Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರಿಯಾಂಕಾರ ಸಕತ್ ಸ್ಟೈಲಿಶ್ ಜಂಪ್‌ಸೂಟ್ಸ್‌ನ ಝಲಕ್
ಬಾಲಿವುಡ್‌ನ ಅಂದದ ಬೆಡಗಿಯರಿಗೆ ಈಗ ವಿದೇಶದಲ್ಲೂ ಮನ್ನಣೆ ದೊರಕುತ್ತಿದ್ದು ತಮ್ಮ ನಟನಾ ಸಾಮರ್ಥ್ಯವನ್ನೂ ಹೊರದೇಶಗಳಲ್ಲೂ ಪ್ರದರ್ಶಿಸಿ ನಮ್ಮ ದೇಶದ ಹೆಸರನ್ನು ವಿದೇಶದಲ್ಲೂ ನೆಲೆಗೊಳಿಸುವ ಪ್ರಯತ್ನವನ್ನು ಸೆಲೆಬ್ರಿಟಿಗಳು ಮಾಡಿದ್ದು ಅದರಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಹಾಲಿವುಡ್‌ನ ನಿರ್ಮಾಪಕರು ನಿರ್ದೇಶಕರು ಇಲ್ಲಿನ ಕಲಾ ಪ್ರತಿಭೆಗಳನ್ನು ಗುರುತಿಸಿ ತಮ್ಮ ನೆಲದಲ್ಲೂ ಅವಕಾಶವನ್ನು ನೀಡುತ್ತಿದ್ದಾರೆ ಎಂದಾದಲ್ಲಿ ಈ ತಾರೆಯರ ಸಾಮರ್ಥ್ಯವನ್ನು ನಾವು ಹಾಡಿಹೊಗಳಲೇಬೇಕು ಅಲ್ಲವೇ? ಅಂತಹುದೇ ಒಂದು ಅನರ್ಘ್ಯ ತಾರಾ ರತ್ನ ಪ್ರಿಯಾಂಕಾ ಚೋಪ್ರಾ ಆಗಿದ್ದಾರೆ.

ಅಮೇರಿಕನ್ ಟಿವಿ ಪ್ರದರ್ಶನವಾದ ಕ್ವಾಂಟಿಕೊದಲ್ಲಿ ಪ್ರಿಯಾಂಕಾ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಅಲೆಕ್ಸ್ ಎಂಬ ಪ್ರಮುಖ ಪಾತ್ರವನ್ನು ಪ್ರಿಯಾಂಕಾ ಈ ಕಾರ್ಯಕ್ರಮದಲ್ಲಿ ನಿರ್ವಹಿಸುತ್ತಿದ್ದಾರೆ.
ಪಿಟ್‌ಬುಲ್ ಆಲ್ಬಮ್‌ನಲ್ಲಿ ತಮ್ಮ ಅಮೋಘ ಪ್ರತಿಭೆಯನ್ನು ಅನಾವರಣಗೊಳಿಸಿದ ನಂತರ ಪಿಗ್ಗಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈಗ ಅಂತಹುದೇ ಜನಮನ್ನಣೆಯನ್ನು ಗಳಿಸಿಕೊಳ್ಳುತ್ತಿರುವ ಅಂತರಾಷ್ಟ್ರೀಯ ಶೋ ಕ್ವಾಂಟಿಕೊದಲ್ಲಿ ಹೈಲೈಟ್‌ಗೊಳ್ಳುತ್ತಿದ್ದಾರೆ. ಇನ್ನು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲೂ ನಟಿ ತಮ್ಮ ಹಾಟ್ ಪೋಸ್‌ಗಳಿಂದ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಅಂತರಷ್ಟ್ರೀಯ ನಿಯತಕಾಲಿಕೆಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ತಮ್ಮ ದಿರಿಸುಗಳ ಆಯ್ಕೆ, ಸ್ಟೈಲ್ ಬಗ್ಗೆ ಇನ್ನಷ್ಟು ಗಂಭೀರರಾಗಿ ಅತ್ಯುತ್ತಮ ಆಯ್ಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆಕೆಯ ಫ್ಯಾಷನ್ ಬಗ್ಗೆಯೇ ಇಂದಿನ ಫ್ಯಾಷನ್ ಲೋಕ ಚರ್ಚೆಯನ್ನು ನಡೆಸುತ್ತಿದ್ದು, ಆಕೆಯ ಗೌನ್‌ಗಳು ಮತ್ತು ಕಾರ್ಪೆಟ್ ವಾರ್ಡ್‌ರೋಬ್ ಬಗ್ಗೆಯೇ ಫ್ಯಾಷನ್ ಬ್ಲಾಗ್‌ಗಳು ಮತ್ತು ನಿಯತಕಾಲಿಕೆಗಳು ಕವರ್ ಮಾಡುತ್ತಿವೆ. ಅಂತೂ ಪ್ರಿಯಾಂಕಾರ ಸಿಗ್ನೇಚರ್ ಸ್ಟೈಲ್ ಹಲವರ ಹುಬ್ಬೇರಿಸಿದೆ.
ಇನ್ನು ಪ್ರಿಯಾಂಕಾ ಹೆಚ್ಚು ಇಷ್ಟಪಡುವುದು ಜಂಪ್‌ಸೂಟ್‌ಗಳನ್ನಾಗಿದೆ. ಹೆಚ್ಚಿನ ಸಭೆ ಸಮಾರಂಭಗಳಲ್ಲಿ ಪ್ರಿಯಾಂಕಾ ಜಂಪ್‌ಸೂಟ್‌ಗಳಲ್ಲಿಯೇ ಕಂಡುಬಂದಿದ್ದಾರೆ. ಜಂಪಸೂಟ್‌ಗಳಲ್ಲೂ ಪ್ರಿಯಾಂಕಾ ಕ್ಯೂಟ್ ಆಗಿಯೇ ಕಂಡುಬರುತ್ತಿದ್ದು ಆಕೆಯ ಸ್ಟಾರ್ ಸಿಗ್ನೇಚರ್ ಸ್ಟೈಲ್ ಆಗಿ ಜಂಪ್‌ಸೂಟ್ ಮೆಚ್ಚುಗೆಗೆ ಪಾತ್ರವಾಗಿದೆ.
Read in English - Star Signature Style: Priyanka Chopra And The Jumpsuits



Click it and Unblock the Notifications



