Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಕಾಸ್ಮೋಪಾಲಿಟನ್ ಮುಖಪುಟದಲ್ಲಿ-ಮಿಂಚಿದ ಆಲಿಯಾ ಭಟ್
ಬಾಲಿವುಡ್‌ನ ಕನಸಿನ ಕನ್ಯೆ, ಈಗಿನ ಹದಿ ಹರೆಯದವರ ಮನದನ್ನೆ ಆಲಿಯಾ ಭಟ್ ತನ್ನ ತುಂಟತನ, ದಡ್ಡತನ, ಚೇಷ್ಟೇ ಮತ್ತು ಮುಗ್ಧತೆಯಿಂದ ಎಲ್ಲರ ಮನಸೂರೆಗೊಳ್ಳುತ್ತಾಳೆ. 18 ರ ಹರೆಯದ ಈ ಹುಡುಗಿ, ಬಾಲಿವುಡ್‌ನ ಅಪ್ಸರೆಯರ ಸಾಲಿನಲ್ಲಿ ನನಗೂ ಒಂದು ಸ್ಥಾನ ಇದೆ ಎಂದು ಈಗಾಗಲೇ ನಿರೂಪಿಸಿದ್ದಾಳೆ.
ಇದರ ಹಿಂದಿನ ಎಲ್ಲಾ ಶ್ರೇಯಸ್ಸು, ಆಕೆಯ ಚಿತ್ರರಂಗದ ಹಿನ್ನೆಲೆಯಿರುವ ಕುಟುಂಬ ಮತ್ತು ವಿಶೇಷವಾಗಿ ಆಕೆಯ ತಂದೆಗೆ ಸಲ್ಲಬೇಕು. ಆದರೆ ಆಕೆಯಲ್ಲಿ ದಿನೇ ದಿನೇ ಬೆಳೆಯುತ್ತಿರುವ ಪ್ರಬುದ್ಧತೆಯನ್ನು ಯಾರೂ ಬೇಕಾದರೂ ಗಮನಿಸಬಹುದು.

ಆಕೆ ತನ್ನ ವೃತ್ತಿ ಜೀವನವನ್ನು 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದಿಂದ ಆರಂಭಿಸಿದಳು. ಇದು ಜನಾಕರ್ಷಣೆಗೆ ಸಹ ಕಾರಣವಾಯಿತು. ಇದಕ್ಕೆ ಕಾರಣ ಅದನ್ನು ನಿರ್ಮಿಸಿದವರು ಕರಣ್ ಜೋಹರ್ ಪ್ರೊಡಕ್ಷನ್ಸ್.
ಜೊತೆಗೆ ಅದರಲ್ಲಿದ್ದ ಹುಚ್ಚೆಬ್ಬಿಸುವ ಹಾಡುಗಳು ಸಹ ಯುವಕರ ಮನಸೂರೆಗೊಂಡಿತು. ಈ ಚಲನಚಿತ್ರದಲ್ಲಿ ಆಕೆ ಅದ್ಭುತವಾಗಿ, ಮುದ್ದಾಗಿ ಕಾಣಿಸಿಕೊಂಡಳು. 'ಹೈವೆ' ಚಿತ್ರದಲ್ಲಿ ಆಕೆ ತಾನು ಕೇವಲ ಸುಂದರಿಯಲ್ಲ, ನಟಿಯೂ ಸಹ ಹೌದು ಎಂದು ನಿರೂಪಿಸಿದಳು.
ಮುದ್ದಾಗಿ ಕಾಣುವ ಮುಖ, ಸಂದರ್ಶನಗಳಲ್ಲಿ ತೋರುವ ದಡ್ಡತನ ಎರಡೂ ಸೇರಿ ಈಕೆಯನ್ನು ಬಾಲಿವುಡ್ ಅಂಗಳದ ಮಗುವಿನಂತೆ ಮಾಡಿಬಿಟ್ಟಿವೆ. ಆದರೆ ಅಕ್ಟೋಬರ್ ತಿಂಗಳ ಕಾಸ್ಮೋಪಾಲಿಟನ್ ಪತ್ರಿಕೆಯ ಮುಖಪುಟದಲ್ಲಿ ಈಕೆಯನ್ನು ನೋಡಿದ ಮೇಲೆ, ನಾವು ಈ ಅಭಿಪ್ರಾಯವನ್ನು ಮರು ವಿಮರ್ಶೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಈ ಮುಖಪುಟದಲ್ಲಿ ಆಲಿಯಾ ನೋಡುಗರ ಎದೆಯಲ್ಲಿ ಕಿಚ್ಚೆಬ್ಬಿಸುವ ಹಾಗೆ ಕಾಣಿಸಿಕೊಂಡಿದ್ದಾಳೆ. ಒಂದೇ ಒಂದು ಸಾಲಿನಲ್ಲಿ ಹೇಳಬೇಕೆಂದರೆ ಈಕೆ ಈ ಲುಕ್‌ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾಳೆ.
Read in Hindi: ‘शानदार’ की आलिया भट्ट बनीं कॉस्मोपॉलिटन की कवर गर्ल
Read in Malayalam: ആലിയ ഭട്ട്, കോസ്മോപോളിറ്റന് കവറില്
Read in Tamil: பாலிவுட்டின் "செல்லாக்குட்டி" அலியா பட்டின் குறும்புத்தனமான புகைப்படங்கள்!
Read in Telugu: కాస్మోపాలిటిన్ కోసం అలీయా బట్ హాట్ లుక్



Click it and Unblock the Notifications


