Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆಹಾ ನೇಹಾ ದುಪಿಯಾ ಅಂದಕ್ಕೆ ಸರಿಸಾಟಿ ಯಾರು?
ಬಾಲಿವುಡ್ ಸೂಪರ್ ಸ್ಟಾರ್ ಮಾಜಿ ಮಿಸ್ ಇಂಡಿಯಾ ನೇಹಾ ದುಪಿಯಾ ಎಂದರೆ ಉದ್ದ ನಿಲುವಿನ ಬೆಡಗಿಯ ಚಿತ್ರ ಕಣ್ಣ ಮುಂದೆ ನಿಲ್ಲುತ್ತದೆಯಲ್ಲವೇ. ಈಕೆ ಖಯಾಮತ್ ಚಿತ್ರದಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದಳು. ಅಲ್ಲಿಂದ ಇಲ್ಲಿಯವರೆಗೆ ಆಕೆ ಹಿಟ್ ಮೇಲೆ ಹಿಟ್ ಆನಂದಿಸುತ್ತಲೇ ಬರುತ್ತಿದ್ದಾಳೆ. ಈಕೆ ನೋಡಲು ಎಷ್ಟು ಬೋಲ್ಡ್, ಅಷ್ಟೇ ಬ್ಯೂಟಿಫುಲ್ ಎಂಬುದು ಈಕೆಗೆ ಎಲ್ಲರೂ ನೀಡುವ ಅಭಿಪ್ರಾಯ. ಈ ಹಿಂದೆ ಸೆಕ್ಸಿಯಾದ ಮತ್ತು ಬೋಲ್ಡ್ ಆಗಿ ಕಾಣುವ ಕೆಲವೊಂದು ಉಡುಪುಗಳನ್ನು ಧರಿಸಿದ್ದಳು. ಅವುಗಳು ನಿಜಕ್ಕೂ ಒಳ್ಳೆಯ ಫ್ಯಾಷನ್ ಸ್ಪರ್ಶವನ್ನು ಪಡೆದಿದ್ದವು. ಬನ್ನಿ ಇತ್ತೀಚೆಗೆ ನಮಗೆ ಕಂಡು ಬಂದ ನೇಹಾ ದೂಪಿಯಾರವರ ಲುಕ್ ಹೇಗಿತ್ತು ಎಂದು ನಾವು ನೋಡೋಣ.

ಇತ್ತೀಚೆಗೆ ವಿನ್ಯಾಸಗಾರ್ತಿ ಸಂಗೀತಾರವರು ಪ್ರಸ್ತುತಪಡಿಸಿದ ಶೋನಲ್ಲಿ ಆಕೆ ನೋಡುಗರ ಮನಸೂರೆಗೊಳ್ಳುವ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರನ್ನು ಬೆಕ್ಕಸಬೆರಗಾಗುವಂತೆ ಮಾಡಿದಳು. ಸಂಗೀತಾ ಶರ್ಮಾರವರು ತಮ್ಮ ವಿನ್ಯಾಸಗಳ ಸೂಕ್ಷ್ಮತೆಯನ್ನು ಮತ್ತು ಅದರ ಹಿಂದಿನ ಚಿಂತನೆಯ ಪ್ರಕ್ರಿಯೆಯ ಕುರಿತು ಮಾತನಾಡಿದರು. ಸಂಗೀತಾರ ಮನಮೋಹಕ ವಿನ್ಯಾಸಗಳು, ವಿವಾಹ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿತ್ತು.
ಈ ವಿನ್ಯಾಸವು ಪ್ರಸಕ್ತ ಕಾಲದ ವಧುವಿಗೆ ಒಪ್ಪುವಂತೆ ಇತ್ತು. ಈ ವಿನ್ಯಾಸವು ನ್ಯೂಕ್ಲಿಯರ್ ಎನರ್ಜಿ ಪ್ರಿಂಟ್ ಗೌನ್ ಜೊತೆಗೆ ಕನ್ನಡಿ ಕೆಲಸವನ್ನು ಮತ್ತು ಬ್ಯಾಕ್‌ಲೆಸ್ ಟಾಪ್ ಅನ್ನು ಹೊಂದಿತ್ತು. ಹೀಗೆ ನೇಹಾ ದುಪಿಯಾ ಕೆಂಪು ನ್ಯೂಕ್ಲಿಯರ್ ಉಡುಗೆಯೊಂದಿಗೆ ರ‍್ಯಾಂಪ್ ಮೇಲೆ ಕಿಚ್ಚು ಹಚ್ಚಿದರು ಎಂದರೆ ಸುಳ್ಳಲ್ಲ. ನಿಮಗೂ ಇದು ಇಷ್ಟವಾಯಿತೆ? ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ..



Click it and Unblock the Notifications

