Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕತ್ರೀನಾ-ಆದಿತ್ಯ ಜೋಡಿ: ಫುಲ್ ಮಿಂಚಿಂಗ್, ಹಾರ್ಟ್ ಟಚಿಂಗ್!
ಕತ್ರೀನಾ ಕೈಫ್ ಮತ್ತು ಆದಿತ್ಯ ರಾಯ್ ಪ್ರಮುಖ ಭೂಮಿಕೆಯಲ್ಲಿರುವ ಫಿತೂರ್ ಚಿತ್ರ ಸಂಪೂರ್ಣವಾಗಿ ಸಿದ್ಧಗೊಂಡಿದ್ದು ಫೆಬ್ರವರಿ 12 ಕ್ಕೆ ಬಿಡುಗಡೆಯಾಗುತ್ತಿದೆ. ಪ್ರೀತಿಯ ಕಥೆಯಿರುವ ಈ ಚಿತ್ರದ ಪ್ರಮೋಶನ್ ಕಾರ್ಯವನ್ನು ಕ್ಯಾಟಿ ಮತ್ತು ಆದಿತ್ಯ ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ಈರ್ವರೂ ಚಿತ್ರದ ಮೇಲೆ ಹೆಚ್ಚಿನ ಮಹತ್ವಾಕಾಂಕ್ಷೆಯನ್ನಿರಿಸಿಕೊಂಡಿದ್ದು ಚಿತ್ರದ ಕಥೆ ಯಶಸ್ಸಿನ ಗುರಿ ಮುಟ್ಟುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಬಾಲಿವುಡ್ನ ಇನ್ನೊಂದು ಬ್ಲಾಕ್ ಬಸ್ಟರ್ ಆಗಿ ಫಿತೂರ್ ಹೊರಬೀಳುವುದು ಖಚಿತವಾಗಿದೆ.

ಇನ್ನು ಕತ್ರೀನಾ ಮತ್ತು ಕೈಫ್ ಎಲ್ಲಾ ಟಿವಿ ಕಾರ್ಯಕ್ರಮಗಳು ಮತ್ತು ಪ್ರಚಾರ ಸಮಾರಂಭಗಳಲ್ಲಿ ತಮ್ಮ ಚಿತ್ರದ ಪ್ರಮೋಶನ್ ಅನ್ನು ಚೆನ್ನಾಗಿಯೇ ನಡೆಸುತ್ತಿದ್ದಾರೆ. ಅದೂ ಮನಸೆಳೆಯುವ ದಿರಿಸುಗಳಲ್ಲಿ ಈ ಜೋಡಿ ಕಣ್ಮನ ಸೆಳೆಯುವಂತೆ ಚಿತ್ರದ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದು ಹಾಡು, ಕುಣಿತಗಳ ಮೂಲಕ ರಂಜಿಸುತ್ತಾ ಪ್ರೇಕ್ಷಕ ವರ್ಗಕ್ಕೆ ಮನರಂಜನೆಯನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ಇವರಿಬ್ಬರೂ ಮುಂಬೈನ ಎನ್ಎಮ್ ಕಾಲೇಜಿನಲ್ಲಿ ಚಿತ್ರದ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಅವರು ಧರಿಸಿದ ದಿರಿಸಂತೂ ಮೋಹಕವಾಗಿದ್ದು ಜೋಡಿಯನ್ನು ಇನ್ನೊಮ್ಮೆ ನೋಡಬೇಕೆನ್ನುವ ಬಯಕೆಯನ್ನು ಮನದಲ್ಲಿ ಮೂಡಿಸುವಂತಿತ್ತು.
ಕತ್ರೀನಾ ಬಿಳಿ ಬಣ್ಣದ ಬಾಲ್ ಗೌನ್ ಅನ್ನು ಧರಿಸಿದ್ದು ಇದರಲ್ಲಿ ಚಿತ್ತಾರದ ವಿನ್ಯಾಸವಿತ್ತು. ವರುಣ್ ಬಾಲ್ ಈ ಗೌನ್ ಅನ್ನು ವಿನ್ಯಾಸಪಡಿಸಿದ್ದಾರೆ. ಇದಕ್ಕೆ ಒಪ್ಪುವಂತಹ ಕಿವಿಯಾಭರಣ ಮತ್ತು ಚಪ್ಪಲಿಗಳನ್ನು ಕೈಫ್ ಧರಿಸಿ ಸುಂದರಿಯಾಗಿ ಕಂಗೊಳಿಸುತ್ತಿದ್ದರು.
ಆದಿತ್ಯಾ ಮೊನೊಕ್ರಮೊಟಿಕ್ ನೀಲಿ ದಿರಿಸಿನಲ್ಲಿ ಮಸ್ತಾಗಿ ಕಾಣುತ್ತಿದ್ದರು. ಅಂತೂ ಈ ಜೋಡಿಯ ಫಿತೂರ್ ಪ್ರೇಕ್ಷಕರ ಮೇಲೆ ಯಾವ ರೀತಿಯ ಪಿತೂರಿಯನ್ನು ನಡೆಸಲಿದೆ ಎಂಬುದಕ್ಕಾಗಿ ಫೆಬ್ರವರಿ 12 ವರೆಗೆ ಕಾಯಬೇಕಾಗಿದೆ.



Click it and Unblock the Notifications

