Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ವೆಲ್ವೆಟ್ ಕೋಟ್‌ನಲ್ಲಿ 'ಅಮಿತಾಬ್' ಫುಲ್ ಮಿಂಚಿಂಗ್..!
ಅಮಿತಾಬ್ ಬಚ್ಚನ್ ಬಾಲಿವುಡ್ನ ದಂತಕಥೆ ಎಂದೇ ಖ್ಯಾತಿ ಪಡೆದವರು ಅಂತೆಯೇ ಭಾರತೀಯ ಸಿನಿಮಾದಲ್ಲಿ ಹೆಚ್ಚು ಗೌರವ ಪ್ರಸಿದ್ಧಿಯನ್ನು ಪಡೆದುಕೊಂಡವರು. ತಮ್ಮ ಸಿನಿ ವೃತ್ತಿ ಜೀವನದಲ್ಲಿ ಇವರು ನಟಿಸಿದ ಚಿತ್ರಗಳ ಸಂಖ್ಯೆ 180. ಅದರಲ್ಲೂ ದೀವಾರ್ ಮತ್ತು ಜಂಜೀರ್‌ನಂತಹ ಚಿತ್ರಗಳು ಅಮಿತಾಬ್ರ ವೃತ್ತಿ ಜೀವನಕ್ಕೆ ಮೈಲುಗಲ್ಲು ಎಂದೆನಿಸಿದ್ದವು. ಬಾಲಿವುಡ್ ನ ಆಂಗ್ರಿ ಯಂಗ್ ಮ್ಯಾನ್ ಎಂಬ ಬಿರುದನ್ನು ಪಡೆದಿರುವ ಅಮಿತಾಬ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲೂ ಅಪಾರ ಅಭಿಮಾನಿ ಬಳಗದ ರೋಲ್ ಮಾಡೆಲ್ ಬಿಗ್ ಬಿ ಎಂದೆನಿಸಿದ್ದಾರೆ.

ಇವರ ವಿಚಾರದಲ್ಲಿ ವಯಸ್ಸು "ಕೇವಲ ಸಂಖ್ಯೆ" ಅಷ್ಟೇ. ಈ ಮಾತು ಬಿಗ್ ಬಿ ಸೂಕ್ತವಾದಷ್ಟು ಚೆನ್ನಾಗಿ ಯಾರಿಗೂ ಸೂಕ್ತವಾಗುವುದಿಲ್ಲ. ಅಬಾಲ ವೃದ್ಧಾರಾದಿಯಾಗಿ ಎಲ್ಲರನ್ನೂ ಆಕರ್ಷಿಸುವ ಇವರು, ತಮ್ಮದೇ ಆದ ಸ್ಟೈಲಿಶ್ ಲುಕ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಒಂದು ಸಣ್ಣ ಅವಕಾಶದಲ್ಲಿ ಸಹ ಮೆಚ್ಚುಗೆಗೆ ಪಾತ್ರವಾಗದೆ ಹೋಗುವುದಿಲ್ಲ. ಭಾರತ ಸರಕಾರ ಪುರಸ್ಕರಿಸಿರುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳ ಗರಿಮೆ ಅಮಿತಾಬ್ ರ ಸಿನಿ ವೃತ್ತಿ ಜೀವನಕ್ಕೆ ಕಾಣಿಕೆಗಳು ಎಂದೆನಿಸಿವೆ.
ಇನ್ನು ಈ ಸಾಧನೆಗಳಲ್ಲದೆ ಇವರ ಸ್ಟೈಲ್ ಸೆನ್ಸ್, ನೋಟ ಪ್ರಖ್ಯಾತವಾದುದು. ಅನನ್ಯ ಸಿಗ್ನೇಚರ್ ಸ್ಟೈಲ್ ಅನ್ನು ಇವರು ಹೊಂದಿದ್ದಾರೆ. ವೆಲ್ವೆಟ್ ಕೋಟ್ ಗಳು ಇವರಿಗೆ ಹೆಚ್ಚು ಪ್ರಿಯವಾದುದು. ಹೆಚ್ಚಿನ ಸಭೆ ಸಮಾರಂಭಗಳಲ್ಲಿ ಇವರು ವೆಲ್ವೆಟ್ ಕೋಟ್ ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆಜ್ ಕೀ ರಾತ್ ಹೇ ಜಿಂದಗಿ ಎಂಬ ಇವರ ಹೊಸ ಶೋನಲ್ಲಿ ಫ್ಲೋರಲ್ ವೆಲ್ವೇಟ್ ಕೋಟ್ ಧರಿಸಿದ್ದರು.
ಅಮಿತಾಬ್ ರ ದೇಹವಿನ್ಯಾಸಕ್ಕೆ ಈ ಸೂಟ್ ಹೇಳಿಮಾಡಿಸಿದಂತಿದ್ದು ಹದಿನೇಳರಿಂದ ಎಪ್ಪತ್ತರವೆಗಿನವರ ಮೆಚ್ಚುಗೆಯ ನೋಟಕ್ಕೆ ಇದು ಪಾತ್ರವಾಗಿತ್ತು. ಸ್ಟೈಲಿಶ್ ಲುಕ್‌ನಲ್ಲಿ ಮಿರಿಮಿರಿ ಮಿಂಚಿದ ಅಮಿತಾಬ್
ಎರಡನೆಯ ಬಾರಿಗೆ, ಬಿಗ್ ಬಿಯ ಕೋಟ್ ನೋಟ ಕಾಣಸಿಕ್ಕಿದ್ದು ಬ್ಲಾಗಿಂಗ್ ಅಪ್ಲಿಕೇಶನ್ ಲಾಂಚ್ ನಲ್ಲಿ. ಮೆರೂನ್ ಬಣ್ಣದ ವೆಲ್ವೆಟ್ ಕೋಟ್ ಮತ್ತು ಸಾದಾ ಫಾರ್ಮಲ್ ಪ್ಯಾಂಟ್ ಅನ್ನು ಇವರು ಧರಿಸಿದ್ದರು. ವೆಲ್ವೇಟ್ ಅಮಿತಾಬ್ ಅವರ ನೋಟವನ್ನೇ ಇನ್ನಷ್ಟು ಮುದಗೊಳಿಸುವಂತೆ ಮಾಡಿತ್ತು.
ಕೊನೆಯದಾಗಿ, ಪುಸ್ತಕ ಲಾಂಚ್ ವೇಳೆಯಲ್ಲಿ ಅಮಿತಾಬ್ರ ವೆಲ್ವೆಟ್ ಕೋಟ್ ನೋಟ ದೊರೆತಿದ್ದು ವೆಲ್ವೆಟ್ ಅಲ್ಲದ ಫಾರ್ಮಲ್ ಕೋಟ್ ಅನ್ನು ಧರಿಸಿದ್ದರು. ಆದರೂ ಬಟ್ಟೆಯ ಮೃದುತ್ವ ಅದ್ಭುತವಾಗಿತ್ತು. ತಮ್ಮ ಟ್ರೇಡ್ ಮಾರ್ಕ್ ಕೋಟ್‍ಗಳ ವಿಚಾರದಲ್ಲಿ ಅವರೆಂದೂ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿಲ್ಲ. ಅದರಲ್ಲೂ ಗ್ರೇ ಸೂಟ್ ಅನ್ನು ಅಮಿತಾಬ್ ಗೆ ಹೇಳಿಮಾಡಿಸಿದಂತಿತ್ತು.



Click it and Unblock the Notifications


