Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಕನಸಿನ ಕನ್ಯೆ ಹೇಮಾಮಾಲಿನಿ ಇಳೆಯ ಅಪ್ಸರೆಯಾದಾಗ...!
Bollywood Wardrobe
oi-Staff
By jaya
ಕನಸಿನ ಕನ್ಯೆ ಹೇಮಾಮಾಲಿನಿ ತಮ್ಮ ಇಳಿವಯಸ್ಸಿನಲ್ಲಿ ಕೂಡ ಇಪ್ಪತ್ತರ ತರುಣಿಯರನ್ನು ನಾಚಿಸುವಂತಹ ಬೆಡಗುಳ್ಳವರು. ನಾಟ್ಯ, ಯೋಗ ಮೊದಲಾದ ದೈಹಿಕ ಚಟುವಟಿಕೆಗಳಿಂದ ಇಂದಿಗೂ ಲವಲವಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಅಲಂಕಾರ ಪ್ರಿಯರೂ ಆಗಿರುವ ಹೇಮಾಮಾಲಿನಿ ಸರಳ ಉಡುಗೆಗಳಿಂದಲೇ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತಾರೆ. ಚಲನಚಿತ್ರಗಳಿಂದ ಹಿಡಿದು ರೆಡ್ ಕಾರ್ಪೆಟ್ವರೆಗೂ ಅವರ ವಯ್ಯಾರ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು.

ಇತ್ತೀಚೆಗೆ ಈ ಕನಸಿನ ಕನ್ಯೆಯ ಸರಳ ಸುಂದರ ನೋಟ ನಮಗೆ ಲಭ್ಯವಾಗಿದ್ದು ಆಲ್ಬಮ್ ಲಾಂಚ್ ಕಾರ್ಯಕ್ರಮದಲ್ಲಿ. ಮೇ ಹೂ ಮೇರಾ ಆಲ್ಬಮ್ ಲಾಂಚ್ ನಲ್ಲಿ ಹೇಮಾಮಾಲಿನಿ ಅದ್ಭುತವಾದ ಕಪ್ಪು ಮತ್ತು ಕ್ರೀಮ್ ಬಣ್ಣದಿಂದ ಹೊಳೆಯುತ್ತಿದ್ದ ಎಂಬ್ರಾಯಿಡರಿ ಸೀರೆಯನ್ನುಟ್ಟಿದ್ದರು.
ಸೀರೆಯ ಸೆರಗು ಕ್ರೀಮ್ ಬಣ್ಣದಲ್ಲಿದ್ದರೆ ಒಡಲು ಕಪ್ಪು ಬಣ್ಣದಿಂದ ಕಣ್ಣು ಕೋರೈಸುವಂತಿತ್ತು. ಒಟ್ಟಾರೆ ಸೀರೆಯಲ್ಲಿ ಹೇಮಾಮಾಲಿನಿ ಇನ್ನಷ್ಟು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು. ತಮ್ಮ ಸುಂದರ ಸೀರೆಯಿಂದಲೇ ಎಲ್ಲರ ಕಣ್ಮನ ಸೆಳೆದ ಹೇಮಾಮಾಲಿನಿಯ ಡ್ರೆಸ್ಸಿಂಗ್ ಸ್ಟೈಲ್ ನಿಮಗೂ ಇಷ್ಟವಾಯಿತಲ್ಲವೇ?
Comments
GET THE BEST BOLDSKY STORIES!
Allow Notifications
You have already subscribed
Read in English: Hema Malini In A Sheer Saree
English summary



Click it and Unblock the Notifications
