Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಸಕತ್ ಟ್ರೆಂಡ್ ಆಗುತ್ತಿದೆ ರಶ್ಮಿಕಾರ 'ಬೆಂಕಿ' ಕ್ಯಾಪ್ಷನ್ ಇರುವ ಈ ಲುಕ್
ರಶ್ಮಿಕಾ ಮಂದಣ್ಣ ಈಗ ಭಾರತದ ಟಾಪ್ ನಟಿಗಳಲ್ಲೊಬ್ಬರು. ಸ್ಟೈಲಷ್ ಐಕಾನ್ ಆಗಿರುವ ರಶ್ಮಿಕಾ ಸದಾ ಫ್ಯಾಷನಬಲ್ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ. ಟ್ರೆಡಿಷನಲ್ ಲುಕ್ ಆಗಿರಲಿ ಅಲ್ಟ್ರಾ ಮಾಡರ್ನ್ ಲುಕ್ ಆಗಿರಲಿ, ರಶ್ಮಿಕಾಗೆ ಎಲ್ಲಾ ಬಗೆಯ ಡ್ರೆಸ್ಸಿಂಗ್ ಚೆನ್ನಾಗಿಯೇ ಒಪ್ಪುತ್ತದೆ.
ಇದೀಗ ರಶ್ಮಿಕಾರ ಇತ್ತೀಚೆಗಿನ ಸೂಪರ್ ಕೂಲ್ ಲುಕ್‌ನ ಕೆಲ ಫೋಟೋಗಳ ಜೊತೆಗೆ ಅವರು ನೀಡಿರುವ 'ಬೆಂಕಿ' ಕ್ಯಾಪ್ಷನ್ ಸಕತ್ ಟ್ರೆಂಡ್ ಆಗುತ್ತಿದೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇವರ ಈ ಲುಕ್ ನೋಡಿ ಫಿದಾ ಆದವರಿಗೆ ಅವರು ಬರೆದಿರುವ ಕ್ಯಾಪ್ಷನ್ ಮತ್ತಷ್ಟು ಸ್ಪೂರ್ತಿ ನೀಡುವಂತಿದೆ.

ಗ್ರೀನ್ ವೈಟ್ ಕಾಂಬಿನೇಷನ್‌ನಲ್ಲಿ ಸೂಪರ್ ಲುಕ್
ಗ್ರೀನ್ ಕಲರ್ ಟಾಪ್‌ಗೆ ಆರೇಂಜ್ ಸ್ಟ್ರೈಪ್ಸ್ ಇರುವ ಬಿಳಿ ಬಣ್ಣದ ಪ್ಯಾಂಟ್ ಧರಿಸಿ
ಅವರ ಕೆಲವೊಂದು ಡ್ರೆಸ್ಸಿಂಗ್‌ಗಳು ಟ್ರೆಂಡ್ ಉಂಟು ಮಾಡಿವೆ. ಇತ್ತೀಚೆಗೆ ಅವರ ಸ್ಟೈಲ್ಲೊಂದು ಗಮನ ಸೆಳೆದಿದ್ದು ಅವರು ನೀಡಿರುವ ಕ್ಯಾಪ್ಷನ್ ಅಂತೂ ಮತ್ತಷ್ಟು ಗಮನ ಸೆಳೆದಿದೆ. ಅದರ ಮೇಲೆ ಫ್ಲವರ್ ಅಂಡ್ ಸ್ಟ್ರೈಪ್ಸ್ ಇರುವ ಕೋಟ್ ಅನ್ನು ಧರಿಸಿರುವ ರಶ್ಮಿಕಾ ಲುಕ್ ಸಕತ್ ಸ್ಟೈಲಿಷ್ ಆಗಿದೆ.

ಡ್ರೆಸ್ಸಿಂಗ್ ತಕ್ಕ ಮ್ಯಾಚಿಂಗ್
ಗ್ರೀನ್ ಟಾಪ್ಗೆ ಮ್ಯಾಚ್ ಆಗುವಂತೆ ಗ್ರೀನ್ ಕಲರ್ ಇಯರಿಂಗ್, ಹಾಗೂ , ಪ್ಯಾಮಟ್ ಬಣ್ಣಕ್ಕೆ ಹೊಂದುವಂತೆ ಬಿಳಿ ಶೇಡ್ಸ್ ಹಾಗೂ ವೈಟ್ ಸ್ಲಿಪ್ಪರ್ ಧರಿಸಿರುವ ರಶ್ಮಿಕಾ ಸೂಪರ್ ಕೂಲ್ ಲುಕ್‌ನಲ್ಲಿ ಸಕತ್ ಗ್ಲಾಮರಸ್ ಆಗಿ ಮಿಂಚಿದ್ದಾರೆ.

ಗಮನ ಸೆಳೆದ ರಶ್ಮಿಕಾ ಕ್ಯಾಪ್ಷನ್
ಬೆಂಕಿಯಲ್ಲಿ ನಡೆಯಬಹುದೆಂದು ನೀವು ಯೋಚಿಸಿದ್ದೀರಾ? ನಿಮ್ಮ ಪ್ರಕಾರ ಬೆಂಕಿ ಎಂದರೇನು? ಹೋಲಿಕೆ ಮಾಡುವುದೇ? ಒತ್ತಡವೇ? ಸೋಲೇ? ಅಥವಾನಮ್ಮ ಮೇಲೆ ತಪ್ಪು ಹೊರಿಸುವುದೇ? ನಿಮ್ಮ ಬೆಂಕಿ ಏನು? ಇದರಲ್ಲಿ ನೀವು ನಡೆಯ ಬಲ್ಲಿರಾ?
ಹೌದು ನೀವು ನಡೆಯಬಹುದು, ಯಾರು ಬೇಕಾದರೂ ಮಾಡಬಹುದು
1. ಮೊದಲಿಗೆ ನಿಮ್ಮ ಎದುರಿಗೆ ಈ ಬೆಂಕಿ ಅಥವಾ ಅಡೆತಡೆ ಇದೆ ಎಂಬುವುದನ್ನು ಅರಿತುಕೊಳ್ಳಬೇಕು.
2. ತಾಳ್ಮೆಯಿಂದಾ ದಿನದಿಂದ ದಿನಕ್ಕೆ ಅದರಲ್ಲಿ ನಡೆಯಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ಆ ದೊಡ್ಡ ಭಯ ಅಥವಾ ಅಡೆತಡೆಯನ್ನು ನೀವು ದಾಟಿದಿರಿ ಎಂಬುವುದು ನಿಮಗೆ ಅರ್ಥ ಆಗುತ್ತೆ. ಇದನ್ನೇ ನಾನು ಪ್ರತಿದಿನ ಮಾಡುತ್ತಿರುವುದು, ನಿಮ್ಮಲ್ಲಿಯೂ ಕೆಲವರಿಗೆ ಇದು ಸಹಾಯ ಮಾಡಿದರೆ ನನಗೆ ಅದುವೇ ಖುಷಿ...
ಎಂಬುವುದಾಗಿ ಬದುಕಿನ ಪಾಠ ಹೇಳಿದ್ದಾರೆ.



Click it and Unblock the Notifications
