Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನ್ ಝಲಕ್: ಕಣ್ಮನ ಸೆಳೆದ ಸೋನಂ ಮತ್ತು ಸಲ್ಮಾನ್
ಬಾಲಿವುಡ್‌ನಲ್ಲಿ ಈಗೀಗ ಹೊಸ ಹೊಸ ಚಲನಚಿತ್ರಗಳು ಚಿತ್ರ ಪ್ರೇಮಿಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದು ಇದರಲ್ಲಿರುವ ಕಥೆಗಳು ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಅಭಿನಯಿಸುತ್ತಿರುವವರು ಹಳಬರಾದರೂ ಕಥೆ ಭಿನ್ನವಾಗಿದೆ ಎಂದಾದಲ್ಲಿ ಆ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಮಾತ್ರ ಗ್ಯಾರಂಟಿ.

ಸದ್ಯಕ್ಕೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದುಮಾಡುತ್ತಿರುವ ಸಲ್ಮಾನ್ ಖಾನ್ ಮತ್ತು ಸೋನಂ ಕಪೂರ್ ಅಭಿನಯದ ಪ್ರೇಮ್ ರತನ್ ಧನ್ ಪಾವೊ ಚಿತ್ರ, ಭರ್ಜರಿ ಯಶಸ್ಸಿನ ಕಡೆ ಮುನ್ನುಗುತ್ತಿದೆ. ಅದರಲ್ಲೂ ಬಾಲಿವುಡ್ನ ಹ್ಯಾಂಡ್ಸಮ್ ಭಾಯ್ ಸಲ್ಮಾನ್ ಈಗೀಗ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಸೋನಂ ಅಂತೂ ಫ್ಯಾಷನ್ ದಿವಾ ಎಂಬ ಹೆಸರನ್ನೇ ಗಳಿಸಿಕೊಂಡಿದ್ದು ಇವರಿಬ್ಬರ ಜೋಡಿ ಕಮಾಲನ್ನೇ ಮಾಡುತ್ತಿದೆ. ಬಾಲಿವುಡ್‌ನಲ್ಲಿ ಮಿಂಚು ಹರಿಸಿದ ಸಲ್ಮಾನ್ ಸೋನಂ ಜೋಡಿ
ತಮ್ಮ ಚಿತ್ರ ಪ್ರಚಾರಗಳ ಭಾಗವಾಗಿಯೇ ಆಭರಣದ ಅಂಗಡಿಯ ಲೋಗೋ ಉದ್ಘಾಟನೆಗಾಗಿ ಸೋನಂ ಮತ್ತು ಸಲ್ಲೂ ಭಾಯ್ ಆಗಮಿಸಿದ್ದರು. ರೋಹಿತ್ ಬಾಲ್ ವಿನ್ಯಾಸದ ಅನಾರ್ಕಲಿ ಗೌನ್ ಅನ್ನು ಸೋನಂ ತೊಟ್ಟುಕೊಂಡಿದ್ದು ಗೌನ್ ಎರಡು ಭಾಗಗಳನ್ನು ಹೊಂದಿ ಮನಮೋಹಕವಾಗಿತ್ತು. ಮುಂಭಾಗ ತೆರೆದಂತಿದ್ದು ನೆಲಕ್ಕೆ ಮುಟ್ಟುತ್ತಿತ್ತು. ಅಂತೂ ಸೋನಂ ಕಣ್ಮನಸೆಳೆಯುವಂತಿದ್ದರು.
ಸಲ್ಮಾನ್ ಅವರು ಕೆಂಪು ಮತ್ತು ಕಪ್ಪು ಚೌಕುಳಿಯುಳ್ಳ ಶರ್ಟ್ ಗಾಢ ಬಣ್ಣದ ಡೆನಿಮ್ ಜೀನ್ಸ್ ಅನ್ನು ಧರಿಸಿದ್ದರು. ತಮ್ಮ ಅಭಿಮಾನಿಗಳನ್ನು ಅವರು ಎಂದೂ ನಿರಾಶೆಗೊಳಿಸಿರಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಅಂತೂ ಸಲ್ಲು ಮತ್ತು ಸೋನಂ ನೋಡುಗರನ್ನು ನಿರಾಶೆಗೊಳಿಸಿರಲಿಲ್ಲ ಎಂಬುದಂತೂ ನಿಜ.
Read in english-Spotted: Salman Khan And Sonam Kapoor At A Launch Event



Click it and Unblock the Notifications


