Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮದುವೆ ಸಮಾರಂಭಗಳಲ್ಲಿ ಮಿಂಚಲು ಪುರುಷರಿಗೆ ಅತ್ಯಾಕರ್ಷಕವಾದ ಡ್ರೆಸ್ಸಿಂಗ್ ಐಡಿಯಾಗಳು
ಮದುವೆ ಸಮಾರಂಭಗಳಿಗೆ ರೆಡಿಯಾಗುವುದು ಎಂದು ಸ್ತ್ರೀಯರಿಗೆ ಸಂಭ್ರಮ, ಆದರೆ ಪುರುಷರಿಗೆ ಗ್ರ್ಯಾಂಡ್ ಆಗಿ, ಸಾಂಪ್ರದಾಯಿಕವಾಗಿ ಮಿಂಚಬೇಕೆಂದು ಇದ್ದರೂ, ಪ್ಯಾಂಟ್ ಶರ್ಟ್, ಹೆಚ್ಚೆಂರೆ ಒಂದು ಬ್ಲೇಝರ್, ಜುಬ್ಬಾ ಇವುಗಳಲ್ಲದೆ ಇನ್ನೇನಿದೆ ಆಯ್ಕೆ ಎಂದು ಯೋಚಿಸುತ್ತಾರೆ.
ಆದರೆ ತಮ್ಮ ಡ್ರೆಸ್ಸಿಂಗ್ ಹೊಸ ವಿನ್ಯಾಸ ಅಳವಡಿಸಿಕೊಂಡರೆ ಮತ್ತಷ್ಟು ಸ್ಟೈಲಿಷ್ ಲುಕ್‌ನಿಂದ ಕಾಣಬಹುದು. ನಿಮ್ಮ ನೆಂಟರಿಷ್ಟರ ಅಥವಾ ಮದುವೆಯಿದೆ, ಯಾವ ರೀತಿ ಡ್ರೆಸ್ಸಿಂಗ್ ಮಾಡಲಿ ಎಂದು ಯೋಚಿಸುತ್ತಿದ್ದರೆ, ಈ ಸೆಲೆಬ್ರಿಟಿಗಳ ಡ್ರೆಸ್ಸಿಂಗ್ ಸ್ಟೈಲ್ ನಿಮಗೆ ಹೊಸ ಐಡಿಯಾ ನೀಡಬಹುದು.
ಸ್ಯಾಂಡಲ್‌ವುಡ್ ನಟ ಯಶ್, ಟಾಲಿವುಡ್ ನಟರಾದ ಅಲ್ಲು ಸಿರಿಶ್, ವಿಜಯ್ ದೇವರಕೊಂಡ, ಮೋಲಿವುಡ್ ನಟ ದುಲ್ಖರ್ ಸಲ್ಮಾನ್ ಡ್ರೆಸ್ಸಿಂಗ್ ಮದುವೆ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿದೆ. ಇವರ ಡ್ರೆಸ್ಸಿಂಗ್ ಸ್ಟೈಲ್ ಸಾಂಪ್ರದಾಯಿಕ ಲುಕ್‌ಗೆ ಸ್ಟೈಲಿಷ್ ಟಚ್ ನೀಡಿದಂತಿದೆ ನೋಡಿ:

ಯಶ್
ರಾಕಿಂಗ್ ಸ್ಟಾರ್ ಯಶ್ ಡ್ರೆಸ್ಸಿಂಗ್ ಸಾಂಪ್ರದಾಯಿಕ ಲುಕ್ ಶರ್ಟ್-ಪಂಚೆಗೆ ಹೊಸ ಫ್ಯಾಷನಬಲ್ ಲುಕ್ ನೀಡಿ ಸಕತ್ ಸ್ಟೈಲಿಷ್ ಆಗಿ ಕಾಣುವಂತಿದೆ. ಬ್ಲ್ಯಾಕ್ ಪಂಚೆಯನ್ನು ಕಚ್ಚೆ ಸ್ಟೈಲಿನಲ್ಲಿ ಧರಿಸಿ ಅದಕ್ಕೆ ಬಾರ್ನ್ ರೆಡ್ ಕಲರ್ ಶರ್ಟ್, ಅದೇ ಬಣ್ಣದ ದೊಡ್ಡದಾದ ದುಪ್ಪಟ , ಕಾಲಿಗೆ ಸಿಂಪಲ್ ಸ್ಯಾಂಡಲ್ ತುಂಬಾನೇ ನೋಡುಗರ ಗಮನ ಸೆಳೆಯುವಂತೆ ಮಾಡುವುದು. ಈ ರೀತಿ ಡ್ರೆಸ್ಸಿಂಗ್ ಮಾಡುವಕಪ್ಪು ಬಣ್ಣದ ಪಂಚೆಯನ್ನೇ ಆಯ್ಕೆ ಮಾಡಿ ಶರ್ಟ್ ನಿಮಗೆ ಇಷ್ಟವಾದ ಬಣ್ಣದ್ದು, ಅದೇ ಬಣ್ಣದ ದುಪ್ಪಟ ಮ್ಯಾಚ್ ಮಾಡಿದರೆ ನಿಮ್ಮ ಲುಕ್ ಕಂಪ್ಲೀಟ್.

ಅಲ್ಲು ಸಿರಿಶ್
ವೈಟ್ ಶೆರ್ವಾನಿಗೆ ಬಿಳಿ ಜೂಡಿದಾರ್ ಜೊತೆಗೆ ವೈಟ್ ದುಪ್ಪಟ ಧರಿಸಿದ್ದಾರೆ. ಈ ಲುಕ್ ಮದುವೆ ಸಮಾರಂಭಗಳಿಗೆ ಅಲ್ಟಿಮೇಟ್ ಆಗಿದೆ. ಗೋಲ್ಡನ್ ಕಫ್ ಅಂಡ್ ಕಾಲರ್ ಅದಕ್ಕೆ ಮ್ಯಾಚ್ ಹೊಂದುವಂತೆ ಬ್ರೌನ್ ಶೂ ಈ ಲುಕ್ ನೋಡುಗರನ್ನು ವಾವ್ ಎನ್ನುವಂತೆ ಮಾಡುವುದು.

ವಿಜಯ್ ದೇವರಕೊಂಡ
ಪಿಂಕ್ ಶರ್ವಾನಿ ಮತ್ತು ವೈಟ್ ಕುರ್ತಾ ಹಾಗೂ ವೈಟ್ ಚೂಡಿದಾರ್ ಲುಕ್ ಇದೆಯಲ್ಲಾ ಇದು ಗೇಮ್ ಚೇಜಿಂಗ್ ಲುಕ್ ಆಗಿದೆ. ಈ ಓಪನ್ ಶೆರ್ವಾನಿ ಲುಕ್ ಸ್ವಲ್ಪ ಹೈಟ್ ಇರುವವರಿಗೆ ತುಂಬಾನೇ ಕ್ಲಾಸಿ ಲುಕ್ ನೀಡುವುದು. ಮದುವೆ ಮನೆಯಲ್ಲಿ ಎಷ್ಟೇ ಜನರಿದ್ದರೂ ಅವರ ನಡುವೆ ನಿಮ್ಮ ಈ ಸ್ಟೈಲ್ ಎದ್ದು ಕಾಣುವುದರಲ್ಲಿ ನೋ ಡೌಟ್.

ದುಲ್ಖರ್ ಸಲ್ಮಾನ್
ಗೋಲ್ಡನ್ ಬಟನ್ ಇರುವ ಮರೂನ್ ಶೆರ್ವಾನಿ ಮತ್ತು ವೈಟ್ ಚೂಡಿದಾರ್ ಲುಕ್‌ನಿಂದ ಮದುವೆ ಸಮರಾಂಭಗಳಲ್ಲಿ ಸಕತ್ ಆಗಿ ಮಿಂಚಬಹುದು. ಪಾಕೆಟ್‌ಗೆ ಕರ್ಚೀಫ್ ಡೆಕೋರೇಷನ್ ಈ ಡ್ರೆಸ್ಸಿಂಗ್ ಲುಕ್ ಮತ್ತಷ್ಟು ಹೆಚ್ಚಿಸಿದೆ. ಮದು ಮಗನಿಗೂ ರಿಸೆಪ್ಷನ್‌ಗೆ ಈ ಲುಕ್ ತುಂಬಾ ಆಕರ್ಷಕ ಲುಕ್ ನೀಡುವುದು.
ಈ ರೀತಿ ಡ್ರೆಸ್ಸಿಂಗ್ ಮಾಡಿದ್ದೇ ಆದರೆ ಮುವೆ ಸಮರಾಂಭಗಳಲ್ಲಿ ಡ್ರೆಸ್ಸಿಂಗ್‌ನಲ್ಲಿ ಹೆಣ್ಮಕ್ಕಳಷ್ಟೇ ಅಲ್ಲ ನೀವೂ ಗಮನ ಸೆಳೆಯುವುದರಲ್ಲಿ ನೋ ಡೌಟ್.



Click it and Unblock the Notifications
