Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಳದಿ ದಿರಿಸಿನಲ್ಲಿ ಫ್ಯಾಷನ್ ಮಂತ್ರ ಕಲಿಸಿದ ಕಂಗನಾ
ಬಾಲಿವುಡ್ ಕ್ವೀನ್ ಗುಂಗುರು ಕೂದಲಿನ ಸೊಗಸುಗಾತಿ ಕಂಗನಾ ರಾಣಾವತ್ ಬಾಲಿವುಡ್ ಅಂಗಳದಲ್ಲಿ ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದಾರೆ. ಬೋಲ್ಡ್ ಪಾತ್ರದಲ್ಲಿ ಮಿಂಚುವ ಈ ನಟಿಗೆ ಭಾಗ್ಯದ ಬಾಗಿಲು ತೆರೆದಿದ್ದು ಕ್ವೀನ್ ಮತ್ತು ತನು ವೆಡ್ಸ್ ಮನು ಚಿತ್ರಗಳಾಗಿವೆ. ತಮ್ಮ ಸೂಜಿಗಲ್ಲಿನಂತಹ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಡುವ ತಾಕತ್ತು ಈ ನಟಿಗೆ ಕರತಲಾಮಲಕವಾಗಿದೆ. ಸಿನಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲೂ ಈ ನಟಿ ಮಾಡುವ ಮೋಡಿ ಅತ್ಯದ್ಭುತವಾಗಿದೆ.
ಹೊಸ ಹೊಸ ಫ್ಯಾಷನ್ ಟ್ರೆಂಡ್ಗಳೊಂದಿಗೆ ಕಂಗನಾ ಫ್ಯಾಷನ್ ಪ್ರಿಯರ ಮನಗೆದ್ದಿದ್ದಾರೆ. ಇಂದಿನ ಲೇಖನದಲ್ಲಿ ಕೂಡ ಈ ಚೆಲುವೆಯ ಫ್ಯಾಷನ್ ಮಂತ್ರ ಹೇಗಿದೆ ಎಂಬುದನ್ನು ನಿಮಗೆ ತೋರಿಸಲಿದ್ದೇವೆ. ತಮ್ಮ ಅಂದವಾದ ದೇಹವನ್ನು ಯಾವುದೇ ಬಗೆಯ ದಿರಿಸಿನಲ್ಲಿ ಕೂಡ ಹಿಡಿದಿಡುವ ಕಲೆ ಈ ಚೆಲುವೆಗೆ ಗೊತ್ತಿದ್ದು ಅದುವೇ ಅವರ ಯಶಸ್ಸಿನ ಟಾಪ್ ಸೀಕ್ರೆಟ್ ಎಂದೆನಿಸಿದೆ. ಫ್ಯಾಷನ್ ಲೋಕದ ಅನಭಿಷಕ್ತ ರಾಣಿ- ಕಂಗನಾ ರಾಣಾವತ್!

ಹಳದಿ ಬಣ್ಣದ ಟೂ ಪೀಸ್ನಲ್ಲಿ ಕಂಗನಾ ನಿಜಕ್ಕೂ ಸ್ಟೈಲ್ ಐಕಾನ್ ಎಂದೆನಿಸಿದ್ದಾರೆ. ಬ್ಲೇಜರ್ ಮತ್ತು ಸ್ಕರ್ಟ್ ಬಣ್ಣ ನಿಜಕ್ಕೂ ಅನುರೂಪವಾಗಿದ್ದು ಅವರ ಸೌಂದರ್ಯವನ್ನು ಎದ್ದುಗಾಣಿಸಿದೆ. ಉಡುಗೆಗೆ ಇನ್ನಷ್ಟು ಅಂದವನ್ನು ನೀಡುವ ಬೌ ಟೈಯನ್ನು ಅವರು ಕಟ್ಟಿಕೊಂಡಿದ್ದು ಸ್ಟೈಲಿಶ್ ಚಪ್ಪಲಿಗಳ ಮೂಲಕ ಇನ್ನಷ್ಟು ಗ್ಲಾಮರಸ್ ನೋಟವನ್ನು ನೀಡಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮ್ಮಿತ್ನಲ್ಲಿ ಕಂಗನಾ ಈ ಉಡುಗೆಯನ್ನು ತೊಟ್ಟಿದ್ದು ನಿಮಗೆ ಆಕೆಯ ಈ ಸ್ಟೈಲ್ ಟ್ರೆಂಡ್ ಹೊಸ ಫ್ಯಾಷನ್ ಪಾಠವನ್ನು ಕಲಿಸಿಕೊಟ್ಟಿದೆ ಅಲ್ಲವೇ?



Click it and Unblock the Notifications
