Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಬಲ್ ಶೇಡ್ ಸೀರೆಯಲ್ಲಿ ಮೆರುಗು ತೋರಿದ ವಿದ್ಯಾ ಬಾಲನ್
ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರ್ ಎಂಬ ಹಾಡಿನಂತೆ ಸೀರೆಯಲ್ಲಿ ನಾರಿಯರ ಸೊಬಗು ಬೇರೆ ಎಲ್ಲಾ ದಿರಿಸುಗಳಿಗಿಂತಲೂ ತುಸು ವಿಶಿಷ್ಟವಾಗಿ ಕಾಣುತ್ತದೆ ಮತ್ತು ಸೀರೆ ಉಟ್ಟ ನಾರಿಗೆ ಎಂದಿಗೂ ಮನ್ನಣೆ ಪ್ರಶಂಸೆ ತುಸು ಅಧಿಕವೇ. ಹೇಳಿ ಕೇಳಿ ಬಾಲಿವುಡ್‌ನ ಥಳುಕು ಬಳುಕಿನ ಲೋಕದಲ್ಲಿ ಫ್ಯಾಷನ್ ಅಂಶ ಕೊಂಚ ಜಾಸ್ತಿಯೇ ಆಧುನಿಕ ವಸ್ತ್ರ ವಿನ್ಯಾಸಕ್ಕೆ ಪ್ರಾಮುಖ್ಯತೆ ಕೊಡುವ ಇಲ್ಲಿನ ನೀರೆಯರು ಸೀರೆ ಎಂದರೆ ಮೂಗು ಮುರಿಯುವುದೇ ಹೆಚ್ಚು.

ಆದರೂ ಸೀರೆಯನ್ನೇ ಹೆಚ್ಚು ಇಷ್ಟಪಡುವ ಸಿನಿ ತಾರೆಯರು ಮಾತ್ರ ಈ ಮಾತನ್ನು ಅಲ್ಲಗೆಳೆಯುತ್ತಾರೆ. ಇತರ ದಿರಿಸುಗಳಂತೆ ಸೀರೆ ಕೂಡ ದಿರಿಸುಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅದನ್ನು ತೋರ್ಪಡಿಸುವ ರೀತಿಯಿಂದ ನಾವು ಜನಮನ್ನಣೆ ಗಳಿಸಬಹುದು ಎಂಬ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ. ಈ ಸಾಲಿಗೆ ಸೇರುವ ಸೀರೆಯನ್ನೇ ಹೆಚ್ಚು ಇಷ್ಟಪಡುವ ನಟಿಯಾಗಿದ್ದಾರೆ ವಿದ್ಯಾಬಾಲನ್. ಯಾವುದೇ ಕಾರ್ಯಕ್ರಮದಲ್ಲೂ ತಮ್ಮ ಅಂದ ಚೆಂದದ ಸೀರೆಯಿಂದಲೇ ಈಕೆ ನಾಲ್ಕು ಜನರಲ್ಲಿ ಎದ್ದುಗಾಣುತ್ತಾರೆ ಮತ್ತು ಸ್ಟೈಲಿಶ್ ಆಗಿ ತಮ್ಮನ್ನು ಕಾಣಿಸಿಕೊಳ್ಳುತ್ತಾರೆ.
ವಿದ್ಯಾರ ಸೀರೆ ಆಯ್ಕೆಗಳಲ್ಲಿ ಹತ್ತಿ, ಬನಾರಸ್, ಶಿಫಾನ್ ಮತ್ತು ರೇಷ್ಮೆ ಸೀರೆಗಳಿಗೂ ಪ್ರಾಮುಖ್ಯತೆ ಇದೆ. ತಮ್ಮ ಅನನ್ಯ ಸೀರೆ ಆಯ್ಕೆಗಳಿಂದಲೇ ಆಕೆ ಬಾಲಿವುಡ್ ಅಂಗಳದಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ತಾನೇ ವಿದ್ಯಾ ಬೇಸಿಗೆ ಸಂಗ್ರಹಣೆಯ ಸೀರೆಗಳನ್ನು ಸಾದರ ಪಡಿಸಿದ್ದಾರೆ. ಡಬಲ್ ಶೇಡ್ ಇರುವ ಕಂದು ಬಣ್ಣದ ಸೀರೆಗಳನ್ನು ವಿದ್ಯಾ ಉಟ್ಟಿದ್ದು ಸೀರೆ ಆಕರ್ಷಕ ವಿನ್ಯಾಸಗಳನ್ನು ಪಡೆದುಕೊಂಡಿದೆ.
ಮೂರು ಬಣ್ಣಗಳ ಸ್ಕೂಪ್ ಕುತ್ತಿಗೆ ವಿನ್ಯಾಸವುಳ್ಳ ರವಿಕೆಯನ್ನು ಈ ಸೀರೆಗಾಗಿ ಅವರು ತೊಟ್ಟಿದ್ದರು. ಸೀರೆಗೆ ಇನ್ನಷ್ಟು ಸಾಂಪ್ರದಾಯಕ ನೋಟವನ್ನು ನೀಡುವುದಕ್ಕಾಗಿ ಬಲಕೈಗೆ ಕೆಂಪು ಬಳೆಗಳನ್ನು ಅವರು ಧರಿಸಿಕೊಂಡಿದ್ದರು. ಚಿನ್ನದ ಜುಮುಕಿ ಮತ್ತು ಬೈತಲೆ ಕೇಶಶೃಂಗಾರದೊಂದಿಗೆ ಸೀರೆಯ ಮೆರುಗನ್ನು ವಿದ್ಯಾ ಇನ್ನಷ್ಟು ಹೆಚ್ಚಿಸಿದ್ದಾರೆ. ನಮಗಂತೂ ವಿದ್ಯಾರ ಸೀರೆ ನೋಟ ಇಷ್ಟವಾಗಿದೆ. ನಿಮಗೂ ಇದು ಇಷ್ಟವಾಯಿತು ಅಲ್ಲವೇ?



Click it and Unblock the Notifications

