Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಣ್ಮನ ಸೆಳೆದ ದಿಲ್‌ವಾಲೆ ಹುಡುಗಿ ಕಾಜೋಲ್
"ನಾ ಜಾನೆ ಮೆರೇ ದಿಲ್ ಕೋ ಕ್ಯಾ ಹೋಗಯಾ" ಎಂದು ಅಂದು ಇಪ್ಪತ್ತು ವರ್ಷದ ಹಿಂದೆ ಆ ಹುಡುಗಿಗಾಗಿ ಹಾಡಿದ ಶಾರೂಕ್, ಅದೇ ಹುಡುಗಿ!! ಈಗ ದಿಲ್‌ವಾಲೆ ಅನ್ನುವ ಚಿತ್ರದಲ್ಲಿ ಬಾಲಿವುಡ್‌ನ ಹಾಟ್ ಕೇಕ್ ವರುಣ್ ದವನ್ ಜೊತೆಗೆ ಕಾಣಿಸಿಕೊಳ್ಳುತ್ತಾ ಇದ್ದಾಳೆ. ಯಾರೂ ಹುಡುಗಿ ಎಂದು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ, ಹೌದು ಆಕೆಯೇ ಕಾಜೋಲ್. ನಮ್ಮ ಪಾಲಿಗೆ ಆಕೆ ಯಾವತ್ತಿಗೂ ದಿಲ್ ಕದ್ದ ದಿಲ್‌ವಾಲೆ ಹುಡುಗಿ.
ವರುಣ್ ದವನ್ ಮತ್ತು ಕಾಜೋಲ್ ಇಬ್ಬರೂ ಸೇರಿ ಮೊದಲ ಬಾರಿಗೆ ಒಂದು ಚಲನಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇದಕ್ಕಾಗಿ ಇಡೀ ಬಾಲಿವುಡ್ ಏಕೆ, ಚಿತ್ರ ಪ್ರೇಮಿಗಳು ಎಲ್ಲರೂ ಕಾಯುತ್ತಿದ್ದಾರೆ. ಕಾಜೋಲ್ ಮತ್ತೆ ಬೆಳ್ಳಿತೆರೆಗೆ ಬಂದಿರುವುದು, ಕಪ್ಪನೆಯ ಮೋಡಗಳ ನಡುವೆ ಮಿಂಚು ಮೂಡಿದಂತೆ ಭಾಸವಾಗುತ್ತಿದೆ. ಆಕೆ ಅದ್ಭುತ ನಟಿ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಜೊತೆಗೆ ಈ ಕೃಷ್ಣ ಸುಂದರಿ ತನ್ನ ಸ್ಟೈಲ್‌ನಿಂದ ಎಂತಹವರನ್ನೂ ಸಹ ಮೋಡಿ ಮಾಡುತ್ತಾಳೆ. ಅದ್ಧೂರಿಯ ಜೊತೆಗೆ, ಕ್ಲಾಸ್ಸಿಯಾಗಿರುವ ಲುಕ್ ಅನ್ನು ಹೇಗೆ ಪಡೆದುಕೊಳ್ಳಬೇಕು ಎಂದು ಈಕೆಗೆ ಚೆನ್ನಾಗಿ ಗೊತ್ತು. ಅದರಲ್ಲೂ ಇದನ್ನು ಪ್ರವಾಸ ಮಾಡುವಾಗ ಸಹ ಹೇಗೆ ಬಳಸಿಕೊಳ್ಳಬೇಕು ಎಂಬ ಗುಟ್ಟು ಚೆನ್ನಾಗಿ ಗೊತ್ತು. ನಾವು ಇತ್ತೀಚೆಗೆ ಆಕೆಯನ್ನು ದಿಲ್‌ವಾಲೆ ಶೂಟಿಂಗ್‌ನಿಂದ ಬರುವಾಗ ಕಂಡೆವು, ಆ ಲುಕ್‌ನಲ್ಲಿ ಆಕೆ ನಮಗೆ ಮೋಡಿ ಮಾಡುವಂತೆ ಕಾಣಿಸಿಕೊಂಡಿದ್ದಳು. ಬನ್ನಿ ಆಕೆಯ ಆ ಟ್ರಾವೆಲ್ ಲುಕ್ ಕುರಿತಾಗಿ ನೀವು ಸಹ ತಿಳಿದುಕೊಳ್ಳಿ.

ಗ್ರೇ ಟಾಪ್ ಮತ್ತು ಟ್ರೈಬಲ್ ಪ್ರಿಂಟ್ ಪ್ಯಾಂಟ್‌ಗಳು
ಈ ಲುಕ್‌ಗಾಗಿ ಆಕೆ ಮಿಕ್ಸ್‌ಡ್ ಡಾರ್ಕ್ ಗ್ರೇ ಟಾಪ್ ಅನ್ನು ಆಯ್ಕೆ ಮಾಡಿಕೊಂಡಿದ್ದಳು. ಈ ಬೂದು ಬಣ್ಣವು ಆಕೆಯ ಮೈಬಣ್ಣಕ್ಕೆ ಚೆನ್ನಾಗಿ ಒಪ್ಪುತ್ತಿತ್ತು. ಇದಕ್ಕೆ ಹೊಂದಿಕೊಳ್ಳುವಂತಹ ಟ್ರೈಬಲ್ ಪಲ್ಲಜೊ ಪ್ಯಾಂಟ್ ಅನ್ನು ಆಕೆ ಧರಿಸಿದ್ದಳು. ಇದು ಆಕೆಗೆ ಚಂದ ಎನ್ನುವುದಕ್ಕಿಂತ ಚಿಂದಿ ಉಡಾಯಿಸುವ ಲುಕ್ ಅನ್ನು ನೀಡಿತ್ತು.
ಸ್ಕಾರ್ಪ್ ಮತ್ತು ಏವಿಯೇಟರ್ ಸನ್‌ಗ್ಲಾಸ್
ವಾರೆವಾ, ಕಾಜೊಲ್‌ಗೆ ಗೊತ್ತು, ಒಂದು ತಿಳಿ ಬಣ್ಣದ ಸ್ಕಾರ್ಫ್ ಜೊತೆಗೆ ಗಾಢ ಬಣ್ಣದ ಸನ್‌ಗ್ಲಾಸ್ ಜೊತೆಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು. ಏವಿಯೇಟರ್ ಸನ್‌ಗ್ಲಾಸ್ ಮತ್ತು ಸ್ಕಾರ್ಫ್ ಒಂದಕ್ಕೊಂದು ಬೊಂಬಾಟಾಗಿ ಹೊಂದಿಕೊಂಡಿದ್ದವು.
ಬ್ರೌನ್ ಬ್ಯಾಗ್
ದೊಡ್ಡ ಗಾತ್ರದ ಬ್ಯಾಗ್ ಅಥವಾ ಟ್ರಾವೆಲ್ ಬ್ಯಾಗ್ ಇಲ್ಲದೆ ಪ್ರವಾಸವು ಅಪೂರ್ಣವೇ ಆಗುತ್ತದೆ. ಕಾಜೋಲ್ ಕಂದು ಬಣ್ಣದ ಬಕೆಟ್ ಬ್ಯಾಗ್‌ನ ಜೊತೆಗೆ ನಮಗೆ ಕಾಣಿಸಿಕೊಂಡಳು. ಅದು ಸಹ ನೋಡಲು ಸ್ಟೈಲಿಶ್ ಆಗಿ ಕಾಣಿಸುತ್ತಿತ್ತು.
ವೆಡ್ಜ್‌ಗಳು
ಪ್ರವಾಸ ಮಾಡುವಾಗ ನಿಮಗೆ ಉತ್ತಮವಾದ ಪಾದರಕ್ಷೆಗಳನ್ನು ಧರಿಸದೆ ಇದ್ದಲ್ಲಿ, ಅದರಿಂದ ನಿಮಗೆ ಎಷ್ಟು ಅನಾನುಕೂಲವಾಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಕಾಜೊಲ್ ಅಂತಹ ಒಂದು ಉತ್ತಮ ಪಾದರಕ್ಷೆಯನ್ನು ಆರಿಸಿಕೊಂಡಿದ್ದಳು. ಒಟ್ಟಾರೆಯಾಗಿ ಪ್ರವಾಸಕ್ಕೆ ಹೋದಾಗಲೂ ಸಹ ಪ್ರಯಾಸ ಪಡದೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಉತ್ತಮ ಲುಕ್ ಅನ್ನು ಪಡೆಯುವುದು ಹೇಗೆ ಎಂದು ಕಾಜೋಲ್ ನಿದರ್ಶನ ಸಮೇತ ತೋರಿಸಿಕೊಟ್ಟಿದ್ದಾಳೆ. ಈ ಲುಕ್ ನಿಮಗೆ ಇಷ್ಟವಾಯಿತಾ? ಇದೀಗ ನಿಮ್ಮ ಸರದಿ ಇದರ ಕುರಿತಾಗಿ ನಮಗೆ ನಿಮ್ಮ ಅಭಿಪ್ರಾಯ ತಿಳಿಸಿ.



Click it and Unblock the Notifications

