Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾಂಪ್ರದಾಯಿಕ ದಿರಿಸಿನಲ್ಲಿ ಮನ ಸೆಳೆದ ಜಾಕಿ ಭಗ್ನಾನಿ
ಬಾಲಿವುಡ್ನಲ್ಲಿ ಈಗೀಗ ಹೊಸ ಮುಖಗಳು ತಮ್ಮ ನಟನೆಯಿಂದ ಸೈ ಅನ್ನಿಸಿಕೊಳ್ಳುತ್ತಿದ್ದು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡದೇ ಮುಂದಕ್ಕೆ ಬರಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಇವರುಗಳು ಅಭಿನಯ ಕ್ಷೇತ್ರಕ್ಕೆ ಅಡಿ ಇಡುತ್ತಿದ್ದಾರೆ. ಸಿನಿ ರಂಗದಲ್ಲಿ ಪ್ರಭಾವ ಒಂದಿದ್ದರೆ ಮಾತ್ರ ಸಾಲದು ಪ್ರತಿಭೆ ಕೂಡ ಅತ್ಯಗತ್ಯವಾದುದು.

ಹೀಗೆಯೇ ಬಾಲಿವುಡ್ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಸಿನಿ ತಾರೆ ಜಾಕಿ ಭಗ್ನಾನಿ. ಭಾರತೀಯ ಚಿತ್ರ ನಿರ್ಮಾಪಕ ವಶು ಭಗ್ನಾನಿ ಪುತ್ರ ಜಾಕಿ ಭಗ್ನಾನಿ. 2009 ರಲ್ಲಿ ಕಲ್ ಕಿಸ್ನೆ ದೇಖಾ ಚಿತ್ರದ ಮೂಲಕ ಸಿನಿ ಜಗತ್ತನ್ನು ಪ್ರವೇಶಿಸಿದ ಜಾಕಿ 2015 ರಲ್ಲಿ ವೆಲ್ಕಮ್ ಟು ಕರಾಚಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಮನಾಲಿ ಜಗ್ತಾಪ್ರ ಶೋನಲ್ಲಿ ತಮ್ಮ ಹ್ಯಾಂಡ್ಸಮ್ ಲುಕ್ ಮೂಲಕ ರಾಂಪ್ನಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಉಮ್ಮೀದ್ ಫೌಂಡೇಶನ್ಗಾಗಿ ಈ ಶೋವನ್ನು ಏರ್ಪಡಿಸಲಾಗಿತ್ತು. ಅಂಗವಿಕಲ ಮಕ್ಕಳ ಮುಖದಲ್ಲಿ ಈ ಶೋ ನಗುವನ್ನು ತರುವಲ್ಲಿ ಯಶಸ್ವಿಯಾಗಿದೆ.
ಜಾಕಿ ಸಾಂಪ್ರದಾಯಿಕ ದಿರಿಸಿನಲ್ಲಿ ಶೋ ಸ್ಟಾಪರ್ ಆಗಿ ಮಿಂಚಿದ್ದಾರೆ. ಕಪ್ಪು ಧೋತಿ ಪ್ಯಾಂಟ್ ಮತ್ತು ಉದ್ದನೆಯ ಕುರ್ತಾದಲ್ಲಿ ಜಾಕಿ ಸಾಂಪ್ರದಾಯಿಕ ರಾಜಕುಮಾರ ಎಂದೆನಿಸಿದ್ದರು. ಹೊಳೆಯುವ ಸುಂದರ ನೆಹ್ರೂ ಕೋಟ್ ಅನ್ನು ಧೋತಿಗೆ ಇವರು ಧರಿಸಿದ್ದರು. ಜಾಕಿ ಭಗ್ನಾನಿ ಲುಕ್ ನಿಮಗೂ ಇಷ್ಟವಾಯಿತೇ? ನಮಗೂ ತಿಳಿಸಿ.
Read in english - Showstopper: Jackky Bhagnani's Ethnic Runway Look



Click it and Unblock the Notifications

