ಸರಳ ನೋಟದಲ್ಲಿ ಮನಗೆದ್ದ ಬಾಲಿವುಡ್ ಕ್ವೀನ್ ಕಂಗನಾ

By: Jaya subramanya
Subscribe to Boldsky

ಬಾಲಿವುಡ್‌ನ ಕ್ವೀನ್ ಕಂಗನಾ ರನೌತ್, ಇದೀಗ ಹೆಚ್ಚು ಬೇಡಿಕೆಯ ನಟಿ ಎಂದೇ ಖ್ಯಾತರಾಗಿದ್ದಾರೆ. ಸಾಲು ಸಾಲಾಗಿ ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದಿರುವ ಈ ಗುಂಗುರು ಕೂದಲಿನ ಚೆಲುವೆಗೆ ಅದೃಷ್ಟದ ಬಾಗಿಲು ತೆರೆದಿದೆ. ಪ್ರತಿಯೊಂದು ಜಾಹೀರಾತು ಈವೆಂಟ್‌ನಲ್ಲಿ ಕೂಡ ಕಂಗನಾ ಹೆಸರೇ ರಾರಾಜಿಸುತ್ತಿದೆ.

ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಕಂಗನಾ ಅತ್ಯದ್ಭುತ ದಿರಿಸಿನೊಂದಿಗೆ ಬಂದಿದ್ದರು. ಪೀಚ್ ಮತ್ತು ಸಿಲ್ವರ್ ಬಣ್ಣದ ಲೆಹೆಂಗಾವನ್ನು ಕಂಗನಾ ಧರಿಸಿದ್ದರು. ಹೊಳೆಯುವ ಲೆಹಂಗಾವು ಸಾಂಪ್ರದಾಯಿಕ ನೋಟವನ್ನು ಒಳಗೊಂಡಿದ್ದು ಇದು ಎಲ್ಲರ ಮನಸ್ಸನ್ನೂ ಕದಿಯುತ್ತಿದ್ದುದಂತೂ ನಿಜ. 

Kangana’s

ನೀಡಲ್ ಡಸ್ಟ್‌ನ ಜೂತಿಗಳನ್ನು ಲೆಹೆಂಗಾದೊಂದಿಗೆ ಕಂಗನಾ ಧರಿಸಿದ್ದರು. ವಿವಾಹದ ನೋಟಕ್ಕೆ ಇದು ಅತ್ಯದ್ಭುತ ಕಾಂಬಿನೇಷನ್ ಎಂದೆನಿಸಿತ್ತು. ಜೈಪುರ್ ಜೆಮ್ಸ್‌ನ ಆಭರಣಗಳನ್ನು ಕಂಗನಾ ವಿವಾಹ ಕಾರ್ಯಕ್ರಮಕ್ಕಾಗಿ ಲೆಹೆಂಗಾದೊಂದಿಗೆ ಧರಿಸಿದ್ದರು.

ಸರಳವಾದ ಮೇಕಪ್‌ನಿಂದ ಕಂಗನಾ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಆಕೆಯ ದಿರಿಸು ಮತ್ತು ಆಕೆ ಅದನ್ನು ನೀಟಾಗಿ ಪ್ರಸ್ತುತಪಡಿಸಿದ್ದು ನಮ್ಮೆಲ್ಲರ ಮನಕ್ಕೆ ಆನಂದನವನ್ನು ನೀಡಿದೆ. 

Kangana’s
Kangana’s
Kangana’s
Kangana’s
Kangana’s
English summary

To Love Or Not! Kangana’s Latest Look

Kangana Ranaut was spotted at an event wearing a glamorous lehenga by Raw Mango. The ever-so-beautiful Kangana carried the wedding-party look with lots of elegance as she sported the peach and silver lehenga. The outfit was a sheer combination of summery and ethnic look and we totally loved it.She wore a pair of jootis from Needle Dust which perfectly balanced the 'shaadi party' look.
Story first published: Tuesday, June 6, 2017, 23:44 [IST]
Subscribe Newsletter