Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನ್ ರಾಣಿ ಸೋನಂರ ವರ್ಣರಂಜಿತ ಝಲಕ್
ಬಾಲಿವುಡ್ನ ಫ್ಯಾಷನ್ ರಾಣಿ ಎಂದೇ ಅನಭಿಷಕ್ತೆಯಾಗಿರುವ ಸೋನಂ ಕಪೂರ್, ತಮ್ಮ ವರ್ಣರಂಜಿತ ದಿರಿಸುಗಳಿಂದ ಪಡ್ಡೆ ಹುಡುಗರ ಮನ ಕದಿಯುವವರು. ಸೋನಂರ ಸಹೋದರಿ ಫ್ಯಾಷನ್ ತಜ್ಞೆಯಾಗಿದ್ದು ತನ್ನ ಅಕ್ಕನ ಹೆಚ್ಚಿನ ದಿರಿಸುಗಳ ಕುಶಲತೆಯ ಕೈವಾಡ ಎಂದೆನಿಸಿದ್ದಾರೆ. ತಮ್ಮ ಯಾವುದೇ ಚಿತ್ರದ ಪ್ರಮೋಷನ್ ಇರಲಿ ಸೋನಂ ಮಾತ್ರ ತಮ್ಮ ದಿರಿಸುಗಳ ಆಯ್ಕೆಗೆ ಕೊಡುವ ಮಹತ್ವ ಮಾತ್ರ ಮೆಚ್ಚುವಂತಹುದ್ದೇ.

ತಮ್ಮ ಮುಂಬರಲಿರುವ ಚಿತ್ರ ನೀರಜಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಸೋನಂ ಈ ಬಾರಿ ನಮ್ಮನ್ನು ಮನಸೋಲುವಂತೆ ಮಾಡಿದ್ದಾರೆ. ಪ್ರಬಲ್ ಗುರಂಗ್ ವಿನ್ಯಾಸ ಪಡಿಸಿದ ಸ್ವೆಟರ್ ಮತ್ತು ಸ್ಯಾಟಿನ್ ಸ್ವೆಟರ್ ಮಿಶ್ರಣದ ದಿರಿಸು ಆಕೆಯ ಮೈಯನ್ನು ಅಪ್ಪಿಹಿಡಿದಿರುವಂತ್ತಿದೆ. ಹೊಸ ಮಾದರಿಯ ಸ್ವೆಟರ್ ವಿನ್ಯಾಸ ಇದಾಗಿದೆ ಎಂದೇ ಹೇಳಬಹುದಾಗಿದ್ದು ಸೋನಂರ ಸಪೂರ ಮೈಕಟ್ಟಿಗೆ ಇದು ಒಪ್ಪುವಂತಹದ್ದಾಗಿದೆ.
ಇದೇ ತಾರೆ ಮೆಹಬೂಬ್ ಸ್ಟುಡಿಯೋದಲ್ಲಿ ರೆಡ್ ಟ್ಯುನಿಕ್ ದಿರಿಸು ಧರಿಸಿ ನಮ್ಮನ್ನು ಸ್ತಂಭಿಭೂತರನ್ನಾಗಿಸಿದ್ದಾರೆ. ನಿಜಕ್ಕೂ ಸರಳ ಸುಂದರಿಯಾಗಿ ಸೋನಂ ಕೆಂಪು ದಿರಿಸಿನಲ್ಲಿ ಮಿಂಚಿದ್ದಾರೆ. ನಮಗೇನೋ ಈಕೆಯ ಹೊಸ ದಿರಿಸು ಇಷ್ಟವಾಗಿದೆ ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳುವ ಮನಸ್ಸು ನಮ್ಮದಾಗಿದ್ದು ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ.



Click it and Unblock the Notifications

