Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕಣ್ಣು ಕುಕ್ಕುವ ಹಸಿರು ಲೆಹಂಗಾದಲ್ಲಿ ಮಿಂಚಿದ ಕಿಯಾರಾ ಅಡ್ವಾನಿ

ಲಸ್ಟ್ ಸ್ಟೋರೀಸ್‌ನಲ್ಲಿ ಅಭಿನಯಿಸಿರುವ ಕಿಯಾರಾ ಅಡ್ವಾನಿ ಶ್ಯಾಮಲ್ ಮತ್ತು ಭೂಮಿಕಾ ವಿನ್ಯಾಸ ಪಡಿಸಿರುವ ದಿರಿಸು ಧರಿಸಿ ಶೋ ಸ್ಟಾಪರ್ ಆಗಿ ಮಿಂಚಿದ್ದಾರೆ. ಹಸಿರು ಬಣ್ಣದ ದಿರಿಸಿನಲ್ಲಿ ಸಖತ್ತಾಗಿ ಕಾಣುತ್ತಿರುವ ಕಿಯಾರಾ ಮ್ಯೂಸ್ ಆಫ್ ಮಿರರ್ಸ್ ಸಂಗ್ರಹದಲ್ಲಿ ಬಂದಿರುವ ಉಡುಪನ್ನ ಆಕೆ ಧರಿಸಿದ್ದಾರೆ. ಆಕೆಯ ನೋಟ ನಿಜಕ್ಕೂ ಮನವನ್ನು ಕದಿಯುವಂತಿದ್ದು ಕಿಯಾರಾ ಸಖತ್ತಾಗಿ ಕಾಣುತ್ತಿದ್ದಾರೆ. ಕಿಯರಾ ಧರಿಸಿರುವ ಲೆಹಂಗಾ ನೆಲಕ್ಕೆ ಮುಟ್ಟುವಂತಿದ್ದು ವಿವಾಹ ಸಂದರ್ಭಗಳಲ್ಲಿ ಹೇಳಿ ಮಾಡಿಸಿರುವಂಥದ್ದಾಗಿದೆ ಇದಕ್ಕೆ ಸೂಕ್ತವಾಗಿರುವ ಕ್ರಾಪ್ ರವಿಕೆಯನ್ನು ಆಕೆ ತೊಟ್ಟಿದ್ದು ಅದರಲ್ಲಿ ಹೊಳೆಯುವ ಬೊಟ್ಟುಗಳನ್ನು ನಾವು ಕಾಣಬಹುದು. ಆಕೆಯ ಲೆಹಂಗಾದಲ್ಲಿ ನೆರಿಗೆಗಳಿದ್ದು ಎಲ್ಲಾ ವರ್ಣಗಳ ಮಿಶ್ರಣವಾಗಿದೆ ಎಂದೇ ಹೇಳಬಹುದು. ಕಣ್ಣಿಗೆ ಕುಕ್ಕುವಂತಿರದೆ ಸುಂದರವಾಗಿ ಆಕರ್ಷಕವಾಗಿ ಮೂಡಿ ಬಂದಿದೆ.
ಆಕೆಯ ಲೆಹಂಗಾದಲ್ಲಿ ಫ್ಯಾಬ್ರಿಕ್ ಸೆಲೆಬ್ರೇಷನ್, ಕ್ಲಾಸಿಕ್ ಎಂಬ್ರಾಯಿಡರಿ ಮತ್ತು ಜರ್‌ದೋಜಿಯನ್ನು ನಾವು ಕಂಡುಕೊಳ್ಳಬಹುದಾಗಿದೆ. ವಿವಾಹಕ್ಕೆ ಝರಿಗಳನ್ನು ಹೊಂದಿರುವ ಕಣ್ಣು ಕೋರೈಸುವ ಉಡುಪನ್ನು ಧರಿಸದೇ ಈ ಬಗೆಯ ಉಡುಪನ್ನು ಧರಿಸಬಹುದು ಎಂದು ವಿನ್ಯಾಸಕಾರರು ಈ ಮೂಲಕ ತಿಳಿಸಿದ್ದಾರೆ. ಆರ್ ಕೆ ಜ್ಯುವೆಲ್ಲರ್ಸ್‌ನ ಗೋಲ್ಡ್ ಕುಂದನ್ ಚೋಕರ್ ಅನ್ನು ಅವರು ತೊಟ್ಟಿದ್ದು ತಾಜಾ ಮೇಕಪ್ ಮತ್ತು ಕೆನ್ನೆಗಳಿಗೆ ಗುಲಾಬಿ ರಂಗನ್ನು ಅವರು ಹಚ್ಚಿಕೊಂಡಿದ್ದಾರೆ. ಮಧ್ಯಭಾಗದಲ್ಲಿ ಬೈತೆಲೆ ತೆಗೆದು ಕೇಶಾಲಂಕಾರವನ್ನು ಮಾಡಿದ್ದಾರೆ.
ಇಂಡಿಯಾ ಕೌಚರ್ ವೀಕ್ 2018 ನಲ್ಲಿ ಕಿಯಾರಾ ಧರಿಸಿರುವ ಈ ಉಡುಗೆಯನ್ನು ಈಗಿನ ಕಾಲದ ಎಲ್ಲಾ ಹುಡುಗಿಯರು ಮೆಚ್ಚಿಕೊಳ್ಳಲಿದ್ದು ಸರಳವಾಗಿರುವ ಮತ್ತು ಮುದ್ದಾಗಿರುವ ಈ ಉಡುಗೆಯನ್ನು ಎಲ್ಲರೂ ಮೆಚ್ಚಿಕೊಳ್ಳುವುದು ಖಂಡಿತ. ಈ ಲೆಹಂಗಾದಲ್ಲಿ ಕಿಯಾರಾ ನೋಡಲು ಅದ್ವಿತೀಯರಾಗಿ ಕಂಡುಬಂದಿದ್ದು ನಮಗಂತೂ ಈ ಉಡುಗೆ ಬಹಳಷ್ಟು ಇಷ್ಟವಾಗಿದ್ದು ನಿಮಗೂ ಇಷ್ಟವಾಗುವುದು ಖಂಡಿತ.



Click it and Unblock the Notifications




