Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬಾಲಿವುಡ್‌ನಲ್ಲಿ ಮಿಂಚು ಹರಿಸಿದ ಸಲ್ಮಾನ್ ಸೋನಂ ಜೋಡಿ
ಬಾಲಿವುಡ್‌ನಲ್ಲಿ ಈಗೀಗ ಹೊಸ ಹೊಸ ಚಲನಚಿತ್ರಗಳು ಹೊಸ ಕಮಾಲನ್ನೇ ಉಂಟುಮಾಡುತ್ತಿದೆ. ವಿಶಿಷ್ಟ ಕಥಾ ಹಂದರ, ಅಭಿಮಾನಿ ಬಳಗಕ್ಕೆ ಮೆಚ್ಚುವಂತಹ ರೀತಿಯಲ್ಲಿ ಪಾತ್ರಗಳ ವರ್ಣನೆ, ಎಲ್ಲಿಯೂ ಬೋರ್ ಹೊಡೆಸದ ರೀತಿಯಲ್ಲಿರುವ ಸಿನಿಮಾಗಳದ್ದೇ ಕಾರುಬಾರು ಭರ್ಜರಿಯಾಗಿ ನಡೆಯುತ್ತಿದೆ. ಭಜರಂಗಿ ಭಾಯ್ ಜಾನ್, ಮಾಂಜಿ ಹೀಗೆ ತುಂಬಾ ಭಿನ್ನವಾಗಿರುವ ಕಥೆಗಳು ಪ್ರೇಕ್ಷಕರ ಮನದಲ್ಲಿ ನೆಲೆನಿಲ್ಲುತ್ತಿವೆ. ಅಂತೆಯೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಈಗ ಇದೇ ಮಾದರಿಯ ಕಥೆಯನ್ನೊಳಗೊಂಡು ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ಸು ಕಾಣಹೊರಟಿರುವ ಹೊಚ್ಚ ಹೊಸ ಚಿತ್ರ ಪ್ರೇಮ್ ರಥನ್ ಧನ್ ಪಾಯೊ ಆಗಿದೆ. ಸಲ್ಮಾನ್ ಖಾನ್ ಮತ್ತು ಸೋನಂ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತಮ್ಮ ಚಿತ್ರ ಪ್ರಚಾರ ಸಂದರ್ಭದಲ್ಲಿ ಸಲ್ಮಾನ್ ಮತ್ತು ಸೋನಂ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು.
ಅಂದು ಪ್ರಚಾರದ ವೇಳೆ ನಮಗೆ ಹೆಚ್ಚು ಇಷ್ಟವಾಗಿರುವುದು ಇವರುಗಳ ದಿರಿಸುಗಳಾಗಿದ್ದು ಇದರ ವರ್ಣನೆಯನ್ನಂತೂ ನಾವು ಮಾಡಲೇಬೇಕಾಗಿದೆ. ಅದರಲ್ಲೂ ಸೋನಂ ಕಪೂರ್‌ನಂತಹ ಚೆಲುವೆ ಮತ್ತು ಸಲ್ಮಾನ್ನಂತಹ ಹ್ಯಾಂಡ್‌ಸಮ್ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ರಸಮಯವಾಗಿ ವರ್ಣಿಸುವುದು ಅತ್ಯವಶ್ಯಕವಾಗಿದೆ. ಬಿಳಿ ಬಣ್ಣದ ಮಸ್ಟರ್ಡ್ ಲೆಹಂಗಾದಲ್ಲಿ ಸೋನಂ ಅತಿಸುಂದರಿಯಾಗಿ ಕಾಣುತ್ತಿದ್ದರು.
ಭುಜದವರೆಗಿರುವ ಬಿಳಿ ಬಣ್ಣದ ರವಿಕೆ ಸುಂದರ ನೆಕ್ಲೇಸ್ ಲೆಹಾಂಗಾಕ್ಕೆ ಸಾಥ್ ನೀಡಿದೆ. ಇನ್ನು ತಮ್ಮ ಕೇಶಾಲಂಕಾರವನ್ನು ತುರುಬಿನಂತೆ ಇವರು ಮಾಡಿಕೊಂಡಿದ್ದು ಸೋನಂಗೆ ಸೊಗಸಾದ ನೋಟವನ್ನು ಇದು ನೀಡಿದೆ. ಇನ್ನು ಸಲ್ಮಾನ್ ಕಪ್ಪು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಅನ್ನು ಧರಿಸಿದ್ದು, ಅವರು ಎಂದಿಗೂ ಧರಿಸುವ ಬ್ರಾಸ್‌ಲೈಟ್ ಇಲ್ಲೂ ಒಂದು ರೀತಿಯ ಲುಕ್ ಅನ್ನು ಸಲ್ಲೂ ಭಾಯ್‌ಗೆ ನೀಡಿದೆ. ನೀಲ್ ನಿತೀನ್ ಮುಕೇಶ್ ಸೊಗಸಾದ ಕುರ್ತಾ ಧೋತಿಯಲ್ಲಿ ಮನಮೋಹಕರಾಗಿ ಕಂಡುಬಂದಿದ್ದಾರೆ. ಇವರು ಧರಿಸಿರುವ ತಿಳಿ ಬಣ್ಣದ ಕುರ್ತಾ ಧೋತಿಗೆ ಪರ್ಫೆಕ್ಟ್ ಮ್ಯಾಚ್ ಎಂದೆನಿಸಿದೆ.



Click it and Unblock the Notifications


