Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇದು ಬಾಲಿವುಡ್ ತಾರೆಯರ ಮನಸೆಳೆಯುವ ಫ್ಯಾಷನ್ ಝಲಕ್!
ಬಾಲಿವುಡ್ ತಾರೆಯರು ಎತ್ತ ಹೋದರೂ ಜನರ ಗಮನವನ್ನು ಸೆಳೆಯುತ್ತಾರೆ. ಅಂತೆಯೇ ಪ್ರತಿದಿನವೂ ಅವರ ಉಡುಗೆ ತೊಡುಗೆಗಳು ಸಂದರ್ಭಾನುಸಾರ ವೈವಿಧ್ಯಮಯವಾಗಿರುತ್ತವೆ.
ಈ ವಾರದಲ್ಲಿ ಖ್ಯಾತ ಬಾಲಿವುಡ್ ತಾರೆಯರ ಒಡನಾಟದಲ್ಲಿ ನಮ್ಮ ಪ್ರತಿನಿಧಿಗಳು ಗಮನಿಸಿದ ಸಂಗತಿಗಳ ಸಂಗ್ರಹವನ್ನು ಇಂದು ನಿಮ್ಮ ಮುಂದಿಡಲಾಗುತ್ತಿದೆ. ಇದರಲ್ಲಿನ ಪ್ರಮುಖ ಮಾಹಿತಿಗಳು ನಿಮ್ಮ ನೆರವಿಗೆ ಮುಂದೆ ಬರಬಹುದು. ಆದ್ದರಿಂದ ಇದನ್ನು ಬರೆದಿಟ್ಟುಕೊಳ್ಳಲು ನೋಟ್ ಪ್ಯಾಡ್ ಒಂದನ್ನು ಸಿದ್ಧವಾಗಿರಿಸಿಕೊಳ್ಳಲು ಮರೆಯದಿರಿ.

ಪ್ರಿಯಾಂಕಾ
ಪ್ರಿಯಾಂಕಾರವರು ಪಟ್ಟೆಪಟ್ಟೆ ಶರ್ಟ್ ಮತ್ತು ಜೀನ್ಸ್ ನೊಂದಿಗೆ ಹೈ ಹೀಲ್ಸ್ ಧರಿಸಿಯೂ ಕೆಲಸ ಮಾಡುತ್ತಿರುವುದು ಒಂದು ಪ್ರೇರಣೆಯಾಗಿದೆ.
ಕರಿಶ್ಮಾ ಕಪೂರ್
ಕರಿಶ್ಮಾ ಕಪೂರ್ ಈ ವಾರ ತಾವು ಕಲಿತ ಶಾಲೆಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ಅವರು ಗಿಡ್ಡವಿರುವ ಕಪ್ಪು ದಿರಿಸು ಧರಿಸಿದ್ದು ಇದರೊಂದಿಗೆ ಕಪ್ಪು ಬಣ್ಣದ್ದೇ ಆದ ಪುಟ್ಟ ಪರ್ಸು ಅವರ ವಯಸ್ಸನ್ನು ಕುಂದಿಸಿತ್ತು.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಈ ವಾರ ಮಿ. ಸೆಲ್ಫ್ ಪೋರ್ಟ್ರೈಟ್ ಎಂಬ ವಿನ್ಯಾಸಗಾರ ಸಂಸ್ಥೆ ನಿರ್ಮಿಸಿದ ಕಪ್ಪು ದಿರಿಸು ಧರಿಸಿದ್ದು ಅಂಚುಗಳಲ್ಲಿ ಕಪ್ಪು ಲೇಸ್ ಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿತ್ತು. ಆಳ ಕುತ್ತಿಗೆಯ ಪೆಪ್ಲಂ ಮೇಲುಡುಗೆ ಅವರ ದೇಹ ಸೌಂದರ್ಯವನ್ನು ಇನ್ನಷ್ಟು ಪ್ರಖರವಾಗಿಸಿತ್ತು.
ಆಲಿಯಾ ಭಟ್
ಸಾದಾ ಬೂದುಬಣ್ಣದ ಸರಳ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ತೊಟ್ಟು ಸರಳ ಶೂ, ನೆರಿಗೆಯ ಜೋಳಿಗೆಯಂತಹ ಚೀಲ ಮತ್ತು ಕಪ್ಪು ಕನ್ನಡಕ ಮಾತ್ರ ಧರಿಸಿ ಯಾವುದೇ ಆಭರಣದ ಹೊರತಾಗಿಯೂ ಆಲಿಯಾ ಭಟ್ ಚಿಕ್ಕ ಹುಡುಗಿಯಂತೆ ತೋರುತ್ತಿದ್ದಾರೆ.
ಶಿಲ್ಪಾ ಶೆಟ್ಟಿ
ಲ್ಯಾವಿಶ್ ಆಲಿಸ್ ಎಂಬ ಸಂಸ್ಥೆಯ ವಿನ್ಯಾಸದ ಪ್ರಖರ ಕಿತ್ತಳೆ ಬಣ್ಣದ ಉಡುಗೆ ತೊಟ್ಟ ಶಿಲ್ಪಾ ಶೆಟ್ಟಿಯವರು ಅದ್ಬುತವಾಗಿ ಗೋಚರಿಸುತ್ತಿದ್ದರು. ಅತಿ ಕಡಿಮೆ ಹೊಲಿಗೆ ಇರುವ ಜಪಾನಿ ಶೈಲಿಯ ಕಿಮೊನೋ ಉಡುಗೆಯನ್ನು ಬಿಗಿಯಾಗಿಡಲು ತೆಳುವಾದ ಲೋಹದ ಪಟ್ಟಿಯನ್ನು ಬೆಲ್ಟ್ ರೂಪದಲ್ಲಿ ಧರಿಸಿದ್ದು ಆಕರ್ಷಕವಾಗಿತ್ತು.
ಕಂಗನಾ
ಸಚಿನ್ ಮತ್ತು ಬಾಬಿಯವರ ವಿನ್ಯಾಸದ ಸ್ಯಾಟಿನ್ ಬಿಳಿಯ ಬಣ್ಣದಲ್ಲಿ ನೀಲಿ ಹೂವುಗಳೇ ಮೈವೆತ್ತಂತಿದ್ದ ಸಾಧಾರಣ ಗಿಡ್ಡದ ಉಡುಪನ್ನು ತೊಟ್ಟ ಕಂಗನಾ ರೌತ್ ಮಳೆಗಾಲದಲ್ಲಿ ಬಿಸಿಲಿನ ಝಳವನ್ನು ಎದುರಿಸಲು ಸಿದ್ಧರಾಗಿರಲು ಕಪ್ಪು ಕನ್ನಡಕ ತೊಟ್ಟು ಬಂದಂತಿದೆ.
ಕಲ್ಕಿ
ಕೈಮಗ್ಗದ ರೇಷ್ಮೆ ಸೀರೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿಯೋ ಏನೋ ಕಲ್ಕಿಯವರು ರಿತು ಕುಮಾರ್ ಬನಾರಸಿ ಸಿಲ್ಕ್ ಸೀರೆಗಳ ಭಂಡಾರದಿಂದ ಗುಲಾಬಿ ಬಣ್ಣದ ಆಕರ್ಷಕ ಸೀರೆಯೊಂದನ್ನು ಆಯ್ದು ಇದಕ್ಕೆ ವಿರುದ್ಧ ಬಣ್ಣದ ಕಾಲರ್ ಇರುವ ಹತ್ತಿಯ ಅರ್ಧತೋಳಿನ ಶರ್ಟ್ ತೊಟ್ಟಿದ್ದು ಭಿನ್ನರೂಪದಲ್ಲಿ ಕಂಗೊಳಿಸಿದರು.
ಜ್ಯಾಕ್ವೆಲಿನ್ ಫೆರ್ನಾಂಡಿಸ್
ಪ್ರತ್ಯೂಷಾ ಗಾರಿಮೆಲ್ಲಾ ವಿನ್ಯಾಸಕಾರರ ಆಯ್ಕೆಯ ಪ್ರಖರ ಚಿನ್ನದ ಜರಿಯೇ ತುಂಬಿ ನೆಲ ಗುಡಿಸುತ್ತಿದ್ದ ಭಾರೀ ಕೆಳವಸ್ತ್ರವನ್ನು ತೊಟ್ಟ ಜ್ಯಾಕ್ವೆಲಿನ್ ಫೆರ್ನಾಂಡಿಸ್ ಇದರೊಂದಿಗೆ ಸರಳವಾದ ಅರೆಪಾರದರ್ಶಕ ಪೂರ್ಣ ತೋಳಿನ ಮತ್ತು ಅಚ್ಚ ಬಿಳಿಯ ಮೇಲಂಗಿ ಧರಿಸಿದ್ದು ಕೇವಲ ಉಂಗುರ ಮತ್ತು ಚಿನ್ನದ ಕಿವಿಯೋಲೆಗಳನ್ನು ಮಾತ್ರ ಧರಿಸಿದ್ದರು.
ಜಾಕ್ವೆಲಿನ್
ಭಾರೀ ಸಾಂಪ್ರಾದಾಯಿಕ ದಿರಿಸಿನ ಬಳಿಕ ಜಾಕ್ವೆಲಿನ್ ರವರು ತಮ್ಮ ಉಡುಗೆಯನ್ನು ಸಂಪೂರ್ಣವಾಗಿ ಬದಲಿಸಿ ಮ್ಯಾಡಿಸನ್ ಆನ್ ಪೆದ್ದಾರ್ ರವರ ವಿನ್ಯಾಸದ ಬಣ್ಣದ ನೀಳ ಪಟ್ಟೆಗಳಿದ್ದ ಬಿಳಿಯ ದಿರಿಸನ್ನು ಧರಿಸಿದ್ದರು. ಕಪ್ಪು ಕನ್ನಡಕ ಮತ್ತು ಅಲ್ಪ ಆಭರಣಗಳನ್ನು ಹೊಂದಿದ್ದ ಅವರು ಹೀರೋವನ್ನು ಮಾತ್ರ ಡೇಟ್ ಮಾಡಿ ಎಂದು ಬರೆದಿದ್ದ ಟೀ ಶರ್ಟ್ ಧರಿಸಿದ್ದು ಯಾರಿಗೆ ಈ ಸಂದೇಶ ನೀಡುತ್ತಿದ್ದಾರೆ ಎಂದೇ ಗೊತ್ತಾಗದಂತಿತ್ತು.



Click it and Unblock the Notifications








