Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸಕತ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಸಿದ್ಧಾರ್ಥ್ ಮಲ್ಹೋತ್ರಾ
ಬಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಿರುವ ಸುಂದರ ಮುಖದ ಸಿದ್ಧಾರ್ಥ್ ಮಲ್ಹೋತ್ರಾ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಸ್ಟೂಡೆಂಡ್ ಆಫ್‌ದ ಇಯರ್, ಏಕ್ ಥ ವಿಲನ್, ಬ್ರದರ್ಸ್ ಚಿತ್ರಗಳಲ್ಲಿ ಸಿದ್ಧಾರ್ಥ್ ಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಸದೃಢ ದೇಹಕಾಯ, ಸುಂದರ ವದನ, ಪಾತ್ರಗಳಲ್ಲಿ ಮೈಮರೆವ ನಟನಾ ಸಾಮರ್ಥ್ಯಗಳಿಂದಾಗಿ ಸಿದ್ಧಾರ್ಥ್ ಬಾಲಿವುಡ್ನಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.
2010 ರ ಕರಣ್ ಜೊಹಾರ್ ನಿರ್ದೇಶನದ ಮೈನೇಮ್ ಈಸ್ ಖಾನ್ ಚಿತ್ರದಲ್ಲಿ ಸಿದ್ಧಾರ್ಥ್ ಸಹಾಯಕರಾಗಿ ಕೆಲಸ ಮಾಡಿದ್ದರು. ಅಂತೆಯೇ ಮಾಡೆಲಿಂಗ್ ಕ್ಷೇತ್ರದಲ್ಲೂ ಸಿದ್ಧಾರ್ಥ್ ತಮ್ಮ ಸಾಮರ್ಥ್ಯ ತೋರಿದ್ದಾರೆ. ಇನ್ನೂ ಮುಂದುವರಿದು ಕರಣ್ ಅವರ ಸ್ಟೂಡೆಂಟ್ ಆಫ್‌ದ ಇಯರ್ ಚಿತ್ರದಲ್ಲಿ ತಮ್ಮ ನಟನಾ ಸಿದ್ಧಿಯನ್ನು ಪ್ರಸ್ತುತಪಡಿಸಿದರು.

ಇನ್ನು ಚಿತ್ರದ ಉತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು. ಇಂದು ಸಿದ್ಧಾರ್ಥ್ ಬಗ್ಗೆ ನಾವು ಮಾತನಾಡಹೊರಟಿರುವುದು ದೀಪಾವಳಿಯ ದಿನದಂದು ಅವರು ಮಿಂಚಿರುವುದರ ಕುರಿತಾಗಿದೆ. ಏಕ್ತಾ ಕಪೂರ್ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಸಿದ್ಧಾರ್ಥ್ ಕಪ್ಪು ಬಣ್ಣದ ಕುರ್ತಾ ಮತ್ತು ಕ್ಲಾಸಿ ಎಂಬ್ರಾಯಿಡರಿ ವರ್ಕ್ ಇರುವಂತಹ ಪ್ಯಾಂಟ್ ಧರಿಸಿ ಮಿಂಚಿದ್ದಾರೆ. ಇನ್ನು ಕಪ್ಪು ಬಣ್ಣದಿಂದ ಕೂಡಿರುವ ನೆಹ್ರೂ ಕೋಟ್ ಅನ್ನು ಧರಿಸಿ ಹಬ್ಬದ ಕಳೆಯನ್ನು ದಿರಿಸಿನಲ್ಲಿ ಹೊರಹೊಮ್ಮಿಸಿದ್ದಾರೆ. ಅಂತೂ ಹ್ಯಾಂಡ್ಸಮ್ ಸಿದ್ಧಾರ್ಥ್ ಇನ್ನಷ್ಟು ಮುದ್ದಾಗಿ ಈ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೂ ಸಿದ್ಧಾರ್ಥ್ ಈ ಲುಕ್ ಇಷ್ಟವಾಯಿತೇ?
Read in english- Why Sidharth Malhotra Looked This Hot At Ekta Kapoor's Diwali Party



Click it and Unblock the Notifications
