Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಪ್ಪು ಸ್ಯಾಟಿನ್ ದಿರಿಸಿನಲ್ಲಿ ಹ್ಯಾಂಡ್ಸಮ್ ಕಿಂಗ್ ಖಾನ್
ಬಾಲಿವುಡ್ ಬಾದಶಾ ಎಂಬ ಕೀರ್ತಿಯಿಂದಲೇ ಜನಪ್ರಿಯಗೊಂಡಿರುವ ನಟ ಶಾರುಖ್ ಖಾನ್ ತಮ್ಮ ಇಳಿವಯಸ್ಸಿನಲ್ಲೂ ಹದಿಹರೆಯದ ಪಾತ್ರಗಳಿಂದ ಮಿಂಚುತ್ತಿದ್ದಾರೆ. ಕಿಂಗ್‌ಖಾನ್ ಅಭಿನಯವೇ ಅದ್ಭುತವಾಗಿದ್ದು ಅವರ ನಟನೆಯಲ್ಲಿ ಕೂದಲೆಳೆಯಷ್ಟೂ ತಪ್ಪು ಹುಡುಕುವುದು ಅಸಾಧ್ಯದ ಮಾತಾಗಿದೆ. ನಟನೆಯಲ್ಲೇ ಇಷ್ಟೊಂದು ಪಳಗಿರುವ ಶಾರುಖ್ ತಮ್ಮ ಸ್ಟೈಲ್‌ನಿಂದ ಕೂಡ ಜನಜನಿತರಾಗಿದ್ದಾರೆ.

ಹಲವಾರು ಜಾಹೀರಾತುಗಳಲ್ಲಿ ಇವರ ಹಾವಭಾವ, ದಿರಿಸನ್ನು ಧರಿಸುವ ಪರಿ, ನಿರರ್ಗಳ ಭಾಷಾ ಉಚ್ಛಾರಣೆಯಿಂದ ಶಾರುಖ್ ಅನ್ನು ಅನುಕರಣೆ ಮಾಡುವವರೇ ಹೆಚ್ಚು. ವಿಶ್ವದಲ್ಲೇ ಶ್ರೀಮಂತ ವ್ಯಕ್ತಿಯಾಗಿರುವ ಶಾರುಖ್ ಫ್ಯಾಷನ್ ವಿಷಯದಲ್ಲೂ ಅಷ್ಟೇ ಶ್ರೀಮಂತಿಕೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ, ಚೆನ್ನೈ ಎಕ್ಸ್‌ಪ್ರೆಸ್, ಡಾನ್ ರಿಮೇಕ್ ಹೀಗೆ ಸೂಪರ್ ಹಿಟ್ ಚಿತ್ರಗಳನ್ನೇ ಎಸ್‌ಆರ್‌ಕೆ ಬಾಲಿವುಡ್‌ಗೆ ನೀಡಿದ್ದಾರೆ. ಇಂದು ಎಸ್‌ಆರ್‌ಕೆ ಸ್ಟೈಲ್ ಬಗ್ಗೆ ನಾವು ಮಾತನಾಡುತ್ತಿರುವುದು ಮೆಹಬೂಬ್ ಸ್ಟೂಡಿಯೋದಲ್ಲಿ ಅವರು ಕಂಡುಬಂದ ಸ್ಟೈಲಿಶ್ ಲುಕ್‌ನಲ್ಲಿ.
ಕಪ್ಪು ಬಣ್ಣದ ಸ್ಯಾಟೀನ್ ತ್ಯುಸಿಡೋನಲ್ಲಿ ಹ್ಯಾಂಡ್‌ಸಮ್ ಆಗಿ ಎಸ್‌ಆರ್‌ಕೆ ಕಂಡುಬಂದಿದ್ದಾರೆ. ಕಪ್ಪು ಬಣ್ಣವನ್ನು ಹೆಚ್ಚು ಮೆಚ್ಚುವ ಎಸ್‌ಆರ್‌ಕೆ ಇದನ್ನೇ ತಮ್ಮ ಸಿಗ್ನೇಚರ್ ಸ್ಟೈಲ್‌ವನ್ನಾಗಿ ಆಯ್ದುಕೊಂಡಿದ್ದಾರೆ. ನಾವಂತೂ ಶಾರುಖ್‌ರ ಕಪ್ಪು ದಿರಿಸಿನಲ್ಲಿ ಮೈಮರೆತಿದ್ದೇವೆ. ನಿಮ್ಮ ಅಭಿಪ್ರಾಯವೂ ಇದೇ ಆಗಿದೆಯೇ?
Read in english - Spotted: Shah Rukh Khan's Handsome Tuxedo Look At Mehboob Studio



Click it and Unblock the Notifications

