Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಳತನ್ನು ಹೊಸದಾಗಿಸುವ ಆಲಿಯಾರ ಹೊಸ ಸ್ಟೈಲ್ ಪಾಠ
ಬಾಲಿವುಡ್ ಸೆಲೆಬ್ರಿಟಿಗಳು ಫ್ಯಾಷನ್ ಪಾಠವವನ್ನು ನಮಗೆ ತಿಳಿಸಿಕೊಡುವಲ್ಲಿ ಸಿದ್ಧಹಸ್ತರು. ಅತಿ ಸರಳ ಉಡುಗೆಯನ್ನೇ ಆಕರ್ಷಕವಾಗಿ ತೊಟ್ಟುಕೊಳ್ಳುವುದು ಹೇಗೆ ಎಂಬುದನ್ನು ಕುರಿತು ನಮಗೆ ತಿಳಿಸಿಕೊಡುವಷ್ಟು ನಿಪುಣರು. ಪ್ರತಿಯೊಂದು ಫ್ಯಾಷನ್ ಕಾರ್ಯಕ್ರಮದಲ್ಲೂ ಇವರುಗಳ ಸೌಂದರ್ಯದ ಝಲಕ್‌ನಿಂದ ನಾವು ಸಾಕಷ್ಟನ್ನು ಅರಿತುಕೊಳ್ಳಬಹುದಾಗಿದೆ.

ಈಗ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ಆಲಿಯಾ ಭಟ್ ತಮ್ಮ ಫ್ಯಾಷನ್ ಮಂತ್ರದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಿದ್ದಾರೆ. ನಮ್ಮ ಹೆಚ್ಚಿನ ದಿರಿಸುಗಳ ಸಮಸ್ಯೆಯನ್ನು ಚಿಟಿಕೆಯಲ್ಲಿ ಈಕೆ ನಿವಾರಣೆ ಮಾಡಲಿದ್ದಾರೆ. ಹಳೆಯ ಬಟ್ಟೆಗಳನ್ನು ನಾವು ಹೆಚ್ಚು ಬಳಸುವುದೇ ಕಡಿಮೆ. ಅದು ಹಳತಾದ ಒಡನೆ ಅದನ್ನು ಮೂಲೆಗೆಸೆದು ಬಿಡುತ್ತೇವೆ. ಆದರೆ ಆಲಿಯಾ ಹಳೆಬಟ್ಟೆಯಿಂದಲೇ ಹೊಸ ಸ್ಟೈಲ್ ಸೆನ್ಸ್ ಅನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ತಿಳಿಸಿಕೊಡಲಿದ್ದಾರೆ.
ಇತ್ತೀಚೆಗೆ ತಾನೇ ಆಲಿಯಾ ಸ್ಮೈಲ್ ಫೌಂಡೇಶನ್ ಈವೆಂಟ್‌ನಲ್ಲಿ ಫೇಡ್ ಆದ ಡಿಟೈಲ್ಡ್ ಟಾಪ್ ಅನ್ನು ಧರಿಸಿ ಹೊಸ ಸ್ಟೈಲಿಂಗ್ ಅನುಭವವನ್ನೇ ಉಣಬಡಿಸಿದ್ದಾರೆ. ಇದಕ್ಕೆ ಜೋಡಿಯಾಗಿ ನೀಲಿ ಸ್ಕಿನ್ನಿಯನ್ನು ಆಕೆ ತೊಟ್ಟಿದ್ದು ವೈನ್ ಹೀಲ್ಸ್ ಅನ್ನು ಮ್ಯಾಚಿಂಗ್ ಆಗಿ ತೊಟ್ಟುಕೊಂಡಿದ್ದರು.
ಕೂದಲಿಗೆ ಹೇರ್ ಬ್ಯಾಂಡ್ ಅನ್ನು ಧರಿಸಿ ಬಬ್ಲಿ ಲುಕ್ ಅನ್ನು ನೀಡಿ ನಮ್ಮ ಮನತಣಿಸಿದ್ದಾರೆ. ಇಲ್ಲಿಯೇ ಸೊಗಸಾದ ಸೌಂದರ್ಯ ಪಾಠವನ್ನು ನೀವು ಕಲಿತುಕೊಳ್ಳಬಹುದಾಗಿದ್ದು ಹಳೆಯ ದಿರಿಸಿನಿಂದ ಹೊಸ ಸ್ಟೈಲ್ ಅನ್ನು ಮಾಡಿಕೊಳ್ಳವುದು ಹೇಗೆ ಎಂಬುದನ್ನು ಅರಿತುಕೊಳ್ಳಬಹುದು.



Click it and Unblock the Notifications

