Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಎಲ್ಲೆ ನಿಯತಕಾಲಿಕೆಯಲ್ಲಿ ಸೌಂದರ್ಯದ ಎಲ್ಲೆಮೀರಿದ ಲಕ್ಷ್ಮೀ ಮೆನನ್
ನವೆಂಬರ್ 2015ರ ಎಲ್ಲೆ (Elle) ಮುಖಪುಟದಲ್ಲಿ, ಮಿಂಚಿರುವ ಮಾಡೆಲ್ ನೋಟ ನಿಜಕ್ಕೂ ನಮ್ಮ ಚಿತ್ತವನ್ನು ಚಂಚಲಿಸಿದೆ. ಭಾರತೀಯ ತ್ವಚೆ ಅಂತೆಯೇ ಬಾಬ್ ಕಟ್ ಹೇರ್ ಸ್ಟೈಲ್ ನಿಜಕ್ಕೂ ಒಂದು ರೀತಿಯ ರೋಚಕತೆಯನ್ನು ನಮ್ಮಲ್ಲಿ ಉಂಟುಮಾಡಿದ್ದು 2015ರ ಎಲ್ಲೆ ಮುಖಪುಟದಲ್ಲಿ ಮಿಂಚಿರುವ ಈ ಸುಂದರಿ ಯಾರು ಎಂಬ ಕುತೂಹಲವನ್ನು ಎಡೆಬಿಡದೇ ನಮ್ಮಲ್ಲಿ ಉಂಟುಮಾಡಿರುವುದಂತೂ ನಿಜ.
ಈ ಚೆಲುವೆ ಬೇರೆ ಯಾರೂ ಅಲ್ಲದೆ ಲಕ್ಷ್ಮೀ ಮೆನನ್ ಎಂಬ ಭಾರತೀಯ ಸೌಂದರ್ಯವತಿಯಾಗಿದ್ದಾರೆ. ಆಕೆಯ ಸಣ್ಣ ಕೂದಲು, ಸಪೂರ ದೇಹಸಿರಿ ಆಕೆಯ ಬಗ್ಗೆ ಇನ್ನಷ್ಟು ಮಾತನಾಡುವಂತೆ ಮಾಡಿದೆ. ಇನ್ನು ಲಕ್ಷ್ಮೀ ಮೆನನ್ ಬಗ್ಗೆ ತಿಳಿಯದವರಿಗೆ ಇಲ್ಲಿ ನಾವೊಂದು ಸಣ್ಣ ಪರಿಚಯವನ್ನು ಮಾಡುತ್ತಿದ್ದೇವೆ. ಅಂತರಾಷ್ಟ್ರೀಯ ನೆಲೆಯಲ್ಲಿ ತಮ್ಮ ಹೆಸರನ್ನು ವಿಖ್ಯಾತಿಗೊಳಿಸಿದ ಭಾರತೀಯ ಮಾಡೆಲ್ ಲಕ್ಷ್ಮೀ ಮೆನನ್. ಸೋಷಿಯಾಲಜಿನಲ್ಲಿ ಈಕೆ ಪದವಿಯನ್ನು ಪಡೆದುಕೊಂಡಿದ್ದು ತಮ್ಮ ಮಾಡೆಲಿಂಗ್ ವೃತ್ತಿಯನ್ನು 25ರ ವಯಸ್ಸಿನಲ್ಲಿಯೇ ಆರಂಭಿಸಿದವರು.
ಪ್ರಶಾಂತ ಸುಂದರಿ
ಕ್ಯಾಮೆರಾದಲ್ಲಿ ಲಕ್ಷ್ಮೀಯವರು ನೀಡಿರುವ ಭಂಗಿ ಶಾಂತವಾಗಿದ್ದು ಆಕೆಯ ಬಾಬ್ ನಮಗೆ ಇಷ್ಟವಾಗಿದೆ. ನಿಜಕ್ಕೂ ಈಕೆಯ ಭಂಗಿ ಮನಮೆಚ್ಚುವಂತಹದ್ದು.ನಿಧಾನವಾಗಿಯಾದರೂ ಈ ಕ್ಷೇತ್ರಕ್ಕೆ ಪ್ರವೇಶ ಮಾಡಿರುವ ಲಕ್ಷ್ಮೀ ಫ್ಯಾಷನ್ ಜಗತ್ತಿನಲ್ಲಿ ಗಮನಾರ್ಹ ಹೆಸರನ್ನು ಪಡೆದುಕೊಂಡಿದ್ದಾರೆ. ನವೆಂಬರ್ ಮಾಸದ ಎಲ್ಲೆ ನಿಯತಕಾಲಿಕೆಯಲ್ಲಿ ಲಕ್ಷ್ಮೀಯನ್ನು ನಾವು ನೋಡಿದಾಗ ಆಕೆಯ ಶಾಂತ ಸ್ವಭಾವ ಮತ್ತು ಪ್ರಜ್ವಲಿಸುವ ಕಣ್ಣುಗಳು ನಿಯತಕಾಲಿಕೆಯ ಅಂದವನ್ನು ದುಪ್ಪಟ್ಟುಗೊಳಿಸಿದೆ. ಸುಂದರಿಯ ಇನ್ನಷ್ಟು ಚಿತ್ರಗಳು ಕೆಳಗಿನ ಸ್ಲೈಡರ್ಗಳಲ್ಲಿ

ಟ್ಯುನಿಕ್ ಮತ್ತು ಫ್ಲೋರಲ್ಸ್
ಪಿಂಕ್ ಹೂವುಗಳೊಂದಿಗೆ ಹೊಳೆಯುವ ಟ್ಯೂನಿಕ್ ಉತ್ತಮ ಹೊಂದಿಕೆಯಾಗಿದೆ. ಇಳಿಬಿದ್ದಿರುವ ಕುತ್ತಿಗೆಯ ವಿನ್ಯಾಸ ಮತ್ತು ಸೊಂಟದ ಸುತ್ತಲಿನ ಸುಂದರ ಹೊಲಿಯುವಿಕೆ ನಿಜಕ್ಕೂ ಅದ್ಭುತ.

ಕೆಂಪು ಬಣ್ಣದ ಮೋಡಿ
ಕೆಂಪು ಬಣ್ಣದ ಟ್ಯೂನಿಕ್ ಮತ್ತು ಕ್ಲಚ್ ನೋಟಕ್ಕೆ ಇನ್ನಷ್ಟು ಸೊಗಸನ್ನು ತಂದಿದೆ.

ಹೊಳೆಯುವ ಸಿಲ್ವರ್ ಸೂಟ್
ಸಿಲ್ವರ್ ಬ್ಲೇಜರ್ ಮತ್ತು ಪ್ಯಾಂಟ್ಗಳನ್ನು ನಿಜಕ್ಕೂ ನಾವು ಮೆಚ್ಚಿಕೊಂಡಿದ್ದೇವೆ. ನಿಜಕ್ಕೂ ಇದು ಸುಂದರವಾಗಿದೆ.

ಬಿಳಿ ಬಣ್ಣದೊಂದಿಗೆ ಕೆಂಪು
ಕೆಂಪಿನೊಂದಿಗೆ ಬಿಳಿ ಬಣ್ಣ ಮಾಡಿರುವ ಜಾದೂ ಅನೂಹ್ಯವಾಗಿದೆ.

ಫ್ಲೋರಲ್ ಸ್ಟೈಲ್
ಅರ್ಧ ತೋಳಿನ ಈ ಟಾಪ್ ನಿಜಕ್ಕೂ ಸೊಗಸಾಗಿದೆ. ಲಕ್ಷ್ಮೀಯವರ ದೇಹಸಿರಿಗೆ ಇದು ಅತ್ಯುತ್ತಮ ಎಂದೆನಿಸಿದೆ.

ಫ್ಲೋರಲ್ ಕೇಪ್
ಈ ಫ್ಲೋರಲ್ ಕೇಪ್ನ ಉದ್ದ ತೋಳು ನಿಜಕ್ಕೂ ಸೊಗಸಾಗಿದೆ.

ಫ್ಲೋರಲ್ ಟ್ರೆಂಚ್ ಕೋಟ್
ವಿನ್ಯಾಸಕಾರರು ಪ್ರಕೃತಿಯನ್ನು ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ ಎಂಬುದು ಅವರ ವಿನ್ಯಾಸದಿಂದಲೇ ತಿಳಿದು ಬಂದಿದ್ದು ಕೋಟ್ನಲ್ಲಿರುವ ಹೂಗಳು ಮೋಡಿ ಮಾಡುವಂತಿದೆ.

ವೆಲ್ವೇಟ್
ನೀಲಿ ವೆಲ್ವೇಟ್ನೊಂದಿಗೆ ಕೆಂಪಿನ ಮಿಶ್ರತೆಯನ್ನು ವಿನ್ಯಾಸಕಾರರು ಹೇಗೆ ಮಾಡಿದ್ದಾರೆ ಎಂಬುದೇ ಗಮನಾರ್ಹವಾದುದು.

ಸುಂದರ ನೋಟ
ಕೆಂಪು ಬಣ್ಣದ ಟ್ಯೂನಿಕ್ ಅನ್ನು ನೀಲಿ ಡೆನಿಮ್ಸ್ಗೆ ಸುಂದರವಾಗಿ ಇವರು ಮ್ಯಾಚ್ ಮಾಡಿಕೊಂಡಿದ್ದಾರೆ.



Click it and Unblock the Notifications
