್ತಿತ್ವದಿಂದಾಗಿ ಅಮಿತಾಬ್ ಆಂಗ್ರಿ ಯಂಗ್ ಮ್ಯಾನ್ ಎಂದೆನಿಸಿದ್ದಾರೆ. ಇಂದಿಗೂ ಅಮಿತಾಬ್ ತಮ್ಮ ನಟನಾ ಕೌಶಲ್ಯವನ್ನು ಎಂದಿನಂತೆಯೇ ನಿರ್ವಹಿಸುತ್ತಿರುವುದರಿಂದ ಅವರ ಬೇಡಿಕೆ ಕುಗ್ಗಿಲ್ಲ.

ಬರಿಯ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಡೆಸಿಕೊಡುವ ಯಾವುದೇ ಕಾರ್ಯಕ್ರಮದಲ್ಲಿ ಅಮಿತಾಬ್ ಅಚ್ಚುಕಟ್ಟುತನವನ್ನು ಕಾಯ್ದುಕೊಂಡು ಬಂದಿದ್ದಾರೆ. ಸಿನಿ ಕ್ಷೇತ್ರದಲ್ಲಿ ಎಷ್ಟೇ ಹೆಸರು ಮಾಡಿಕೊಂಡಿದ್ದರೂ ಬಿಗ್ ಬಿಯ ಧೀಮಂತ ವ್ಯಕ್ತಿತ್ವಕ್ಕೆ ನಾವು ತಲೆದೂಗಲೇಬೇಕು. ಕಿರಿಯವರಲ್ಲಿ ಕಿರಿಯರಾಗಿ ಹಿರಿಯವರಲ್ಲಿ ಹಿರಿಯರಾಗಿ, ಎಲ್ಲರೊಂದಿಗೂ ಸಮಾನವಾಗಿ ಬೆರೆಯುತ್ತಿರುವ ಅಮಿತಾಬ್ ಬಚ್ಚನ್‌ನ ಸರಳತೆಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಅವರ ಸ್ಟೈಲ್ ಸೆನ್ಸ್ ಅಂತೂ ಅದ್ಭುತವಾಗಿದ್ದು ಕಿರಿಯರು ಅವರಿಂದ ಕಲಿತುಕೊಳ್ಳಬೇಕಾದ್ದು ಬಹಳಷ್ಟಿದೆ. ಸ್ಟೈಲಿಶ್ ಲುಕ್‌ನಲ್ಲಿ ಮಿರಿಮಿರಿ ಮಿಂಚಿದ ಅಮಿತಾಬ್
ಇಂದಿನ ಲೇಖನದಲ್ಲಿ ಆಜ್ ಕೀ ರಾತ್ ಹೇ ಜಿಂದಗಿ ಕಾರ್ಯಕ್ರಮದಲ್ಲಿ ಅಮಿತಾಬ್ರ ಸ್ಟೈಲಿಶ್ ಲುಕ್ ಅನ್ನು ನಾವು ನಿಮಗಾಗಿ ವರ್ಣಿಸುತ್ತಿದ್ದೇವೆ. ಕೋಬಾಲ್ಟ್ ನೀಲಿ ಬಣ್ಣದ ಬ್ಲೇಜರ್ನಲ್ಲಿ ಹ್ಯಾಂಡ್ಸಮ್ ಆಗಿ ಅಮಿತಾಬ್ ಕಾಣುತ್ತಿದ್ದಾರೆ. ಇನ್ನು ಬ್ಲೇಜರ್ ಸುಂದರವಾದ ಚರ್ಮದ ಹೊಳೆಯುವಿಕೆಯನ್ನು ಪಡೆದುಕೊಂಡಿತ್ತು.
ಕಪ್ಪು ಪ್ಯಾಂಟ್ ಮತ್ತು ನೀಲಿ ಬಣ್ಣದ ಶರ್ಟ್ನಲ್ಲಿ ಅಮಿತಾಬ್ ನೋಡುಗರ ಕಣ್ಮನ ಸೆಳೆಯುವಂತಿದ್ದರು. ಮನೀಶ್ ಪಾಲ್ ಸೆಟ್ನಲ್ಲೂ ಬಿಗ್ ಬಿ ತಮ್ಮ ಸುಂದರತೆಯನ್ನು ಪ್ರದರ್ಶಿಸಿದ್ದಾರೆ. ನೀವು ಅಮಿತಾಬ್ ಕಟ್ಟಾ ಅಭಿಮಾನಿ ಹೌದಾಗಿದ್ದರೆ ಅವರ ಈ ಸ್ಟೈಲ್ ಕುರಿತು ನಿಮ್ಮ ಅಭಿಪ್ರಾಯವೇನು?
Read in english -You Must Check This Regal Look Of Amitabh Bachchan, In Cobalt Blue Suit



Click it and Unblock the Notifications


