Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನ್ ಲೋಕದ ಸುಂದರಿಯಂತೆ ಮಿಂಚಿದ ಪ್ರಾಚಿ ದೇಸಾಯಿ
ಬಾಲಿವುಡ್ ಅಂಗಳದಲ್ಲಿ ನಟನೆಗೆ ಹೇಗೆ ಪ್ರಾಧಾನ್ಯತೆ ಇದೆಯೋ ಅಂತೆಯೇ ಡ್ರೆಸ್ಸಿಂಗ್ ಸೆನ್ಸ್ ಮತ್ತು ಮೇಕಪ್ ಪಾಠಕ್ಕೆ ಇದು ಉತ್ತಮ ವೇದಿಕೆ ಎಂದೆನಿಸಿದೆ. ಸೆಲೆಬ್ರಿಟಿಗಳು ಸೌಂದರ್ಯದ ಪಾಠವನ್ನೇ ಪ್ರತಿಯೊಂದು ಈವೆಂಟ್ನಲ್ಲೂ ನಡೆಸುತ್ತಿದ್ದು ಸರಳ ದಿರಿಸನ್ನು ಹೇಗೆ ಅಲಂಕಾರ ಪೂರ್ಣವಾಗಿ ಮಿಂಚಿಸುವುದು ಎಂಬುದನ್ನು ನಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಯಾವುದೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಗಳಿರಲಿ, ಆರತಕ್ಷತೆ ಕಾರ್ಯಕ್ರಮಗಳಿರಲಿ ಸಿನಿಮಾಗಳಲ್ಲಿ ಮಿಂಚುವುದಕ್ಕಿಂತಲೂ ಭಿನ್ನವಾಗಿ ಇವರುಗಳು ಕಾರ್ಯಕ್ರಮಗಳಲ್ಲಿ ಗ್ಲಾಮರ್ ಗೊಂಬೆಗಳಾಗಿ ಬದಲಾಗಿಬಿಡುತ್ತಾರೆ.

ಇಂದಿನ ನಮ್ಮ ಫ್ಯಾಷನ್ ಲೋಕದ ಬೊಂಬೆಯಾಗಿ ಮಿಂಚಿರುವುದು ಪ್ರಾಚಿ ದೇಸಾಯಿಯಾಗಿದ್ದಾರೆ. ಸರಳವಾದ ದಿರಿಸಿನಲ್ಲಿ ಕೂಡ ಪ್ರಾಚೀ ಎಲ್ಲರನ್ನೂ ಸೆಳೆಯುವಂತಹ ಮೋಡಿಯನ್ನು ಮಾಡಿದ್ದಾರೆ. ಆಕೆಯ ಸ್ಟೈಲಿಂಗ್ ಟಿಪ್ಸ್ ಸದಾಕಾಲವೂ ಟ್ರೆಂಡಿಂಗ್ ಎಂದೆನಿಸಿದ್ದು ಬೋರ್ ಹೊಡೆಸುವ ಡೆನೀಮ್ಗೂ ಕಳೆಯನ್ನು ನೀಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಾರೆ. ಹಿಂದಿನಿಂದಲೂ ಆಕೆ ಫ್ಯಾಷನ್ ಪಾಠಗಳನ್ನು ತಿಳಿಸಿಕೊಡುವಲ್ಲಿ ನಂಬರ್ ಒನ್ ಎಂದೆನಿಸಿದ್ದಾರೆ.



Click it and Unblock the Notifications
