Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಯೂಟಿ ಕ್ವೀನ್ ಕಾಜಲ್ ಅಗರ್ವಾಲ್ರ ಫ್ಯಾಷನ್ ಝಲಕ್!
ಬಾಲಿವುಡ್ ಅಂಗಳದಲ್ಲಿ ಬ್ಯೂಟಿ ಐಕಾನ್ಗಳು ತಮ್ಮ ಸುಂದರತೆಯಿಂದ ಗಮನ ಸೆಳೆಯುತ್ತಿದ್ದಾರೆ. ಆಲಿಯಾ ಭಟ್, ಶ್ರದ್ಧಾ ಕಪೂರ್, ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್ ಹೀಗೆ ಬಾಲಿವುಡ್ ಬೆಡಗಿಯರು ತಮ್ಮ ಹೊಸ ಹೊಸ ಸ್ಟೈಲ್ಗಳಿಂದ ಅಭಿಮಾನಿ ಬಳಗವನ್ನು ಅಪಾರವಾಗಿ ಹೊಂದಿದ್ದಾರೆ.
ಈಗ ಇದೇ ಸಾಲಿಗೆ ಸೇರುತ್ತಿರುವ ಖ್ಯಾತಿವೆತ್ತ ನಾಯಕಿ ಕಾಜಲ್ ಅಗರ್ವಾಲ್. ತಮಿಳು, ತೆಲುಗು ಹೀಗೆ ದಕ್ಷಿಣ ಭಾರತದಲ್ಲಿ ಕೊಂಚ ಹೆಸರು ಮಾಡಿರುವ ಬೆಡಗಿ ಬಾಲಿವುಡ್ನಲ್ಲೂ ತಮ್ಮ ಝಲಕ್ ಅನ್ನು ತೋರಿಸುತ್ತಿದ್ದಾರೆ. ಈಗ ಸರಳವಾಗಿ ಸ್ಟೈಲಿಶ್ ಆಗಿ ಕಾಣುವುದು ಹೇಗೆ ಎಂಬುದನ್ನು ಈ ಬೆಡಗಿ ನಮಗೆ ತಿಳಿಸಿಕೊಡುತ್ತಿದ್ದು ಅದನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.

ನಿಜಕ್ಕೂ ಕಾಜಲ್ ಸೌಂದರ್ಯವನ್ನು ನೋಡುವಾಗ ಬಾಲಿವುಡ್ನ ಬ್ಯೂಟಿ ಐಕಾನ್ ಎಂಬ ಹೆಸರಿಗೆ ಪಾತ್ರರಾದವರು ಆಕೆಯೇ ಎಂದನಿಸುತ್ತಿದೆ. ಶಾಹಿನ್ ಮನ್ನಾನ್ ವಿನ್ಯಾಸದ ದಿರಿಸನ್ನು ಧರಿಸಿ ಕಾಜಲ್ ಇನ್ನಷ್ಟು ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಕಾಜಲ್ರ ಸಪೂರ ಮೈಮಾಟಕ್ಕೆ ಒಪ್ಪುವಂತಹ ದಿರಿಸನ್ನು ಕಾಜಲ್ ಧರಿಸಿದ್ದು ಹಿಂಭಾಗದಲ್ಲಿ ಬ್ಯಾಕ್ ಪ್ಯಾನಲಿಂಗ್ ಅನ್ನು ಹೊಂದಿದೆ.
ಇದು ಕಂದು ಬಣ್ಣದಲ್ಲಿದ್ದು ಆಕೆಯ ಮೈಮಾಟಕ್ಕೆ ಒಪ್ಪುವಂತಿದೆ. ಆದಷ್ಟು ತಮ್ಮ ನೋಟವನ್ನು ಸರಳವಾಗಿರಿಸುವ ಕಾಜಲ್ ಕಪ್ಪು ಬಣ್ಣದ ಹೀಲ್ಡ್ ಅನ್ನು ಧರಿಸಿ ಸಹಜ ಸುಂದರಿಯಾಗಿ ಕಾಣುತ್ತಿದ್ದರು. ಕೂದಲಿನ ಅಲಂಕಾರವನ್ನು ಸರಳವಾಗಿಸಿ ಅದನ್ನು ಲೂಸಾಗಿ ಹಾರಲು ಬಿಟ್ಟಿದ್ದಾರೆ. ತಮ್ಮ ದಿರಿಸಿಗೆ ಒಪ್ಪುವಂತಹ ಕೇಶಾಲಂಕಾರ ಮತ್ತು ಮುಖದ ಅಲಂಕಾರವನ್ನು ಕಾಜಲ್ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು



Click it and Unblock the Notifications

