Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಖಡಕ್ ಪೊಲೀಸ್ ಅಧಿಕಾರಿಯಾಗಿ-ಪ್ರಿಯಾಂಕಾ ಚೋಪ್ರಾ!
ಬಾಲಿವುಡ್ ಅಪ್ಸರೆ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಅಭಿನಯಿಸಿದ ಕಾಶಿಬಾಯಿ ಪಾತ್ರ ಎಲ್ಲರ ಮನಸೂರೆಗೊಂಡಿತ್ತು. ನಿಜಕ್ಕೂ ಅದು ಆಕೆಯ ವೃತ್ತಿಜೀವನದಲ್ಲೇ ತುಂಬಾ ವಿಶಿಷ್ಟವಾಗಿತ್ತು. ಅದರಲ್ಲಿನ ಆಕೆಯ ಮನೋಜ್ಞ ನಟನೆ ಎಲ್ಲರ ಪ್ರಶಂಸೆಗೆ ಕಾರಣವಾಗಿತ್ತು. ಈಗ ಮತ್ತೆ ಜೈ ಗಂಗಾಜಲ್ ಚಿತ್ರದ ಮೂಲಕ ನಮ್ಮೆಲ್ಲರ ಮನಸ್ಸೆಳೆಯಲು ಸಜ್ಜಾಗಿದಂತಿದೆ.
ಹೌದು, ಇದೀಗ ತೆರೆಗೆ ಬರಲು ಸಿದ್ಧವಾಗಿರುವ ಜೈ ಗಂಗಾಜಲ್ ಸಿನಿಮಾದಲ್ಲಿ ಆಕೆಯದ್ದು ಅತ್ಯಂತ ಗಂಭೀರ ಪಾತ್ರವಾಗಿದ್ದು, ಪೊಲೀಸ್ ಅಧಿಕಾರಿಯಾಗಿದ್ದು ಮರಾಠಾ ರಾಜನ ಪತ್ನಿಯಾಗಿ ಅಭಿನಯ ಮಾಡಿದ್ದು ಚಿತ್ರ ಎಲ್ಲರನ್ನೂ ಮನರಂಜಿಸಲು ಸಜ್ಜಾಗಿದೆ. ಬಾಲಿವುಡ್ ನಲ್ಲಿ ಬಂದ ಅನೇಕ ಪೊಲೀಸ್ ಕಥಾಹಂದರದ ಚಿತ್ರಗಳಾದ ಸಿಂಗಂನಲ್ಲಿನ ಪಾತ್ರಗಳಿಗಿಂತ ವಿಭಿನ್ನ ಹಾಗೂ ಒರಟು ಸ್ವಭಾವದ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾದ ಪ್ರಚಾರ ಕಾರ್ಯವು ಖಡ್ಡಾಯವಾಗಿದ್ದು, ಸಿನಿಮಾದ ನಟ ಮತ್ತು ನಟಿ ಕಡ್ಡಾಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲೇಬೇಕು.

ಈ ನಿಟ್ಟಿನಲ್ಲಿ ಜೈ ಗಂಗಾಜಲ್ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡರು. ಆಕೆಯ ಉಡುಪು ನಿಜಕ್ಕೂ ಎಲ್ಲರ ಕಣ್ಮನ ಸೆಳೆಯಿತು. ಆಕೆ ಧರಿಸಿದ್ದ ಕೆಂಪು ವಸ್ತ್ರ ಮತ್ತು ಅದಕ್ಕೆ ಹೊಂದುಕೊಂಡಂತೆ ಎತ್ತರದ ಚಪ್ಪಲಿ. ನಿಜಕ್ಕೂ ನೋಡಲು ಮುದ್ದಾಗಿದ್ದರು. ಈ ಉಡುಪು ಅವರ ನಟನೆಯ ಪೊಲೀಸ್ ಪಾತ್ರಕ್ಕೆ ವಿರುದ್ಧವಾಗಿದ್ದರೂ ಅದ್ಭುತವಾಗಿತ್ತು. ಎಲ್ಲರೂ ಆಕೆಯ ಪೊಲೀಸ್ ಪಾತ್ರದ ಉಡುಪನ್ನು ನಿರೀಕ್ಷಿಸಿದ್ದರು ಆದರೆ ನೆರೆದವರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಹೌದು, ನಿಮಗೆ ಈಗಾಗಲೇ ಅರಿವಾಗಿದೆ. ನಿಮಗೆ ಹೆಚ್ಚು ಸಮಯ ಕಾಯಿಸದೆ ನಿಮಗಾಗಿ ಪ್ರಿಯಾಂಕಾ ಆಗಮನದ ಚಿತ್ರಣವನ್ನು ನೀಡಲಾಗಿದೆ.



Click it and Unblock the Notifications
