Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೋಡಿ ಮಾಡಿದ ರಣಬೀರ್-ದೀಪಿಕಾರ ತಮಾಷ ಕೆಮಿಸ್ಟ್ರಿ..!
ರಣಬೀರ್ ದೀಪಿಕಾ ಪಡುಕೋಣೆ ಜೋಡಿ ಬಾಲಿವುಡ್ನಲ್ಲಿ ಇನ್ನೊಮ್ಮೆ ತಮ್ಮ ಮೋಹಕತೆಯನ್ನು ಬೀರಲು ಹೊರಟಿದ್ದಾರೆ. ಯೆ ಜವಾನಿ ಹೇ ದಿವಾನಿ, ಬಚನಾ ಹೇ ಹಸೀನೊ ಚಿತ್ರಗಳಲ್ಲಿ ಮಸ್ತಾಗಿ ಅಭಿನಯಿಸಿ ಸ್ಟಾರ್ ಇಮೇಜನ್ನು ಹುಟ್ಟು ಹಾಕಿದ ಈ ಜೋಡಿ ಮತ್ತೊಮ್ಮೆ ತೆರೆಯಲ್ಲಿ ತಮ್ಮ ಧಮಾಕಾಧಾರ್ ಪ್ರದರ್ಶನವನ್ನು ಹೊಮ್ಮಿಸಲು ಬರುತ್ತಿದ್ದಾರೆ.

ಹಲವಾರು ವದಂತಿಗಳು ಮತ್ತು ಬ್ರೇಕಪ್ಗಳ ನಡುವೆಯೂ ಈ ಜೋಡಿ ಸಾಧಾರಣವಾಗಿ ನಟಿಸುವಂತಹ ಕಲೆ ನಿಜಕ್ಕೂ ಶ್ಲಾಘನೀಯವಾದುದು. ಅದು ಯಾವುದೇ ಪಾತ್ರವಾಗಿರಲಿ, ತಾವು ಎಲ್ಲಾ ಪಾತ್ರಕ್ಕೂ ಸೈ ಎನ್ನುವ ರೀತಿಯಲ್ಲಿ ಮೈಮರೆತು ನಟಿಸಿ ಚಿತ್ರಕ್ಕೆ ಜೀವತುಂಬುವುದರಿಂದಲೇ ಅಭಿಮಾನಿ ಬಳಗದಲ್ಲಿ ಇವರಿಂದಿಗೂ ಟಾಪ್ ಫೇವರೇಟ್ ಎಂದೆನಿಸಿದ್ದಾರೆ. ಇದೇ ಜೋಡಿಯ ಹೊಸ ಚಿತ್ರ
ತಮಾಷಾ ಬಿಡುಗಡೆಗೆ ಮುನ್ನವೇ ಹೊಸ ಆಕಾಂಕ್ಷೆಯನ್ನು ಹುಟ್ಟು ಹಾಕಿದೆ. ಇಮ್ತಿಯಾಜ್ ಆಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹೈಲೈಟ್ ರಣಬೀರ್ ಮತ್ತು ದೀಪಿಕಾ ಜೋಡಿ ಎಂದೆನಿಸಿದ್ದಾರೆ.
ಮಾಜಿ ಪ್ರೇಮಿಗಳಾಗಿರುವ ದೀಪಿಕಾ ಮತ್ತು ರಣಬೀರ್ ಚಿತ್ರದ ಪ್ರಮೋಶನ್ ವೇಳೆಯಲ್ಲೂ ಜೋಡಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಮುಂಬೈನ ಪೃಥ್ವಿ ಥಿಯೇಟರ್ನಲ್ಲಿ ರಣಬೀರ್ ಕಪ್ಪು ಸ್ವೆಟ್ ಶರ್ಟ್ ಮತ್ತು ಅದೇ ಬಣ್ಣದ ಸಿಗರೇಟ್ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದರೆ ದೀಪಿಕಾ ಬಿಳಿ ಬಣ್ಣದ ಕಾಟನ್ ದಿರಿಸಿನಲ್ಲಿ ಮನಮೋಹಕರಾಗಿ ಕಂಡುಬಂದಿದ್ದಾರೆ. ಡೆನಿಮ್ ಜಾಕೆಟ್ ಮತ್ತು ಬಿಳಿ ಶೂಗಳನ್ನು ದೀಪಿಕಾ ಧರಿಸಿದ್ದಾರೆ. ಇವರ ನೋಟ ನಿಮಗೂ ಇಷ್ಟವಾಯಿತು ಅಲ್ಲವೇ?



Click it and Unblock the Notifications


