Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಐಸಿಡಬ್ಲ್ಯೂ 2016: ದಿರಿಸು ಹಬ್ಬದಲ್ಲಿ ಚಿತ್ತ ಕದಡಿದ ಸೋಫಿ ಚೌದರಿ!
ಭಾರತದ ಉಡುಪುಗಳ ಹಬ್ಬ ಇಂಡಿಯನ್ ಕೌಚರ್ ವೀಕ್ ನಿನ್ನೆಯಷ್ಟೇ ಆರಂಭವಾಗಿದ್ದು ಇದಕ್ಕಾಗಿ ದೀಪಿಕಾ ಮತ್ತು ಫವಾದ್ ಮನೀಶ್ ಮಲ್ಹೋತ್ರಾ ವಿನ್ಯಾಸ ಪಡಿಸಿದ ದಿರಿಸುಗಳನ್ನು ಧರಿಸಿ ರಾಂಪ್ ಮೇಲೆ ನಡೆದಿದ್ದಾರೆ. ಮನೀಶ್ ಅವರು ವಿನ್ಯಾಸ ಪಡಿಸಿರುವ ಕೆಂಪು ಬಣ್ಣದ ಲೆಹಂಗಾದಲ್ಲಿ ದೀಪಿಕಾ ಪರ್ಷಿಯನ್ ರಾಣಿಯಂತೆ ಕಂಗೊಳಿಸುತ್ತಿದ್ದರು.

ಇನ್ನು ಫವಾದ್ ಅವರು, ವೆಲ್ವೆಟ್ ಶೇರ್ವಾನಿಯಲ್ಲಿ ಹೆಜ್ಜೆ ಹಾಕಿದ್ದು, ಪ್ರೇಕ್ಷಕರನ್ನು ಇವರಿಬ್ಬರೂ ಮಂತ್ರಮುಗ್ಧಗೊಳಿಸಿದ್ದಾರೆ. ಇದರ ಜೊತೆಗೆ ಹಾಡುಗಾರ್ತಿ ವಿಜೆ ಸೋಫಿ ಈವೆಂಟ್‌ಗೆ ರಂಗು ತುಂಬಿದ್ದು, ಹೃದಯಬಡಿತವನ್ನು ಹೆಚ್ಚಿಸುವಂತೆ ಮಾಡಿದ್ದಾರೆ. ಮನೀಶ್ ಮಲ್ಹೋತ್ರಾ ಅವರ ಆರಂಭಿಕ ಪ್ರದರ್ಶವನ್ನು ಸೋಫಿ ರಂಗಾಗಿಸಿದ್ದಾರೆ.
ಆಕರ್ಷಕ ದಿರಿಸನ್ನು ಧರಿಸಿ ಸೋಫಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದು ಪ್ಲಂಗಿಂಗ್ ನೆಕ್‌ಲೈನ್ ಅವರ ದಿರಿಸು ಒಳಗೊಂಡಿತ್ತು. ಇದರ ರಾಯಲ್ ವೈನ್ ಬಣ್ಣ ನಿಜಕ್ಕೂ ದಿರಿಸಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಬೇರೆ ಬೇರೆ ಬಣ್ಣಗಳನ್ನು ಗೌನ್ ಪಡೆದುಕೊಂಡಿದ್ದು ಸೋಫಿಯವರು ಇಂಚಿನಷ್ಟು ಉದ್ದವಾಗಿರುವಂತೆ ಕಂಡಿದ್ದಾರೆ.
ಎಮರಾಲ್ಡ್ ನೆಕ್ಲೇಸ್ ಅನ್ನು ಸೋಫಿ ಗೌನ್‌ಗಾಗಿ ಧರಿಸಿದ್ದು ಇಳಿಬಿಟ್ಟ ಕೂದಲಿನ ಶೃಂಗಾರವನ್ನು ಮಾಡಿಕೊಂಡು ಆದಷ್ಟು ಸರಳ ಮತ್ತು ಆಕರ್ಷಕ ಮೇಕಪ್‌ನಲ್ಲಿ ನಮ್ಮನ್ನು ಸೆರೆಹಿಡಿದಿದ್ದಾರೆ.



Click it and Unblock the Notifications


