Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ತಮಾಷಾದಲ್ಲಿ ಕಮಾಲು ಮಾಡಲಿರುವ ಯಶಸ್ವಿ ಜೋಡಿ
ಬಾಲಿವುಡ್ನ ಯಶಸ್ವಿ ಜೋಡಿ ಎಂದೇ ಖ್ಯಾತಿವೆತ್ತಿರುವ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಇನ್ನೊಂದು ಧಮಾಕಾಧಾರ್ ಚಿತ್ರದ ಮೂಲಕ ಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಸಲಿರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ತಮ್ಮ ಚಿತ್ರಕ್ಕಾಗಿ ಹಗಲಿರುಳೂ ಕಷ್ಟಪಟ್ಟಿರುವ ಈ ಎವರ್ ಗ್ರೀನ್ ಜೋಡಿ ಈ ಚಿತ್ರದಲ್ಲಿ ಮಾಡಲಿರುವ ಮೋಡಿಯನ್ನು ನೋಡುವುದಕ್ಕಾಗಿ ನೀವು ಸ್ವಲ್ಪ ದಿನಗಳು ಕಾಯಲೇಬೇಕು.
ಹೌದು ಈ ತಿಂಗಳಿನಲ್ಲೇ ಈ ಜೋಡಿ ನಟಿಸಿರುವ ತಮಾಷಾ ಚಿತ್ರ ರಿಲೀಸ್ಗೂ ಮುನ್ನವೇ ನಿರೀಕ್ಷೆಯ ಮಹಾಪೂರವನ್ನೇ ಹರಿಸಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಅದ್ಭುತವಾಗಿಯೇ ನಿರ್ವಹಿಸುತ್ತಿರುವ ಈ ಜೋಡಿಗಳು ತಮ್ಮ ಚಿತ್ರದ ಮೇಲೆ ಹೆಚ್ಚು ಭರವಸೆಯನ್ನಿಟ್ಟುಕೊಂಡಿದ್ದಾರೆ. ಯೇ ಜವಾನಿ ಹೇ ದಿವಾನಿ, ಬಚ್ನಾ ಹೇ ಹಸೀನೋ ಚಿತ್ರಗಳ ನಂತರ ಈ ಜೋಡಿ ಜತೆಯಾಗಿ ನಟಿಸುತ್ತಿರುವ ಚಿತ್ರ ತಮಾಷಾ ಆಗಿದೆ. ಬನ್ನಿ ಚಿತ್ರ ಪ್ರಚಾರ ಕಾರ್ಯಕ್ರಮದಲ್ಲಿ ಇವರಿಬ್ಬರ ದಿರಿಸುಗಳ ವರ್ಣನೆ ಸ್ಟೈಲ್ಗಳ ಮಾಹಿತಿಯನ್ನು ಕೆಳಗೆ ನಾವು ನೀಡಲಿರುವೆವು.

ದೀಪಿಕಾ ಪಡುಕೋಣೆ
ದೀಪಿಕಾ ಎಂದಿನಂತೆಯೇ ಸುಂದರವಾಗಿಯೇ ಕಾಣುತ್ತಿದ್ದು ಆಕೆಯ ದಿರಿಸು ನಿಜಕ್ಕೂ ಮೋಹಕವಾಗಿದೆ. ತಾವು ಧರಿಸಿರುವ ಡೆನಿಮ್ನಲ್ಲಿ ಚಿತ್ತಾರಗಳನ್ನೇ ದೀಪಿಕಾ ಹೊಂದಿದ್ದು ಒಂದು ಬಗೆಯ ಸ್ಟೈಲಿಶ್ ನೋಟವನ್ನು ಇದು ಹೊಂದಿದೆ. ದಿರಿಸಿಗೆ ತಕ್ಕಂತೆ ಕೆಂಪು ಬಣ್ಣದ ಚಪ್ಪಲಿಯನ್ನು ಧರಿಸಿದ್ದಾರೆ.
ರಣಬೀರ್ ಕಪೂರ್
ಇನ್ನು ರಣಬೀರ್ ಅಂತೂ ಬಾಲಿವುಡ್ನ ಹ್ಯಾಂಡ್ಸಮ್ ಎಂದೇ ಖ್ಯಾತರು. ಕಪ್ಪು ಸಿಗರೇಟ್ ಜೀನ್ಸ್, ಕಪ್ಪು ಬಣ್ಣದ ಟೀ ಶರ್ಟ್, ಕಪ್ಪು ರನ್ನಿಂಗ್ ಶೂ, ಮತ್ತು ಬಿಳಿ ಶರ್ಟ್ ಮತ್ತು ಡೆನಿಮ್ ಜಾಕೆಟ್ನಲ್ಲಿ ರಣಬೀರ್ ಮನಮೋಹಕವಾಗಿ ಕಾಣುತ್ತಿದ್ದಾರೆ. ಇವರಿಬ್ಬರ ಜೋಡಿ ಸಕತ್ ಮಸ್ತಾಗಿದೆ ಎಂಬುದನ್ನು ನೀವು ಒಪ್ಪುತ್ತೀರಲ್ಲಾ ಗೆಳೆಯರೇ? ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.



Click it and Unblock the Notifications

