Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಫ್ಲೋರಲ್ ಗೌನ್‌ನಲ್ಲಿ ಮಿಂಚಿದ ಕರೀನಾ ಕಪೂರ್
ಸೆಲೆಬ್ರಿಟಿಗಳ ಸ್ಟೈಲ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಅವರ ಕೇಶವಿನ್ಯಾಸ, ಹಾಕುವ ಉಡುಗೆ ತೊಡುಗೆಗಳು ಹೀಗೆ ಅವರ ಅನುಕರಣೆಯನ್ನು ದೈನಂದಿನ ಜೀವನದಲ್ಲಿ ನಾವು ಮಾಡುತ್ತಿರುತ್ತೇವೆ. ಇನ್ನು ನಿಮ್ಮಷ್ಟದ ನಟಿ ಅಥವಾ ನಟಿ ಆಯ್ದುಕೊಂಡ ಫ್ಯಾಷನ್ ಅನ್ನು ಅನುಕರಿಸುವವರೂ ಕೂಡ ಕಡಿಮೆ ಇಲ್ಲ. ಇಂದಿನ ಲೇಖನದಲ್ಲಿ ಕೂಡ ಬಾಲಿವುಡ್‌ನ ಚೆಂದದ ತಾರಾ ಜೋಡಿಯ ಸ್ಟೈಲಿಶ್ ನೋಟದ ಕುರಿತು ನಾವು ಹೇಳಲಿದ್ದು ಅವರ ಫ್ಯಾಷನ್ ಮಂತ್ರ ನಮಗೆ ಏಕೆ ಇಷ್ಟವಾಯಿತು ಎಂಬುದನ್ನು ನಾವು ತಿಳಿಸಲಿದ್ದೇವೆ.
ಇಂಡಿಯನ್ ಬಿಲಿಯನ್ ಏಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ನಡೆಸಿದ ಮೆಗಾ ಈವೆಂಟ್‌ನಲ್ಲಿ ಬಾಲಿವುಡ್ ಹಾಟ್ ತಾರಾ ಜೋಡಿಗಳಾದ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಮಿಂಚಿದ್ದಾರೆ. ಇವರಿಬ್ಬರ ದಿರಿಸುಗಳು ಕಣ್ಣಿಗೆ ಮುದ ನೀಡುವಂತಿದ್ದು ನಮ್ಮನ್ನು ಬೆಸ್ತು ಬೀಳಿಸಿದ್ದಂತೂ ಸುಳ್ಳಲ್ಲ.

ಕರೀನಾ ಪ್ರಿಂಟ್ ಉಳ್ಳ ಉದ್ದನೆಯ ಗೌನ್ ಅನ್ನು ಧರಿಸಿ ವಿಶಿಷ್ಟವಾಗಿ ಕಾಣುತ್ತಿದ್ದರು. ಈ ಗೌನ್ ಕುತ್ತಿಗೆಯ ವಿನ್ಯಾಸ ಕೂಡ ಮನಸೆಳೆಯುವಂತಿದ್ದು ಕರೀನಾ ಇದರಲ್ಲಿ ಮನಸೆಳೆಯುವಂತಿದ್ದರು. ಸನ್ ಗ್ಲಾಸ್‌ನೊಂದಿಗೆ ತಮ್ಮ ನೋಟಕ್ಕೆ ಇನ್ನಷ್ಟು ರಂಗು ತುಂಬಿದ ಕಪೂರ್ ಕುಡಿ ಅವರ ಮೇಕಪ್ ಅಂತೂ ಕಣ್ಮನ ಸೆಳೆಯುವಂತಿತ್ತು ಎಂಬುದು ಅವರ ನೋಟದಿಂದಲೇ ನಿಮಗೆ ಕಾಣಬಹುದಾಗಿದೆ. ಇನ್ನು ಪತ್ನಿಗೆ ಜೊತೆಯಾಗಿ ಸೈಫ್ ಕೂಡ ತಮ್ಮ ಸ್ಟೈಲ್‌ನಲ್ಲಿ ಕೊರತೆಯನ್ನು ಉಂಟುಮಾಡಲಿಲ್ಲ ಎಂದೇ ಹೇಳಬಹುದು. ಬೂದು ಬಣ್ಣದ ಟೂ ಪೀಸ್ ಸೂಟ್‌ನಲ್ಲಿ ಪತ್ನಿಯ ಕೈ ಹಿಡಿದು ಅವರು ಫೋಸ್ ಕೊಟ್ಟ ರೀತಿಯಂತೂ ಅಬ್ಬಾ!! ಅದ್ಭುತವಾಗಿತ್ತು ಎಂದೇ ಹೇಳಬಹುದು.



Click it and Unblock the Notifications
