For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಗೆದ್ದು ಬಂದು ಎಲ್ಲರ ಗಮನ ಸೆಳೆದ ಸೋನಾಲಿ ಫ್ಯಾಷನ್

|

ಕ್ಯಾನ್ಸರ್ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ನಟಿ ಸೋನಾಲಿ ಬೇಂದ್ರೆ ಅವರು ತನ್ನ ಪತಿ ಗೋಲ್ಡಿ ಬೆಹ್ಲ್ ಜತೆಗೆ ಹಿಂತಿರುಗಿದ್ದಾರೆ. ಆಕೆ ಕ್ಯಾನ್ಸರ್ ನ್ನು ಗೆದ್ದು ಮರಳಿರುವುದು ನಮಗೆ ಹಾಗೂ ಅಭಿಮಾನಿಗಳೆಲ್ಲರಿಗೂ ಸಂತಸವನ್ನು ಉಂಟು ಮಾಡಿದೆ. ಹೆಬ್ಬೆರಳನ್ನು ತೋರಿಸುತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ತಾನು ಆರೋಗ್ಯವಾಗಿದ್ದೇನೆ ಎನ್ನುವುದನ್ನು ಹೇಳಿದ್ದಾರೆ. ಸೋನಾಲಿ ಬೇಂದ್ರೆ ಅವರು ತುಂಬಾ ಬಲವಾದ ಇಚ್ಛಾಶಕ್ತಿ ಹಾಗೂ ಮನೋಬಲ ಹೊಂದಿರುವರು. ಅವರ ಫ್ಯಾಷನ್ ಕೂಡ ಎಲ್ಲರಿಗೂ ಇಷ್ಟವಾಗಿದೆ.

ಸೋನಾಲಿ ಅವರು ಕಪ್ಪು ಬಣ್ಣದ ಉದ್ದಗಿನ ಕುರ್ತಾ ಮತ್ತು ಅದಕ್ಕೆ ಹೊಂದಿಕೊಳ್ಳುವ ಪ್ಯಾಂಟ್ ಧರಿಸಿರುವರು. ಸೋನಾಲಿ ಅವರ ಫ್ಯಾಷನ್ ಆರಾಮದಾಯಕವಾಗಿರುವುದು. ವಿಮಾನ ನಿಲ್ದಾಣದಲ್ಲಿ ಅವರು ತುಂಬಾ ಸರಳ ಹಾಗೂ ಉತ್ತಮವಾಗಿ ಕಾಣುತ್ತಿದ್ದಾರೆ. ಸೋನಾಲಿ ಅವರು ಉದ್ದಗಿನ ಜಾಕೆಟ್ ಕೂಡ ಧರಿಸಿದ್ದಾರೆ. ಇದು ಕೂಡ ಫ್ಯಾಷನ್ ಗೆ ಹೊಂದಿಕೊಂಡಿದೆ ಮತ್ತು ಚಳಿಗೂ ಸೂಕ್ತವಾಗಿದೆ. ಉದ್ದ ಕೈಯನ್ನು ಹೊಂದಿರುವ ಈ ಜಾಕೆಟ್ ಮಾತ್ರ ಫ್ಯಾಷನ್ ಗೆ ಚೆನ್ನಾಗಿ ಹೊಂದಿಕೊಂಡಿದೆ.

ಕಪ್ಪು ಬಣ್ಣದ ಫ್ಲ್ಯಾಟ್ ಸ್ಯಾಂಡಲ್ ಧರಿಸಿದ್ದಾರೆ. ಇದು ಅವರ ಫ್ಯಾಷನ್ ಗೆ ಮತ್ತಷ್ಟು ಮೆರಗು ನೀಡಿದೆ. ಅವರ ಮೇಕಪ್ ತುಂಬಾ ಲಘುವಾಗಿದೆ ಮತ್ತು ಗುಲಾಬಿ ಲಿಪ್ ಶೇಡ್ ಹಾಕಿಕೊಂಡಿರುವರು. ಸೋನಾಲಿ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ನಿಮಗೆ ಹೇಗನಿಸಿದೆ? ಇದನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

English summary

Sonali Bendre fights cancer with a new look

Sonali Bendre returned to India with her husband Goldie Behl. The prolific actress had earlier gone to USA for the cancer treatment. We were happy to see her back and she happily posed for the shutterbugs and gave thumbs up. Well, Sonali you are certainly strong and inspiring. We absolutely liked her fashion statement. The actress wore an all-black outfit.
Story first published: Monday, December 3, 2018, 13:30 [IST]
X