Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನ್ ರಾಣಿ ಕಲ್ಕಿ ಕೋಚ್ಲಿನ್‌ರವರ ವರ್ಣರಂಜಿತ ಝಲಕ್
ಕಲ್ಕಿ ಕೊಯೆಚ್ಲಿನ್‌ರವರು ಒಬ್ಬ ಅದ್ಭುತ ನಟಿ ಎಂದು ಈಗಾಗಲೇ ನಿರೂಪಿಸಿದ್ದಾರೆ. ಆಕೆಯ ವಸ್ತ್ರಗಳು ಫ್ಯಾಷನ್ ಕುರಿತಾಗಿ ಆಕೆಯ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಆಕೆಯ ಇಂಡಿ ಫ್ಯಾಷನ್ ಈಗಾಗಲೇ ಜನಪ್ರಿಯಗೊಂಡಿದೆ. ಕಲ್ಕಿ ಫ್ಯಾಷನ್ ಪ್ರಜ್ಞೆಯು ಉದ್ಯಮದ ಇತರರಿಗಿಂತ ವಿಭಿನ್ನವಾಗಿದ್ದು, ಆಗಾಗ ಬದಲಾಗುತ್ತಾ ಇರುತ್ತದೆ. ಈ ಬಾರಿ ಆಕೆ ಕ್ಯಾಶುವಲ್ ಆಗಿ ಒಂದು ಬಟ್ಟೆಯನ್ನು ಧರಿಸಿದ್ದರೂ, ಅದಕ್ಕೆ ಒಂದು ಬೊಹಿಮಿಯನ್ ಸ್ಪರ್ಶವನ್ನು ನೀಡಿದ್ದರು.

ಕಲ್ಕಿ ಈ ಬಾರಿ ಮಸ್ಟರ್ಡ್ ಯೆಲ್ಲೋ ಡೀಪ್ ನೆಕ್ ಇದ್ದ, ಸಂಪೂರ್ಣ ಫ್ಲೋರಲ್ ಪ್ರಿಂಟ್ ಅನ್ನು ಹೊಂದಿದ್ದ ಸ್ಲೀವ್‍ಲೆಸ್ ಉಡುಗೆಯನ್ನು ಧರಿಸಿದ್ದರು. ಇಡೀ ಬಟ್ಟೆಯು ಸೊಂಟದ ಬಳಿ ಒಂದುಗೂಡಿ, ಅದಕ್ಕೆ ಎ-ಲೈನ್ ವಿನ್ಯಾಸವನ್ನು ನೀಡಿದ್ದವು. ಕಲ್ಕಿ ಇದರ ಮೇಲೆ ಕೆಂಪು ಸ್ವೆಟರ್ ಹಾಕಿಕೊಂಡು, ಅದಕ್ಕೆ ಕೆಂಪು ಸ್ಪರ್ಶವನ್ನು ನೀಡಿದ್ದರು. ಈ ಸ್ವೆಟರನ್ನು ಆಕೆ ಸೊಂಟಕ್ಕೆ ಸುತ್ತಿಕೊಂಡಿದ್ದಳು.
ಕಲ್ಕಿ ಈ ಉಡುಗೆಗೆ ಹೊಂದುವಂತಹ ಕಿಟ್ಟನ್ ಹೀಲ್‌ಗಳನ್ನು ಧರಿಸಿದ್ದಳು. ಆಕೆಯ ಕೈಗಳಲ್ಲಿದ್ದ ಹಳದಿ ಬಳೆಗಳು ಸಹ ಉಡುಗೆಯ ಅಂದವನ್ನು ಹೆಚ್ಚಿಸಿದ್ದವು. ಕಲ್ಕಿ ಈ ಲುಕ್‌ಗೆ ಮೇಕಪ್ ಅನ್ನು ಕಡಿಮೆ ಮಾಡಿಕೊಂಡಿದ್ದಳು.
ಅದು ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ನಿಮಗೂ ಕಲ್ಕಿಯ ಈ ಆಫ್‌ಬೀಟ್ ಲುಕ್ ಇಷ್ಟವಾಯಿತಾ? ಆಗಿದ್ದಲ್ಲಿ ನಮಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.



Click it and Unblock the Notifications


