Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಪ್ಪು ದಿರಿಸಿನ ಅಪ್ಪಟ ಪ್ರೇಮಿ-ಕರಾವಳಿ ಸಿರಿ ಐಶ್ವರ್ಯ ರೈ
ಬಾಲಿವುಡ್ನ ಹಾಟ್ ಅಮ್ಮಂದಿರು ಇಂದು ಯುವ ನಟಿಯರಿಗಿಂತಲೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮಲೈಕಾ ಅರೋರಾ ಖಾನ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆ ಇಲ್ಲದಂತಾಗುತ್ತದೆ. ಆದರೆ ಈ ಪಟ್ಟಿಯಲ್ಲಿ ಅಗ್ರಗಣ್ಯರಾಗಿ ಮಿಂಚುತ್ತಿರುವ ಕರಾವಳಿ ಸಿರಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅಮ್ಮನಾದ ನಂತರ ಇನ್ನಷ್ಟು ಮೋಡಿ ಮಾಡುವ ಸೌಂದರ್ಯದಿಂದ ಬಾಲಿವುಡ್ಗೆ ಅಡಿ ಇಟ್ಟಿದ್ದಾರೆ.

ಜಾಹಿರಾತು, ಫ್ಯಾಷನ್ ಸಪ್ತಾಹಗಳು, ಸಿನಿಮಾ ಹೀಗೆ ಐಶ್ ತಮ್ಮ ಕಾರ್ಯಕ್ಷೇತ್ರದಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ ಅಂತೆಯೇ ಇನ್ನಷ್ಟು ಸುಂದರಿಯಾಗಿದ್ದಾರೆ. ಐಶ್ ಕಪ್ಪು ಬಣ್ಣದ ಅಪ್ಪಟ ಪ್ರೇಮಿಯಾಗಿದ್ದು ಈ ಬಣ್ಣದಲ್ಲಿ ಐಶ್ ರೂಪರಾಶಿ ಕಣ್ಣುಕುಕ್ಕುವಂತಿದೆ. ಇನ್ನು ಲಾಂಗಿನಸ್ ವಾಚ್ನ ರಾಯಭಾರಿಯಾಗಿರುವ ಐಶ್ ಇಲ್ಲೂ ಕಪ್ಪು ಬಣ್ಣದ ತನ್ನ ಮೋಹವನ್ನು ಬಿಟ್ಟುಕೊಟ್ಟಿಲ್ಲ. ಲಾಂಗಿನಸ್ಗಾಗಿ ಐಶ್ರ ಫೋಟೋಶೂಟ್ ವರ್ಣನೆಯನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದು ಐಶ್ ಒಂದೇ ನೋಟದಲ್ಲಿ ನಿಮಗೆ ಇಷ್ಟವಾಗುತ್ತಾರೆ. ದೇವಲೋಕದ ಚೆಲುವೆ ಐಶ್ವರ್ಯಗೆ ಸರಿಸಾಟಿ ಯಾರು?
ಕಪ್ಪು ಬಣ್ಣದ ಮ್ಯಾಕ್ಸಿ ಗೌನ್ನಲ್ಲಿ ಐಶ್ ಸೆಕ್ಸಿಯಾಗಿ ಕಾಣುತ್ತಿದ್ದಾರೆ. ಲಾಂಗಿನಸ್ ಜಾಹೀರಾತಿನಲ್ಲಿ ಕಣ್ಣು ಕುಕ್ಕುವ ಸೌಂದರ್ಯವತಿಯಾಗಿ ಐಶ್ ಮಿಂಚಿದ್ದು ಕಪ್ಪು ಬಣ್ಣಕ್ಕೆ ಸೊಬಗು ಬಂದಿರುವುದೇ ಇವರಿಂದ ಎಂಬುದಾಗಿ ಇಲ್ಲಿ ಹೇಳಬಹುದು. ಇನ್ನು ಇದೇ ವಾಚ್ನ ಜಾಹೀರಾತಿಗಾಗಿ ಐಶ್ ನೀಲಿ ಬಣ್ಣದ ಸ್ವೆಟರ್ ಮತ್ತು ಹೈ - ವೈಸ್ಟ್ ಪ್ಯಾಂಟ್ನಲ್ಲಿ ಮಿಂಚೋಟವನ್ನೇ ಹರಿಸಿದ್ದಾರೆ. ನಿಜಕ್ಕೂ ವಾಹ್ ಎಂಬ ಉದ್ಗಾರ ನಿಮ್ಮ ಬಾಯಲ್ಲಿ ಬರುತ್ತದೆ.
ನವೆಂಬರ್ 2015 ರ ಲಾಂಗಿನಸ್ ಐಶ್ರ ಸೌಂದರ್ಯವನ್ನು ಬಿಚ್ಚಿಟ್ಟಿದೆ. ಇನ್ನೊಂದು ಕಪ್ಪು ದಿರಿಸಿನಲ್ಲಿ ಐಶ್, ಸೊಬಗುಗಾತಿಯೆಂದೆನಿಸಿದ್ದು ಅಗಲ ಪಟ್ಟಿಗಳುಳ್ಳ ದಿರಿಸನ್ನು ಇವರು ತೊಟ್ಟಿದ್ದಾರೆ. ವಾಚ್ ಅನ್ನು ಐಶ್ ಪ್ರದರ್ಶಿಸಿರುವ ರೀತಿ ಅಮೋಘವಾಗಿದೆ. ನವೆಂಬರ್ ತಿಂಗಳ ಲಾಂಗಿನಸ್ಗಾಗಿ ಐಶ್ವರ್ಯಾ ರೈ ಬಚ್ಚನ್ರ ಫೋಟೋ ಶೂಟ್ ನಮಗೆ ನಿಜಕ್ಕೂ ಇಷ್ಟವಾಗಿದ್ದು, ನಿಮ್ಮ ಅಭಿಪ್ರಾಯವೂ ಇದೇ ಆಗಿದೆ ಅಲ್ಲವೇ?
Read in English - Photoshoot: Aishwarya Rai's Hot Black And Blue Looks For Longines, November Issue



Click it and Unblock the Notifications


