Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೀ & ಕಾ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕಪೂರ್ ಜೋಡಿಗಳು
ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳ ಪ್ರಚಾರ ಸಂದರ್ಭದಲ್ಲಿ ಒಂದಿನಿತೂ ಕೊರತೆಯಾಗದಂತೆ ಕಾರ್ಯಕ್ರಮಗಳನ್ನು ನೆರವೇರಿಸಿಕೊಡುತ್ತಾರೆ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರಗಳಾದ ಫಿತೂರ್, ತಮಾಷಾ, ದಿಲ್‌ವಾಲೆ ಮೊದಲಾದ ಚಿತ್ರಗಳನ್ನು ಬಾಲಿವುಡ್ ಸ್ಟಾರ್‌ಗಳು ಹೇಗೆ ಪ್ರಚಾರ ಪಡಿಸಿದ್ದಾರೆ ಎಂಬುದನ್ನು ನೀವು ನೋಡಿರುತ್ತೀರಿ. ಅಂತೂ ನಟನೆಗೂ ಸೈ ಪ್ರಚಾರಕ್ಕೂ ಜೈ ಎಂಬ ಘೋಷಣೆಯೊಂದಿಗೆ ಈ ಸೆಲೆಬ್ರಿಟಿಗಳು ತಮ್ಮ ಚಿತ್ರ ಪ್ರಚಾರದಲ್ಲಿ ಗೈರು ಹಾಜರಾಗದೇ ಮುಂಬರಲಿರುವ ಚಿತ್ರಗಳನ್ನು ಪ್ರಚಾರ ಪಡಿಸುತ್ತಿದ್ದಾರೆ.

ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಅಭಿನಯದ ಕೀ ಅಂಡ್ ಕಾ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಈ ಇಬ್ಬರೂ ಸ್ಟಾರ್‌ಗಳು ಅದ್ಭುತವಾಗಿ ಕಾಣಿಸಿಕೊಂಡು ತಮ್ಮ ಹೊಸ ಸಿನಿಮಾಕ್ಕಾಗಿ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾರೆ. ತಮ್ಮ ಫ್ಯಾಷನ್ ಮಂತ್ರಗಳನ್ನು ಚಿತ್ರದ ಟ್ರೈಲರ್ ಸಂದರ್ಭದಲ್ಲಿ ಇವರಿಬ್ಬರೂ ಪ್ರದರ್ಶಿಸಿದ್ದು ಭರವಸೆಯ ನಟರಾಗಿ ಇವರುಗಳು ಕಾಣಿಸಿಕೊಂಡಿದ್ದಾರೆ. ಫ್ಲೋರಲ್ ಗೌನ್‌ನಲ್ಲಿ ಮಿಂಚಿದ ಕರೀನಾ ಕಪೂರ್
ಕೆಂಪು ಬಣ್ಣದ ಮ್ಯಾಕ್ಸಿಯೊಂದಿಗೆ ಕಪ್ಪು ಕ್ಯಾಮಿಸೋಲ್ ಮತ್ತು ಕಪ್ಪು ಬ್ಲೇಜರ್ ಅನ್ನು ತೊಟ್ಟು ಕರೀನಾ ತಮ್ಮ ಎಂದಿನ ಸೊಬಗನ್ನು ಇನ್ನಷ್ಟು ವರ್ಣಮಯವಾಗಿಸಿದ್ದಾರೆ. ತಮ್ಮ ಕೇಶವಿನ್ಯಾಸವನ್ನು ಇನ್ನಷ್ಟು ಸೊಗಸಾಗಿಸಬಹುದಾಗಿತ್ತು ಎಂದು ತೋರಿದರೂ ಅದನ್ನು ತಮ್ಮ ಸ್ಟೈಲ್ ಮೂಲಕ ಮರೆಮಾಚಿ ಹೇಗೆ ಫ್ಯಾಷನೇಬಲ್ ಆಗಿ ಕಾಣಿಸಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ.
ಅರ್ಜುನ್ ಕಪೂರ್ ಬ್ಲೇಜರ್ ದಿರಿಸನ್ನು ಧರಿಸಿದ್ದರೂ ಎಲ್ಲರನ್ನೂ ತಮ್ಮ ಸರಳ ನೋಟದಲ್ಲಿ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡಿದ್ದರು. ನೀಲಿ ಬಣ್ಣದ ಜೀನ್ಸ್ ಅನ್ನು ಧರಿಸಿ ಅದೇ ಬಣ್ಣದ ಬ್ಲೇಜರ್ ತೊಟ್ಟು ಅದಕ್ಕೆ ತಕ್ಕುದಾದ ಬಿಳಿಯ ಸ್ನೀಕರ್‌ನಲ್ಲಿ ಅರ್ಜುನ್ ಮಿಂಚಿದ್ದಾರೆ. ಅಂತೂ ಇವರಿಬ್ಬರ ಈ ಫ್ಯಾಷನ್ ಪಾಠ ನಿಜಕ್ಕೂ ಸರಳ ಸುಂದರವಾಗಿ ಮನವನ್ನು ಹಿಡಿದಿಡುವಂತಿತ್ತು.



Click it and Unblock the Notifications

