Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುತ್ತಿರುವ ಮಿಂಚು ಕಣ್ಣಿನ ಬೆಡಗಿ ದಿಶಾ ಪಟಾನಿ!
ಇಂದಿನ ವೇಗದ ಯುಗದಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್ ಹೆಚ್ಚಾಗಿ ಜನರ ಮನ್ನಣೆಯನ್ನು ಗಳಿಸುತ್ತಿದೆ. ಸೆಲೆಬ್ರಿಟಿ ಕೂಡ ಈ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿದ್ದರೆ ಅವರೇ ರಾಣಿಗಳು, ರಾಜರು ಎಂದೆನಿಸಿಬಿಡುತ್ತಾರೆ. ಬಾಲಿವುಡ್‌ನಲ್ಲಿ ದಿಶಾ ಪಟಾನಿ ಇನ್‌ಸ್ಟಾಗ್ರಾಮ್‌ನಂತಹ ಖಾತೆಯಲ್ಲಿ ಹೆಚ್ಚಿನ ಅನುಯಾಯಿಗಳನ್ನು ಪಡೆದುಕೊಂಡು ಸ್ಟಾರ್ ಎನಿಸಿಬಿಟ್ಟಿದ್ದಾರೆ.
ಸುಂದರಿಯಾಗಿರುವ ದಿಶಾ ಹಾಕುವ ಫೋಟೋಗಳು ಮತ್ತು ಸ್ಟೇಟಸ್‌ಗಳಿಗೆ ಹೆಚ್ಚಿನವರು ಫಿದಾ ಆಗಿದ್ದಾರೆ ಮತ್ತು ಹೆಚ್ಚಿನ ಫ್ಯಾನ್ ಫಾಲೋವರ್ಸ್‌ಗಳನ್ನು ಇವರು ಪಡೆದುಕೊಂಡಿದ್ದಾರೆ. ಕಡಿಮೆ ಚಿತ್ರದಲ್ಲಿ ನಟಿಸಿದ್ದರೂ ಕೂಡ ಜಾಲತಾಣದಲ್ಲಿ ದಿಶಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೆಚ್ಚಿನ ನಟಿಯರು ಚಿತ್ರ ಅಂಗಳದಲ್ಲಿ ಬಂದು ಹೋಗುವ ಈ ಸಮಯದಲ್ಲಿ ದಿಶಾ ಹೆಚ್ಚಿನ ಫ್ಯಾನ್‌ಗಳನ್ನು ಪಡೆದುಕೊಂಡಿದ್ದು ಆಕೆಗಿರುವ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

ಫ್ಯಾಷನ್ ಬಗ್ಗೆ ತಮ್ಮದೇ ಆದ ಬುದ್ಧಿವಂತಿಕೆಯನ್ನು ಹೊಂದಿರುವ ದಿಶಾ, ಏನೇ ಮಾಡಿದರೂ ಡಿಫರೆಂಟ್ ಆಗಿ ಅದನ್ನು ತೋರ್ಪಡಿಸುತ್ತಾರೆ. ತಾವು ಧರಿಸುವ ದಿರಿಸಿಗೆ ಆಕೆ ಸರಿಯಾಗಿ ನ್ಯಾಯವನ್ನು ಒದಗಿಸುತ್ತಿದ್ದು ತಮ್ಮ ಅದ್ಭುತ ನೃತ್ಯ ಕೌಶಲ್ಯಗಳಿಂದ ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕಿದ್ದಾರೆ. ಆದಾಗ್ಯೂ ಒಮ್ಮೊಮ್ಮೆ ಈ ಸುಂದರಿ ಫ್ಯಾಷನ್‌ನಲ್ಲಿ ಕೆಲವು ತಪ್ಪುಗಳನ್ನು ಎಸಗಿ ತಮ್ಮ ಫ್ಯಾನ್‌ಗಳ ಟ್ರೋಲ್‌ಗೂ ಬಲಿಯಾಗುತ್ತಾರೆ. ಪ್ರಸ್ತುತ ನಟಿ ವದಂತಿ ಗೆಳೆಯನಾಗಿರುವ ಟೈಗರ್ ಶ್ರಾಫ್ ಜೊತೆ ನಟಿಸಿರುವ ಬಾಗಿ 2 ನ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾ ಅಪ್‌ಲೋಡ್ ಮಾಡಿದ ಫೋಟೋ 1.1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದ್ದು ಆಕೆಯ ಫೋಟೋಗಳು ಇನ್‌ಸ್ಟಾದಲ್ಲಿ ಕ್ರೇಜಿ ಎಂದೆನಿಸುತ್ತಿದೆ. ಚಿತ್ರದಲ್ಲಿ ಆಕೆ ಬಾಂಬರ್ ಜಾಕೆಟ್‌ನಲ್ಲಿ ತನ್ನ ಸೌಂದರ್ಯವನ್ನು ಪ್ರಸ್ತುತಪಡಿಸಿದ್ದು, ಕಪ್ಪು ಟ್ಯಾಂಕ್ ಟಾಪ್ ಅನ್ನು ಧರಿಸಿದ್ದಾರೆ. ಡೆನೀಮ್ ಪ್ಯಾಂಟ್ ಅನ್ನು ಇದಕ್ಕೆ ಜೊತೆಯಾಗಿ ಧರಿಸಿದ್ದು ಸನ್ ಗ್ಲಾಸ್, ಮೇಲಕ್ಕೆ ಎತ್ತಿ ಕಟ್ಟಿದ ತುರುಬು ಮತ್ತು ಬಿಳಿ ಬಣ್ಣದ ಸ್ನೀಕರ್‌ನಲ್ಲಿ ಮುದ್ದು ಗೊಂಬೆಯಂತೆ ಕಂಡುಬಂದಿದ್ದಾರೆ.
ಆಕೆಯ ನೀಳ ಕಾಯ ಮತ್ತು ಸಣ್ಣಗಿನ ಬಳುಕುವ ದೇಹ ಅಂತೆಯೇ ಸುಂದರ ನಗು ಆಕೆಯ ಪ್ಲಸ್ ಪಾಯಿಂಟ್ ಎಂದೆನಿಸಿದೆ. ಕೆಲವೇ ದಿನಗಳಲ್ಲಿ ಫ್ಯಾಷನ್ ಲೋಕವನ್ನು ಆಳುತ್ತಿರುವ ಸೋನಂ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದ್ದಾರೆ ಎಂಬುದು ಈ ಖಾತೆಗಳ ಫಾಲೋವರ್‌ಗಳಿಂದಲೇ ತಿಳಿದು ಬರಲಿದೆ.



Click it and Unblock the Notifications


