Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫ್ಯಾಷನ್ ಲೋಕದ ಅನಭಿಷಕ್ತ ರಾಣಿ- ಕಂಗನಾ ರಾಣಾವತ್!
ಬಾಲಿವುಡ್‌ನಲ್ಲಿ ಇತ್ತೀಚೆಗೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪ್ರಸಿದ್ಧರಾಗುತ್ತಿದ್ದು ಅವರಂತೆಯೇ ತಮಗೂ ಬೋಲ್ಡ್ ನಟನೆ ಸಾಧ್ಯ ಎಂಬುದನ್ನು ಈ ಮಹಿಳಾ ಮಣಿಯರು ತೋರಿಸಿಕೊಡುತ್ತಿದ್ದಾರೆ. ಇನ್ನೂ ಇದೇ ಸಾಲಿನಲ್ಲಿ ಪ್ರಸಿದ್ಧರಾಗುತ್ತಿರುವ ನಟಿ ಕಂಗನಾ ರಾಣಾವತ್. ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂಬ ಹೆಸರಿನಿಂದೇ ಬಾಲಿವುಡ್‌ನಲ್ಲಿ ಪ್ರಸಿದ್ಧರಾಗಿರುವ ಕಂಗನಾ ಅತ್ಯುತ್ತ ಚಿತ್ರಗಳನ್ನೇ ಬಾಲಿವುಡ್ ಅಂಗಳಕ್ಕೆ ನೀಡಿದ್ದಾರೆ ಮತ್ತು ಚಾಲೆಂಜಿಂಗ್ ಪಾತ್ರಗಳನ್ನು ನಿರ್ವಹಿಸಿ ಗಟ್ಟಿಗಿತ್ತಿ ಎಂದೆನಿಸಿದ್ದಾರೆ.

ಕ್ವೀನ್ ಮತ್ತು ತನು ವೆಡ್ಸ್ ಮನು ಚಿತ್ರದಲ್ಲಿನ ಸವಾಲಿನ ಪಾತ್ರಗಳಲ್ಲಿ ನಟಿಸಿ ಕಂಗನಾ ಬಹುಬೇಗ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಇನ್ನು ಚಿತ್ರಗಳಲ್ಲಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲೂ ಕಂಗನಾ ಬಹುಬೇಡಿಕೆಯುಳ್ಳವರು. ನವೆಂಬರ್ 2015 ರ ಹಾರ್ಪರ್ ಬಜಾರ್ ನಿಯತಕಾಲಿಕೆಯ ಮುಖಪುಟದಲ್ಲಿ ಈ ತಾರೆ ಮಿಂಚಿದ್ದಾರೆ. ಈಕೆಯ ನೋಟ ನಿಜಕ್ಕೂ ಮೋಡಿಮಾಡುವಂತಿದ್ದು ತಮ್ಮ ಗುಂಗುರು ಕೂದಲನ್ನು ನಯಗೊಳಿಸಿ ಅದನ್ನು ಸುಂದರವಾಗಿಸಿಕೊಂಡಿದ್ದಾರೆ. ಕಣ್ಮನ ಸೆಳೆದ ಕಂಗನಾ ರಣಾವತ್‌ರ ಅನನ್ಯ ಶೈಲಿ
ಇನ್ನು ಇವರು ಧರಿಸಿದ ಡ್ರೆಸ್ ಅಂತೂ ಅದ್ಭುತವಾಗಿದ್ದು ಡಿಯೊರ್ ಸ್ವೆಟರ್ ಮತ್ತು ಸ್ಕರ್ಟ್ ಅನ್ನು ಕಂಗಾನಾ ಧರಿಸಿ ನಿಯತಕಾಲಿಕೆಯ ಮುಖಪುಟವನ್ನೇ ಸುಂದರಗೊಳಿಸಿದ್ದಾರೆ. ಆಕೆಯ ಕಪ್ಪು ಮತ್ತು ಬಿಳಿ ನೋಟ ಎಲ್ಲರನ್ನು ಆಕರ್ಷಿಸುವಂತಹದ್ದೇ.
ಸ್ಮೋಕಿ ಕಣ್ಣುಗಳು, ತುಟಿಯ ಅಂದ ಹೀಗೆ ಅಸಾಧಾರಣವಾದ ಮೇಕಪ್ ಅನ್ನು ಕಂಗನಾ ಮಾಡಿಕೊಂಡಿದ್ದಾರೆ. ಹಾರ್ಪರ್ ಬಜಾರ್ 2015 ರ ನಿಯತಕಾಲಿಕೆಯಲ್ಲಿ ಕಂಗನಾ ತಮ್ಮ ಅಂದಚೆಂದಗಳಿಂದ ನಿಯತಕಾಲಿಕೆಯ ಸೊಬಗನ್ನು ಹೆಚ್ಚಿಸಿದ್ದು ಫ್ಯಾಷನ್ ಲೋಕದ ಅನಭಿಷಕ್ತ ರಾಣಿ ಇವರೇ ಆಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.



Click it and Unblock the Notifications


