For Quick Alerts
ALLOW NOTIFICATIONS  
For Daily Alerts

ಸೀರೆಯಲ್ಲಿ ರಶ್ಮಿಕಾ ಮಂದಣ್ಣ: ಗ್ಲಾಮರಸ್ ಲುಕ್‌ಗೆ ನೋಡುಗರು ಫುಲ್ ಫಿದಾ...

|

ನ್ಯಾಷನಲ್‌ ಕ್ರಷ್ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ಸೀರೆಯಲ್ಲಿ ಪೋಸ್‌ ನಿಡಿರುವ ಫೋಟೋವೊಂದನ್ನು ಶೇರ್‌ ಮಾಡಿದ್ದು, ಆ ಫೋಟೋ ನೋಟಿದವರು ಕ್ಲೀನ್‌ ಬೋಲ್ಡ್ ಆಗಯವುದರಲ್ಲಿ ಯಾವುದೇ ಸಂಶಯವಿಲ್ಲ.

ಹುಡುಗರು ರಶ್ಮಿಕಾ ಅವರ ಸೀರೆಯಲ್ಲಿ ಬೋಲ್ಡ್ ಅಂಡ್‌ ಬ್ಯೂಟಿಫುಲ್‌ ಆಗಿರುವ ಲುಕ್‌ ನೋಡಿ ವಾವ್ ಅಮದ್ರೆ, ಹುಡುಗಿಯರು ಅವರ ಸೀರೆ, ಡ್ರೆಸ್ಸಿಂಗ್‌ ಸ್ಟೈಲ್ ನೋಡಿ ವಾವ್‌ ಅಂತಿದ್ದಾರೆ, ಅಷ್ಟೊಂದು ಆಕರ್ಷಕವಾಗಿ ಕಾಣುತ್ತಿದ್ದಾರೆ ರಶ್ಮಿಕಾ.

ರಶ್ಮಿಕಾ ಅವರಿಗೆ ಟ್ರೆಡಿಷನ್ ಆಗಿರಲಿ, ಮಾಡರ್ನ್ ಆಗಿರಲಿ ಚೆನ್ನಾಗಿಯೇ ಕಾಣಿಸುತ್ತಾರೆ, ಆದರೆ ಇವರ ಈ ಸಿರೆ ಲುಕ್‌ ಇದೆಯಲ್ಲಾ ಕ್ಲಾಸ್‌ ಎಂದು ಹೇಳಬಹುದು. ಆ ಸೀರೆಯಲ್ಲಿ ಅವರು ಅಷ್ಟೊಂದು ಅಂದವಾಗಿ ಕಾಣುತ್ತಿದ್ದಾರೋ ಅಥವಾ ಅವರಿಂದ ಆ ಸೀರೆ ಅಷ್ಟೊಂದು ಆಕರ್ಷಕವಾಗಿ ಕಾಣುತ್ತಿದೆಯೋ ಎಂದು ಅವರ ಲುಕ್‌ ನೋಡಿದವರು ಮಾತನಾಡಿಕೊಳ್ಳುತ್ತಿದ್ದಾರೆ.

ಪೀಚ್‌ ಬಣ್ಣದ ಫ್ಯಾನ್ಸಿ ಸೀರೆಗೆ ಫ್ಯಾನ್ಸಿ ಡಿಸೈನ್‌ನ ಜ್ಯುವೆಲರಿ ನೆಕ್ಲೇಸ್ ಧರಿಸಿ, ಫ್ರೀ ಹೇರ್ ಬಿಟ್ಟು, ಕೈಗೆ ದೊಡ್ಡದಾದ ರಿಂಗ್‌ ಧರಿಸಿ ಸಕತ್‌ ಗ್ಲಾಮರಸ್‌ ಆಗಿ ಮಿಂಚಿದ್ದಾರೆ. ಸೀರೆಗೊಪ್ಪುವ ಬಣ್ಣದ ಕ್ಲೌಚ್ ಕೂಡ ಮ್ಯಾಚ್ ಮಾಡಿದ್ದಾರೆ.

ರಶ್ಮಿಕಾರ ಈ ಫ್ಯಾಷನ್‌ ಸ್ಟೈಲ್‌ ಟ್ರೆಮಡ್ ಆಗುವುದರಲ್ಲಿ ಡೌಟೇ ಇಲ್ಲ, ಅಷ್ಟೊಂದು ಗಮನ ಸೆಳೆದಿದೆ ಈ ಫೋಟೋ...

English summary

Rashmika Mandanna Grabs Social Media Attention Through Her Recent Saree Look

Rashmika Mandanna Grabs Social Media Attention Through Her Recent Saree Look, Read on.,
X