Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ರ ಝಲಕ್
1994ರ ಆ ರಾತ್ರಿ ಭಾರತವೇ ಹೆಮ್ಮೆ ಪಟ್ಟ ದಿವಸ. ಎಲ್ಲಾ ಕ್ಷೇತ್ರಗಳಲ್ಲೂ ತಾವು ಮುಂದು ಎಂಬ ಹೆಮ್ಮೆಗೆ ಇನ್ನೊಂದು ಗರಿ ತಂದಿಟ್ಟ ಸುಸಂದರ್ಭ. ಹೌದು ಸುಶ್ಮಿತಾ ಸೇನ್ ಹೆಸರಿನ ಭಾರತದ ಕುಡಿ ಇಡೀ ವಿಶ್ವದಲ್ಲೇ ಭಾರತದ ಹೆಸರನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದರು. ಮಿಸ್ ಯೂನಿವರ್ಸ್ ಎಂಬ ಕಿರೀಟದೊಂದಿಗೆ ಸೌಂದರ್ಯ ಜಗತ್ತಿಗೆ ರಾಣಿಯಾಗಿದ್ದರು. ಮಿಸ್ ಯೂನಿವರ್ಸ್ ಪಟ್ಟದ ನಂತರ ಸುಶ್ಮಿತಾ ಬದುಕು ಮತ್ತೊಂದು ಮಗ್ಗುಲನ್ನೇ ಪಡೆಯಿತು ಮಾಡೆಲಿಂಗ್‌ನಿಂದ ಪ್ರಸಿದ್ಧರಾಗಿ ಸಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಈ ಚೆಲುವೆ ಬಾಲಿವುಡ್ ಅಂಗಳದ ಅನಭಿಷಕ್ತ ಯುವರಾಣಿಯಾಗಿದ್ದರು.
ವಯಸ್ಸು 38 ಆದರೂ ಇಂದಿಗೂ ಅವರ ಸೌಂದರ್ಯ ಬತ್ತಿಲ್ಲ. ಬಳುಕುವ ಬಳ್ಳಿಯಂತಹ ಅಂಗಸೌಷ್ಟವ, ಕ್ರಿಯಾತ್ಮಕತೆಯಿಂದ ಇಂದಿಗೂ ಬಾಲಿವುಡ್‌ನಲ್ಲಿ ತಮ್ಮ ಬೇಡಿಕೆಯನ್ನು ಕಳೆದುಕೊಂಡಿಲ್ಲ. ಉದ್ದನೆಯ ಸಪೂರ ದೇಹಸಿರಿ ಸುಶ್ಮಿತಾರದ್ದಾಗಿದ್ದು ತಮ್ಮ ವ್ಯಕ್ತಿತ್ವದಿಂದ ಅವರು ಯಾರಿಗೂ ಮೋಡಿಯನ್ನು ಮಾಡಬಲ್ಲವರು. ತಮ್ಮ ಸಿನಿ ಕ್ಷೇತ್ರದ ಆರಂಭವನ್ನು ದಸ್ತಕ್ ಎಂಬ ಚಿತ್ರದಿಂದ ತೊಡಗಿಸಿದ್ದು ಸಿರ್ಫ್ ತುಮ್, ಮೈ ಹೂನಾ, ಸಿತಾರಾ ಚಿತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿದ್ದಾರೆ.
ಅದಾಗ್ಯೂ ಸುಶ್ಮಿತಾ ಚಿತ್ರರಂಗದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿಲ್ಲ. ಅವರ ಆಸಕ್ತಿಯ ಕ್ಷೇತ್ರಗಳೇ ಈವೆಂಟ್‌ಗಳು ಮತ್ತು ಫ್ಯಾಷನ್ ಸಪ್ತಾಹಗಳಾಗಿವೆ. ಸುಶ್ಮಿತಾ ಹೆಚ್ಚು ಮನಸೋಲುವುದು ಸರಳ ಮತ್ತು ಸುಂದರ ಉಡುಗೆಗಳಿಗೆ. ಮಾಜಿ ಮಿಸ್ ಯೂನಿವರ್ಸ್ ಕಪ್ಪು ಬಣ್ಣವೆಂದರೆ ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದಲೇ ಹೆಚ್ಚಿನ ಸಮಾರಂಭಗಳಲ್ಲಿ ತಿಳಿ ಕಪ್ಪು ಬಣ್ಣದ ಉಡುಗೆಗಳಲ್ಲೇ ಆಕೆ ಮಿಂಚುತ್ತಿರುತ್ತಾರೆ.
ಕಪ್ಪು ಬಣ್ಣದ ಗೌನ್‌ಗಳು ಮತ್ತು ದಿರಿಸುಗಳಲ್ಲಿ ಸುಶ್ ಹಾಟ್ ಮತ್ತು ಸೆಕ್ಸಿಯಾಗಿಯೇ ಕಾಣಿಸುತ್ತಾರೆ. ಇನ್ನು ಇವರಂತೆಯೇ ಕಪ್ಪು ಬಣ್ಣವನ್ನು ಹೆಚ್ಚು ಮೆಚ್ಚಿಕೊಳ್ಳುವವರು ಐಶ್ವರ್ಯಾ ರೈ ಬಚ್ಚನ್. ಸುಶ್ ಮತ್ತು ಐಶ್ ಕಪ್ಪು ಬಣ್ಣದ ಅಭಿಮಾನಿಗಳು ಎಂದೇ ಹೇಳಬಹುದು. ಯಶಸ್ಸು ಪಡೆದುಕೊಳ್ಳಲು ಎಡರು ತೊಡರುಗಳನ್ನು ದಾಟಲೇಬೇಕು ಎಂಬ ಮಾತಿನಂತೆಯೇ ಸುಶ್ ಕೂಡ ಫ್ಯಾಷನ್ ಲೋಕದಲ್ಲಿ ಹಲವಾರು ಟೀಕೆಗಳಿಗೆ ಗುರಿಯಾಗಿದ್ದಾರೆ. ಆದರೆ ಈ ಟೀಕೆಗಳನ್ನು ಆಕೆ ಸವಾಲಾಗಿ ಸ್ವೀಕರಿಸಿಕೊಂಡು ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೇ ಸೈ ಅನ್ನಿಸಿಕೊಂಡಿದ್ದಾರೆ.
ಆಕೆಯ ಸೌಂದರ್ಯಕ್ಕೆ ಈಡುಜೋಡು ಎಂಬಂತೆ ಯಾವುದೇ ದಿರಿಸುಗಳು ಸುಶ್‌ಗೆ ಮಾದಕ ನೋಟವನ್ನು ನೀಡುತ್ತವೆ. ಆದರೆ ಕಪ್ಪು ಬಣ್ಣ ಆಕೆಯನ್ನು ಇನ್ನಷ್ಟು ಸೊಗಸುಗಾತಿಯನ್ನಾಗಿಸಿದೆ. ಇದನ್ನು ಖಾತ್ರಿಪಡಿಸಲೆಂದೇ ಸುಶ್ ಅವರ ಕಪ್ಪು ಬಣ್ಣದ ದಿರಿಸಿನ ಝಲಕ್ ಅನ್ನು ನಿಮ್ಮ ಮುಂದೆ ಪ್ರದರ್ಶಿಸುತ್ತಿದ್ದೇವೆ.

ಕಪ್ಪು ಬಣ್ಣದ ಹೈ ಸ್ಲಿಟ್
ಸ್ಟ್ರಾಪ್‌ಲೆಸ್ ಸ್ಲಿಟ್ ಗೌನ್ ಅನ್ನು ಸುಶ್ಮಿತಾ ಧರಿಸಿದ್ದು ಇದು ಕಪ್ಪು ಬಣ್ಣದ್ದಾಗಿದೆ ಎಂಬುದು ಇಲ್ಲಿ ಹೈಲೈಟೆಡ್ ಆಗಿರುವ ವಿಷಯವಾಗಿದೆ. ಬರ್ದಿಚಂದ್ ಘನಶ್ಯಾಮ್‌ಸಾಸ್‌ಗಾಗಿ IIJW 2012 ನಲ್ಲಿ ಶೋಸ್ಟಾಪರ್ ಆಗಿ ಕಾಣಿಸಿಕೊಂಡಿದ್ದಾರೆ.
{thumbs-up-down}
ಕಪ್ಪು ಬಣ್ಣದ ಲೇಸ್ ಗೌನ್
ಸುಶ್ಮಿತಾರಿಗೆ ಅಪೂರ್ವ ನೋಟವನ್ನು ಲೇಸ್ ಗೌನ್ ತಂದುಕೊಟ್ಟಿದೆ. ಲೇಸ್‌ನಲ್ಲಿರುವ ಹೊಳಹು ಅತ್ಯದ್ಭುತವಾಗಿದ್ದು ಮುತ್ತಿನ ನೆಕ್ಲೇಸ್ ಉಡುಗೆಗೆ ಅನೂಹ್ಯ ನೋಟವನ್ನು ತಂದುಕೊಟ್ಟಿದೆ.
ಕಪ್ಪು ಹೊಳೆಯುವ ದಿರಿಸು
ಕಪ್ಪು ಬಣ್ಣದ ಹೊಳೆಯುವ ಮೊಣಕಾಲವರೆಗಿನ ದಿರಿಸು ರೆಡ್ ಕಾರ್ಪಟ್‌ನಲ್ಲಿ ಸುಶ್ಮಿತಾರನ್ನು ದೇವತೆಯನ್ನಾಗಿಸಿದೆ. ಅವರು ಧರಿಸಿರುವ ಸ್ಟ್ರಾಪ್ ಬೂಟ್‌ಗಳು ಇನ್ನಷ್ಟು ಮೋಹಕವಾಗಿ ಕಂಡುಬಂದಿದೆ.
Read in english- Star Signature Style: Sushmita Sen And Her Sheer Love For The Colour Black



Click it and Unblock the Notifications
