Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಟಿವಿ ಶೋನಲ್ಲಿ ಭರ್ಜರಿ ಪ್ರಚಾರ ನಡೆಸಿದ ದಿಲ್‌ವಾಲೆ ತಂಡ
ಪ್ರೇಮದ ಭಾಷೆಗೆ ಹೊಸ ಅರ್ಥ ಬರೆದ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ ಚಿತ್ರದ ಯಶಸ್ಸು ಇನ್ನೂ ಅಮರವಾಗಿರುವಾಗಲೇ ಇನ್ನೊಮ್ಮೆ ಹೊಸ ಕಥಾ ಹಂದರೊಂದಿಗೆ ಈ ಚಿತ್ರ ಸೆಟ್ಟೇರಿದೆ. ಪ್ರೇಮ ಕಥೆಯಲ್ಲೇ ಮನರಂಜನೆ, ಹಾಸ್ಯ, ಪ್ರೇಮಿಗಳ ಪ್ರೇಮವನ್ನು ಅರಹುವ ಪರಿ ಹೀಗೆ ಅತಿ ಸುಂದರ ಕಥಾ ಹಂದರದೊಂದಿಗೆ ಹಿಂದಿನ ದಿಲ್‌ವಾಲೆ ಸಿನಿ ಪ್ರೇಮಿಗಳ ಮನದಲ್ಲಿ ಅಚ್ಚಳಿಯದ ನೆನಪಿನ ಮುದ್ರೆಯನ್ನು ಒತ್ತಿತ್ತು. ಚಿತ್ರದಲ್ಲಿ ಅಮೋಘವಾಗಿ ನಟಿಸಿದ ಸೂಪರ್ ಹಿಟ್ ಜೋಡಿ ಕಾಜಲ್ ಮತ್ತು ಶಾರುಖ್ ಖಾನ್‌ಗೆ ಈ ಚಿತ್ರ ಉತ್ತಮ ಬ್ರೇಕ್ ಅನ್ನು ನೀಡಿತ್ತು, ಅಲ್ಲದೆ ಭಾಗ್ಯದ ಬಾಗಿಲನ್ನು ತೆರೆದಿತ್ತು.
ಸುಮಧುರ ಸಂಗೀತ, ಉತ್ತಮ ದೃಶ್ಯಾವಳಿ, ಅಮೋಘ ಅಭಿನಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಶಸ್ತಿಯನ್ನು ಬಾಚಿಕೊಂಡಿದ್ದ ದಿಲ್‌ವಾಲೆಯ ರಿಮೇಕ್ ಈಗ ತಯಾರಾಗಿದೆ. ಕಾಜಲ್ ಶಾರೂಖ್‌ರೊಂದಿಗೆ ಕೃತಿ ಸೇನಾನಿ ಮತ್ತು ವರುಣ್ ಧವನ್ ತಮ್ಮ ಜೋಡಿ ನಟನೆಯನ್ನು ಎರಕ ಹೊಯ್ದು ಸಿನಿ ರಸಿಕರ ಬಾಯಿಂದ ವಾಹ್ ಎಂಬ ಉದ್ಗಾರವನ್ನು ಪಡೆಯುವ ಆಶಾವಾದದಲ್ಲಿದ್ದಾರೆ. ರೋಹಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ ದಿಲ್‌ವಾಲ್ ಡಿಸೆಂಬರ್ 18 ಕ್ಕೆ ತೆರೆಗೆ ಅರ್ಪಿತವಾಗಲಿದೆ. ಎಂದಿನಂತೆಯೇ ಚಿತ್ರದ ಉತ್ತಮ ಯಶಸ್ಸಿಗಾಗಿ ಈ ತಾರಾ ಜೋಡಿಗಳು ಪ್ರಮೋಶನ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ವೈವಿಧ್ಯಮಯ ದಿರಿಸುಗಳಿಂದ ಕಣ್ಮನ ತಣಿಸಲಿದ್ದಾರೆ. ಕಣ್ಮನ ಸೆಳೆದ ದಿಲ್‌ವಾಲೆ ಹುಡುಗಿ ಕಾಜೋಲ್.

ಜೀಟಿವಿಯಲ್ಲಿ ನಡೆದ ವಿಶೇಷ ಟಿವಿ ಕಾರ್ಯಕ್ರಮ ಒಂದರಲ್ಲಿ ದಿಲ್‌ವಾಲೆ ತಂಡ ಭರ್ಜರಿಯಾಗಿಯೇ ತಮ್ಮ ಹೊಸ ಸಿನಿಮಾದ ಪ್ರಮೋಶನ್ ಅನ್ನು ನಡೆಸಿದ್ದಾರೆ. ಕಾಜಲ್, ಶಾರುಖ್, ಕೃತಿ ಸೇನಾನಿ ಮತ್ತು ವರುಣ್ ಧವನ್ ಸುಂದರವಾದ ದಿರಿಸುಗಳಿಂದ ಉಲ್ಲಾಸಭರಿತರಾಗಿ ಕಂಡುಬಂದಿದ್ದಾರೆ.
ಕಾಜಲ್ ವೈಭವೋಪೇತವಾದ ಆರೆಂಜ್ ಸೂಟ್‌ನಲ್ಲಿ ಮನಮೋಹಕಿಯಾಗಿ ಕಾಣುತ್ತಿದ್ದು ಎರಡು ಮಕ್ಕಳ ತಾಯಿಯಾಗಿ ಕೂಡ ತಮ್ಮ ಹಿಂದಿನ ಅದೇ ಚಾರ್ಮ್ ಅನ್ನು ಕಾಪಾಡಿಕೊಂಡು ಬಂದಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಕೃತಿ ಸೇನಾನಿ ಬಿಳಿ ಮತ್ತು ಪಿಂಕ್ ಬಣ್ಣದ ದಿರಿಸಿನಲ್ಲಿ ಮನಮೋಹಕಿಯಾಗಿ ಕಾಣುತ್ತಿದ್ದಾರೆ. ಗೋಲ್ಡನ್ ಬಣ್ಣದ ಪಾದರಕ್ಷೆಯನ್ನು ತಮ್ಮ ದಿರಿಸಿಗೆ ಮ್ಯಾಚ್ ಆಗುವ ರೀತಿಯಲ್ಲಿ ಧರಿಸಿಕೊಂಡು ತಮ್ಮ ಸ್ಟೈಲ್ ಸೆನ್ಸ್ ಅನ್ನು ಮೆರೆದಿದ್ದಾರೆ. ಜಂಪ್ ಸೂಟ್‌ನಲ್ಲಿ ದಿಲ್ವಾಲೇ ಕಾಜೋಲ್‌ನ ಚಿಕ್ ನೋಟ
ಬಾಲಿವುಡ್ ಬಾದ್‌ಷಾ ಎಂದೇ ಖ್ಯಾತರಾಗಿರುವ ಶಾರುಖ್ ಜೇಡಿ ಮಣ್ಣಿನ ಬಣ್ಣದ ಶರ್ಟ್ ಮತ್ತು ನೀಲಿ ಡೆನೀಮ್‌ನಲ್ಲಿ ಇನ್ನಷ್ಟು ಸೊಗಸುಗಾರರಾಗಿ ಮಿಂಚಿದ್ದಾರೆ.
ವರಣ್ ಧವನ್ ಅಂತೂ ಬಿಳಿ ಬಣ್ಣದ ಶರ್ಟ್ ಧರಿಸಿ ನೀಟ್ ಲುಕ್ ಅನ್ನು ನೀಡಿದ್ದಾರೆ. ನೀಲಿ ಬಣ್ಣದ ಜೀನ್ಸ್ ಅನ್ನು ಬಿಳಿಗೆ ಜೋಡಿಯಾಗಿ ಇವರು ಧರಿಸಿದ್ದು ಬಿಳಿ ಬಣ್ಣದ ಶೂ ಕಾಂಬಿನೇಶನ್ ನಿಜಕ್ಕೂ ಸೊಗಸಾಗಿದೆ.



Click it and Unblock the Notifications



