Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಫೆಮಿನಾ ಹಬ್ಬದಲ್ಲಿ ಮಿಂಚಿದ ಸೌಂದರ್ಯ ದೇವತೆಯರು!
ಫೆಮಿನಾದ ಭಾಗವಾಗಿ ಮಿಂಚುವುದು ಪ್ರತಿಯೊಬ್ಬ ಭಾರತೀಯ ಮಾಡೆಲ್ ಕನಸಾಗಿರುತ್ತದೆ. ಮಿಸ್ ಇಂಡಿಯಾ ಆಗಬೇಕೆಂಬ ಹಂಬಲ ಹೊಂದಿರುವ ಪ್ರತಿ ಹುಡುಗಿಯ ಕನಸನ್ನು ಫೆಮಿನಾ ನನಸಾಗಿದೆ. ಅತಿ ದೊಡ್ಡ ಬ್ರಾಂಡ್ ಎಂದೆನಿಸಿರುವ ಫೆಮಿನಾ ತನ್ನ ಫ್ಲಾಂಟ್ನ ಆಟಮ್/ವಿಂಟರ್ 2015 ಕಲೆಕ್ಷನ್ ಅನ್ನು ಇತ್ತೀಚೆಗೆ ಲಾಂಚ್ ಮಾಡಿದೆ. ರಾಂಪ್ನಲ್ಲಿ ಹೆಜ್ಜೆ ಹಾಕಿದ ಫೆಮಿನಾ ಸೌಂದರ್ಯವತಿಯರ ನೋಟ ಕಣ್ಣಿಗೆ ಅದ್ಭುತವೆನಿಸಿತ್ತು.
ವರ್ತಿಕಾ ಸಿಂಗ್, ನೊಯೊನಿತಾ ಲೋಡ್ ಮತ್ತು ಅಲಂಕೃತಾ ಸಹಾಯಿ ಫೆಮಿನಾ ರಾಂಪ್ನಲ್ಲಿ ಮಿಂಚಿದ ಸೌಂದರ್ಯ ನಕ್ಷತ್ರಗಳೆನಿಸಿದ್ದಾರೆ. ಬಿಟೌನ್ನಲ್ಲಿ ಮಿಂಚುತ್ತಿರುವ ಅತಿಯಾ ಶೆಟ್ಟಿ ಕೂಡ ಫೆಮಿನಾದಲ್ಲಿ ತಮ್ಮ ಝಲಕ್ ಅನ್ನು ತೋರಿಸಿದ್ದಾರೆ. ಟ್ರೈಬಲ್ ಪ್ಯಾಂಟ್ ಗಳು, ಹೊಳೆಯುವ ಗೆರೆಗಳ ದಿರಿಸುಗಳು ಮತ್ತು ಹೈ ವೇಸ್ಟ್ ಪ್ಯಾಂಟ್ಗಳಲ್ಲಿ ಫ್ಯಾಷನ್ ಪ್ರಿಯರ ಮನಗೆದ್ದಿದ್ದಾರೆ. ಫೆಮಿನಾ ಫ್ಲಾಂಟ್ನ ಆಟಮ್/ವಿಂಟರ್ 2015 ಕಲೆಕ್ಷನ್ ಅದ್ಭುತ ನೋಟವನ್ನು ನಾವಿಲ್ಲಿ ನಿಮಗೆ ಮಾಡಿಸುತ್ತಿದ್ದೇವೆ...

ಗೆರೆಗಳ ದಿರಿಸಿನಲ್ಲಿ ವರ್ತಿಕಾ
ಗೆರೆಗಳಿರುವ ಹೈ ವೇಸ್ಟ್ ಪ್ಯಾಂಟ್ ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕಿದ ವರ್ತಿಕಾ ಸಿಂಗ್ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಅವಾರ್ಡ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ.

ಮ್ಯಾಕ್ಸಿ ಗೌನ್ ನಲ್ಲಿ ನೊಯೊನಿತಾ
ಉದ್ದನೆಯ ಫ್ಲೋರಲ್ ಮ್ಯಾಕ್ಸಿ ಗೌನ್‌ನಲ್ಲಿ ಹೆಜ್ಜೆ ಹಾಕಿದ ನೊಯೊನಿತಾ ಲೋಡೆ ಮಿಸ್ ದಿವಾ ಯೂನಿವರ್ಸ್ 2014 ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಜಕ್ಕೂ ಆಕೆ ಅಪ್ರತಿಮ ಸುಂದರಿ ಎಂದೆನಿಸಿಕೊಂಡಿದ್ದಾರೆ.

ಟ್ರೈಬಲ್ ಪ್ರಿಂಟ್
ಸಣ್ಣನೆಯ ಟ್ರೈಬಲ್ ಪ್ರಿಂಟ್ ದಿರಿಸಿನಲ್ಲಿ ಮಾಡೆಲ್ ರಾಂಪ್ ವಾಕ್ ನಿಜಕ್ಕೂ ಮೋಹಕವಾಗಿತ್ತು. ಈ ಚಳಿಗಾಲದಲ್ಲಿ ಟ್ರೈಬಲ್ ಪ್ರಿಂಟ್ ಫ್ಯಾಷನ್ ಎಂದೆನಿಸಿದೆ.

ಸ್ಕಾರ್ಫ್ಗಳು
ಬಿಳಿ ಸ್ಕಾರ್ಫ್ನೊಂದಿಗೆ ಹಸಿರು ಸಣ್ಣ ದಿರಿಸು ಧರಿಸಿರುವ, ಫೆಮಿನಾ ಸೌಂದರ್ಯವತಿ ರಾಂಪ್ನಲ್ಲಿ ನಡೆದಾಡುತ್ತಿರುವುದನ್ನು ನಿಮಗೆ ಕಾಣಬಹುದು. ಇದನ್ನಂತೂ ಚಳಿಗಾಲದ ಸ್ಟೈಲಿಶ್ ದಿರಿಸು ಎಂದೇ ಹೇಳಬಹುದು.

ಮಿನುಗುವ ದಿರಿಸು
ಪೇಸ್ಟಲ್ ಮಿನುಗುವ ದಿರಿಸು ಧರಿಸಿರುವ ಫೆಮಿನಾ ಸೌಂದರ್ಯ ರಾಣಿ ರಾಂಪ್ನಲ್ಲಿ ನಡೆದಾಡಿದ ನೋಟ ಅತ್ಯದ್ಭುತವಾಗಿದೆ. ಪೇಸ್ಟಲ್ ಸ್ಲಿಂಗ್ ಬ್ಯಾಗ್‌ನಲ್ಲಿ ಈ ಮಾಡೆಲ್ ಮನಸೆಳೆಯುವಂತಿದ್ದಾರೆ.

ಅತಿಯಾ ಶೆಟ್ಟಿ
ಬಿ ಟೌನ್‌ನ ಹೊಸ ಫ್ಯಾಷನಿಸ್ಟ್ ಎಂದೆನಿಸಿರುವ, ಅತಿಯಾ ಶೆಟ್ಟಿ ಹೈ ವೈಸ್ಟ್ ಪ್ಯಾಂಟ್ನಲ್ಲಿ ಮತ್ತು ಅಲಂಕೃತ ಕ್ರಾಪ್ ಟಾಪ್ನಲ್ಲಿ ಗಂಧರ್ವ ಕನ್ಯಯಂತೆಯೇ ಕಂಡುಬಂದಿದ್ದಾರೆ. ಅಗಲ ಕಾಲಿರುವ ಪಲಾಜೊ ಅತಿಯಾರ ಸಿಗ್ನೇಚರ್ ಸ್ಟೈಲ್ ಎಂದೆನಿಸಿದೆ. ಅಲ್ಲದೆ ಆಕೆಯ ನೋಟ ನೆರೆದವರ ಮೈಮನ ಸೆಳೆಯುವಂತಿತ್ತು.



Click it and Unblock the Notifications
