Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಳುಕುವ ಬಳ್ಳಿ 'ಕಂಗನಾ ರಣಾವತ್' ರವರ ಸ್ಟೈಲಿಶ್ ಲುಕ್
ದಿರಿಸುಗಳ ಆಯ್ಕೆಯಲ್ಲೂ ಹೆಚ್ಚು ಜಾಣೆಯಾಗಿರುವ ಕಂಗಾನ ತಾವು ಧರಿಸಿರುವ ದಿರಿಸಿಗೆ ಹೇಗೆ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರಿತವರಾಗಿದ್ದಾರೆ....
ಬಾಲಿವುಡ್‌ನಲ್ಲಿ ಪ್ರಸ್ತುತ ತಮ್ಮ ಪ್ರಸ್ತುತತೆಯನ್ನು ಸಾರುತ್ತಿರುವ ಕಂಗನಾ ರಣಾವತ್ ಪ್ರತಿಭಾವಂತ ನಾಯಕಿ ಎಂದೆನಿಸಿದ್ದಾರೆ. ಪ್ರತಿಭೆಯನ್ನು ಹೊರಹಾಕುವಂತಹ ಪಾತ್ರಗಳನ್ನೇ ಕಂಗನಾ ಆರಿಸಿಕೊಂಡು ಸೈ ಅನ್ನಿಸಿಕೊಂಡು ಸದ್ಯಕ್ಕೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ ಎಂದೆನಿಸಿದ್ದಾರೆ.

ದಿರಿಸುಗಳ ಆಯ್ಕೆಯಲ್ಲೂ ಹೆಚ್ಚು ಜಾಣೆಯಾಗಿರುವ ಕಂಗಾನ ತಾವು ಧರಿಸಿರುವ ದಿರಿಸಿಗೆ ಹೇಗೆ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರಿತವರಾಗಿದ್ದಾರೆ. ಸೂಟ್, ಸೀರೆ, ಪ್ರಿನ್ಸಸ್ ಗೌನ್ ಹೀಗೆ ಕಂಗನಾ ಟ್ರೈ ಮಾಡದ ಉಡುಪುಗಳೇ ಇಲ್ಲ ಎಂದೆನ್ನಬಹುದು.
ಇತ್ತೀಚೆಗೆ ತಾನೇ ಕಂಗನಾ ಈವೆಂಟ್ ಒಂದರಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದರು. ಸಿಂಡ್ರಲ್ಲಾ ಪಾತ್ರದಲ್ಲೂ ಕಂಗನಾ ಬೆಸ್ಟ್ ಎಂಬುದನ್ನು ಈ ದಿರಿಸು ಎದ್ದು ಕಾಣಿಸುತ್ತಿತ್ತು.
60 ರ ಬಾಲ್ ಗೌನ್ ಮಾದರಿಯಲ್ಲಿ ಈ ದಿರಿಸನ್ನು ವಿನ್ಯಾಸಗೊಳಿಸಲಾಗಿತ್ತು. ದಿರಿಸಿಗೆ ಹೊಂದಿಕೆಯಾಗುವಂತೆ ಕಂಗನಾ ವಜ್ರದ ನೆಕ್ಲೇಸ್ ಮತ್ತು ಕಿವಿಯಾಭರಣಗಳನ್ನು ತೊಟ್ಟುಕೊಂಡಿದ್ದರು.
ಅಂತೆಯೇ ತಮ್ಮ ಕೇಶವಿನ್ಯಾಸವನ್ನು ಕೂಡ ದಿರಿಸಿಗೆ ಒಪ್ಪುವಂತೆ ಅವರು ಮಾಡಿಕೊಂಡಿದ್ದರು. ಅಂತೂ ಸಿಂಡ್ರೆಲ್ಲಾ ದಿರಿಸು ಮತ್ತು ಅದರಂತೆಯೇ ಮಾಡಿಕೊಂಡ ಮೇಕಪ್‌ಗಳಿಂದ ಕಂಗನಾ ರಾಜ ಕುಮಾರಿಯಂತೆ ಕಂಗೊಳಿಸಿದ್ದಂತೂ ಸುಳ್ಳಲ್ಲ.



Click it and Unblock the Notifications



