ಚಿತ್ತಾರ ವರ್ಣದ ಸೀರೆಯಲ್ಲಿ ಸುಂದರಿ ವಿದ್ಯಾಬಾಲನ್

By: jaya subramanya
Subscribe to Boldsky

ಬಿರು ಬೇಸಿಗೆಯಲ್ಲೂ ಬಾಲಿವುಡ್ ಅಂಗಳದಲ್ಲಿ ಸಿನಿಮಾ ಪ್ರಚಾರಕ್ಕೇನೂ ತೊಂದರೆ ಆದಂತಿಲ್ಲ. ಏಕೆಂದರೆ ಸೋನಾಕ್ಷಿ ಸಿನ್ಹಾ, ವಿದ್ಯಾಬಾಲನ್ ಮತ್ತು ಶ್ರದ್ಧಾ ಕಪೂರ್ ತಮ್ಮ ಚಿತ್ರಗಳನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ವಿದ್ಯಾ ಬಾಲನ್ ವಿಷಯಕ್ಕೆ ಬಂದಾಗ ಅವರ ತರೇಹಾವಾರಿ ಸೀರೆ ಉಡುವಿಕೆ ನಮ್ಮ ಮನಸ್ಸನ್ನು ಸೆಳೆಯುತ್ತದೆ. 

Vidya Balan
 

ಸೀರೆಯಲ್ಲೂ ಫ್ಯಾಷನ್ ಪ್ರಿಯತೆಯನ್ನು ತೋರ್ಪಡಿಸುವ ಒಬ್ಬಾಕೆ ವಿದ್ಯಾ ಬಾಲನ್ ಆಗಿದ್ದಾರೆ. ಯಾವುದೇ ಸೀರೆ ಇರಲಿ ಅದನ್ನು ಉಡುವ ರೀತಿಯಿಂದಲೇ ಹೆಣ್ಣು ಮಕ್ಕಳ ಮನವನ್ನು ಅವರು ಕದ್ದುಬಿಡುತ್ತಾರೆ. ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿದ್ಯಾ ಆಯ್ದುಕೊಂಡಿದ್ದು ಚಂದೇರಿ ಸೀರೆಯಾಗಿದೆ.

Vidya Balan
  

ಕನ್ನಿಕಾ ಜೈನ್ ಇದನ್ನು ವಿನ್ಯಾಪಡಿಸಿದ್ದಾರೆ. ಬಿಳಿ ಸೀರೆಯನ್ನು ಬೇಸಿಗೆ 2017 ರ ಕನ್ನೇಲಿ ಸ್ಪ್ರಿಂಗ್‌ನಿಂದ ಆಯ್ದುಕೊಳ್ಳಲಾಗಿದೆ. ಈ ಸುಂದರವಾದ ಸೀರೆಗೆ ಮನಸೋಲದವರು ಯಾರಿದ್ದಾರೆ ಹೇಳಿ? ಅಂತಹ ಅದ್ಭುತ ಚಿತ್ತಾರದ ಕೆಲಸವನ್ನು ಈ ಸೀರೆ ಹೊಂದಿದೆ.

Vidya Balan
 

ಇದಕ್ಕಾಗಿ ವಿದ್ಯಾ ತ್ರಿಫೋರ್ತ್ ರವಿಕೆಯನ್ನು ತೊಟ್ಟುಕೊಂಡಿದ್ದಾರೆ. ಇನ್ನು ಬಿಳಿ ರವಿಕೆ ಕೂಡ ಇದಕ್ಕೆ ಸೂಕ್ತವಾಗಿದೆ. ವಿದ್ಯಾ ದೊಡ್ಡದಾದ ಕಿವಿಯೋಲೆಯನ್ನು ಸೀರೆಗೆ ಮ್ಯಾಚ್ ಆಗುವಂತೆ ತೊಟ್ಟಿದ್ದು ಇವರ ಮೂಗುತ್ತಿ ಕೂಡ ವಿಶೇಷವಾಗಿದೆ.

Vidya Balan

ಹಾಗಿದ್ದರೆ ಈ ಬೇಸಿಗೆಗಾಗಿ ನಿಮಗೂ ಈ ಬಗೆಯ ಸೀರೆಯನ್ನು ಆಯ್ಕೆಮಾಡಬಹುದಾಗಿದ್ದು ತಡಮಾಡದೇ ಅದನ್ನು ಪ್ರಯತ್ನಿಸಿ.

English summary

This Is How You Wear Your Summer Saree Look -- Vidya Balan

Vidya Balan flaunts an all new chanderi saree look and we cannot stop recommending it to people. It seems like this month is the month of movie promotions and we cannot get any happier. Shraddha Kapoor, Sonakshi Sinha and Vidya Balan have been promoting their movies incessantly and we are getting a high dose of fashion.
Story first published: Monday, April 10, 2017, 23:14 [IST]
Subscribe Newsletter