Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಲ್ಡನ್ ಗ್ಲೋಬ್ ಸಮಾರಂಭ: ಖ್ಯಾತ ನಟಿಯರಿಗೆ ಉಡುಗೆಯಿಂದ ಅವಮಾನ
ಪ್ರತಿ ವರ್ಷ ಹಾಲಿವುಡ್ ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಗೋಲ್ಡ್‍ನ್ ಗ್ಲೋಬ್ ಪ್ರಶಸ್ತಿಯು ಪ್ರಮುಖ ಪಾತ್ರವನ್ನು ಪಡೆದುಕೊಂಡಿದೆ. ಮೊನ್ನೆಯಷ್ಟೇ 75ನೇ ಸಾಲಿನ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭವು ಕೊನೆ ಗೊಂಡಿತು. ಹಾಲಿವುಡ್‍ನ ಪ್ರಖ್ಯಾತ ತಾರೆಗಳು ವಿಭಿನ್ನ ಶೈಲಿಯ ಉಡುಗೆಯನ್ನು ಧರಿಸುವುದರ ಮೂಲಕ ಕಾರ್ಯಕ್ರಮದ ಸೊಬಗನ್ನು ದ್ವಿಗುಣ ಗೊಳಿಸಿದರು. ಇತ್ತೀಚೆಗೆ ಪ್ರಶಸ್ತಿ ಪ್ರಧಾನ ಸಮಾರಂಭಗಳು ಧಾರ್ಮಿಕ ರೀತಿಯಲ್ಲಿ ಸಂಬಂಧವನ್ನು ಪಡೆದುಕೊಳ್ಳುತ್ತಿರುವುದು ಸಹ ಒಂದು ವಿಶೇಷದ ಸಂಗತಿ ಎನ್ನಬಹುದು.
ಈ ಕಾರ್ಯಕ್ರಮದ ವಿಶೇಷ ಸಂದರ್ಭದಲ್ಲಿ ಹಲವಾರು ನಟ ನಟಿಯರು ತಮ್ಮದೇ ಆದ ವಿಶೇಷ ಉಡುಗೆಯ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದರು ಎನ್ನುವುದು ಫ್ಯಾಷನ್ ಲೋಕಕ್ಕೆ ಒಂದು ಹೆಮ್ಮೆಯ ಸಂಗತಿ ಎನ್ನಬಹುದು. ಕೆಲವು ಅತಿಥಿಗಳು ತಮ್ಮ ವಿಭಿನ್ನ ಉಡುಗೆಯ ಜೊತೆ ಕೆಲವು ಹೇಳಿಕೆಯನ್ನು ಕೊಡುವುದರ ಮೂಲಕವೂ ಸುದ್ದಿಯಾಗಿದ್ದಾರೆ ಎನ್ನುವುದನ್ನು ಸಹ ನಾವು ತಿಳಿಯಲೇಬೇಕಾದ ಸಂಗತಿ. ಕೆಲವು ವರ್ಷಗಳಿಂದ ಈ ಸಮಾರಂಭಗಳಲ್ಲಿ ಕೆಲವು ಖ್ಯಾತ ನಟಿಯರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.
ಅರೇ! ಎಂಬ ಆಶ್ಚರ್ಯ ನಿಮ್ಮನ್ನು ಕಾಡುತ್ತಿದೆಯಾ? ಹೌದು ಪ್ರತಿವರ್ಷ ಎನ್ನುವಂತೆ ಕೆಲವು ವರ್ಷಗಳಿಂದ ಖ್ಯಾತ ನಟಿಯರು ತೊಟ್ಟ ಉಡುಗೆಯಲ್ಲಿ ಉಂಟಾದ ಎಡವಟ್ಟುಗಳಿಂದ ಕೊಂಚ ಮುಜುಗರಕ್ಕೆ ಒಳಗಾಗುತ್ತಾ ಬಂದಿದ್ದಾರೆ. ಆ ನಟಿಯರು ಧರಿಸಿದ್ದ ಧಿರಿಸಿನ ಸೊಬಗು ಹೇಗಿತ್ತು? ಯಾವ ವರ್ಷದಲ್ಲಿ ಯಾವ ನಟಿಯರು ಇರಿಸು ಮುರಿಸಿಗೆ ಒಳಗಾಗಿದ್ದರು ಎನ್ನುವುದನ್ನು ತಿಳಿಯೋಣ ಬನ್ನಿ...

ಹೇಡನ್ ಪನೆಟ್ಟಿಯರ್
ಜನಪ್ರಿಯ ಹಾಲಿವುಡ್ ನಟಿ ಹೇಡನ್ ಪನೆಟ್ಟಿಯರ್. ಅವರು 2011ನೇ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಅರೆಪಾರದರ್ಶಕವಾದ ಗೌನ್‍ಅನ್ನು ಧರಿಸಿದ್ದರು. ಲ್ಪಂಗ್‍ಗಿಂಗ್ ನೆಕ್ ಶೈಲಿಯ ಗೌನ್ ಅದಾಗಿತ್ತು. ಅವರ ಎದೆ ಭಾಗವನ್ನು ಮರೆಮಾಚಿಕೊಂಡ ಪ್ಯಾಡ್‍ಗಳು ಉಡುಪಿನ ಒಳ ಭಾಗದಲ್ಲಿ ಇತ್ತಾದರೂ ಹೊರಗಡೆಯಿಂದ ಸಂಪೂರ್ಣವಾಗಿ ಗೋಚರಿಸುತ್ತಿತ್ತು. ಇದು ಅವರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಗೌನ್ ಸುಂದರವಾಗಿತ್ತಾದರೂ ಒಳ ಭಾಗದಲ್ಲಿ ಒಂದು ಲೈನಿಂಗ್ ಬಟ್ಟೆಯನ್ನು ಕೊಟ್ಟಿದ್ದರೆ ಇನ್ನಷ್ಟು ಆಕರ್ಷಕ ಹಾಗೂ ಸುರಕ್ಷಿತವಾಗಿರುತ್ತಿತ್ತು.

ಜೆನ್ನಿಫರ್ ಅನಿಸ್ಟನ್
ಫ್ರೆಂಡ್ಸ್ ಖ್ಯಾತಿಯ ಜೆನ್ನಿಫರ್ ಸದಾ ತನ್ನ ವಿಶೇಷ ಶೈಲಿಯ ಉಡುಗೆ-ತೊಡುಗೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ ಎನ್ನುವ ಖ್ಯಾತಿಗೆ ಒಳಗಾದವರು. 2015ರ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಕಪ್ಪು ಬಣ್ಣದ ಕಸೂತಿಯ ಗೌನ್‍ಅನ್ನು ಧರಿಸಿದ್ದರು. ಆದರೆ ಆ ಗೌನ್‍ಗೆ ಬಹಳ ಆಳವಾದ ಸೈಡ್ ಸ್ಲಿಟ್ ಇದ್ದುದರಿಂದ ಅವರು ನಡೆದು ಬರುವಾಗ ಒಳ ಉಡುಪು ಕಾಣಿಸುತ್ತಿತ್ತು. ಅದು ಅವರಿಗೆ ಅತ್ಯಂತ ಮುಜುಗರ ಉಂಟಾಗುವಂತೆ ಮಾಡಿತು. ಆದರೂ ಅವರು ಕೆಲವು ನಿರ್ವಹಣಾ ಕೌಶಲ್ಯದಿಂದ ನಿಭಾಯಿಸಿಕೊಂಡರು ಎನ್ನಲಾಗುತ್ತದೆ.

ಕೆಲ್ಲಿ ಆಸ್ಬಾರ್ನ್
ಒಂದು ವರ್ಷ ಗೋಲ್ಡ್‍ನ್ ಗ್ಲೋಬ್ ಸಮಾರಂಭದಲ್ಲಿ ಕೆಲ್ಲಿ ಆಸ್ಬಾರ್ನ್ ರೆಡ್ ಕಾರ್ಪೆಟ್ ಮೇಲೆ ಹಾದುಹೋಗುವಾಗ ಅವರ ಜಿಪ್ಪರ್ ಮುರಿದು ಬಿತ್ತು. ಸ್ಟೈಲಿಶ್ ಮತ್ತು ಆಕರ್ಷಕವಾಗಿದ್ದ ಆ ಉಡುಗೆ ಅವರನ್ನು ಅತ್ಯಂತ ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಆ ಸಮಯದಲ್ಲಿ ವಿನ್ಯಾಸ ಗೊಳಿಸಿದ್ದ ತಂಡ ಅಲ್ಲೇ ಇದ್ದುದರಿಂದ ಕೂಡಲೆ ಸರಿಪಡಿಸಿದರು.

ಜುಲಿಯನ್ ಹಗ್
ಇವರು ಅತ್ಯುತ್ತಮ ನಟಿ ಹಾಗೂ ನೃತ್ಯಗಾರರು ಹೌದು. 2013ರಲ್ಲಿ ನಡೆದ ಗೋಲ್ಡ್‍ನ್ ಗ್ಲೋಬ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರು ತೊಟ್ಟ ಗೌನ್ ತೊಡೆಯ ಭಾಗದಲ್ಲಿ ಅತಿ ಹೆಚ್ಚು ಬಿಗಿತದಿಂದ ಕೂಡಿತ್ತು ಇವರು ನಡೆದು ಸಾಗುವಾಗ ಅದು ಸೀಳಿನ ರೂಪದಲ್ಲಿ ಹರಿಯಿತು. ಆ ಹರುಕಲು ಉಡುಗೆಯ ಜೊತೆಯಲ್ಲೇ ಕ್ಯಾಮೆರಾ ಮುಂದೆ ತಮಾಷೆಯ ರೀತಿಯಲ್ಲಿ ಫೋಸ್ ನೀಡಿದ್ದರು.

ರಾಬಿನ್ ರೈಟ್
ರಾಬಿನ್ ರೈಟ್ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಆ ಸಂದರ್ಭದಲ್ಲಿ ಅವರು ತೊಟ್ಟಿದ್ದ ಉಡುಗೆ ಅವರ ಮುಜುಗರಕ್ಕೆ ಕಾರಣವಾಯಿತು. ಎದೆ ಭಾಗವನ್ನು ಸೂಕ್ತ ರೀತಿಯಲ್ಲಿ ಮುಚ್ಚಿಕೊಳ್ಳದೆ ಇರುವುದರಿಂದ ಕೈ ಮೇಲೆ ಎತ್ತಿದಾಗ ಸಂಪೂರ್ಣವಾಗಿ ಗೋಚರವಾಗುತ್ತಿತ್ತು.

ಸಾರಾ ಹೈಲ್ಯಾಂಡ್
ಸಾರಾ ಹೈಲ್ಯಾಂಡ್ ಒಮ್ಮೆ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರು ಕಾರ್ಯಕ್ರಮದಲ್ಲಿ ಭಾಗವಿಸಿರುವಾಗ ಧರಿಸಿದ್ದ ಉಡುಗೆಯ ಜಿಪ್ಪರ್ ಕಟ್ಟಾಗಿ ಬಿತ್ತು. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅವರ ವಿನ್ಯಾಸಕರು ಅದನ್ನು ಸರಿಪಡಿಸಿದರು.

ಇವಾ
2013ರಲ್ಲಿ ನಡೆದ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಅವರು ಉದ್ದವಾದ ಗೌನ್ ಹಾಗೂ ಆಳವಾದ ಸ್ಲಿಟ್ ಹೊಂದಿದ್ದರು. ಅದು ಅವರು ನಡೆಯುವಾಗ ಒಳಾಂಗಗಳು ಪ್ರದರ್ಶನಗೊಳ್ಳುತ್ತಿತ್ತು. ಈ ವೇಳೆ ಅವರು ಅದನ್ನು ಮರೆ ಮಾಚಿಕೊಳ್ಳಲು ಹೆಚ್ಚು ಪರಿಶ್ರಮಕ್ಕೆ ಒಳಗಾಗಬೇಕಾಯಿತು.

ಕ್ಲೋಯ್ ಸೆವಿಗ್ನಿ
2010ರಲ್ಲಿ ಕ್ಲೋಯ್‍ಸೆವಿಗ್ನಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ತೊಟ್ಟ ಉಡುಗೆ ಹೆಚ್ಚು ಆಕರ್ಷಕವಾಗಿತ್ತು. ಆದರೂ ಅವರ ಬೆನ್ನಿನ ಹಿಂಭಾಗದಲ್ಲಿ ಗೌನ್ ಹರಿದು ಮುಜುಗರಕ್ಕೆ ಒಳಗಾಗ ಬೇಕಾಯಿತು.



Click it and Unblock the Notifications