Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸ್ಟ್ರೀಟ್ ಸ್ಟೈಲ್‌ನಲ್ಲಿ ಬ್ಯೂಟಿಯಾಗಿ ಮೆರೆದಿರುವ ಪ್ರಿಯಾಂಕ ಚೋಪ್ರಾ
ಬಾಲಿವುಡ್ ಬ್ಯೂಟಿ ಎಂದೇ ಕರೆಯಿಸಿಕೊಳ್ಳುವ ಪ್ರಿಯಾಂಕ ಚೋಪ್ರಾ ಸ್ಟ್ರೀಟ್ ಸ್ಟ್ಟೈಲ್‌ಗಳಿಗೆ ಹೆಸರು ಮಾಡಿದವರು. ಆಕೆಯ ರಸ್ತೆ ಬದಿಯ ಫ್ಯಾಷನ್ ವಿಶ್ವವಿಖ್ಯಾತ ಎಂದೆನಿಸಿದ್ದು ತಮ್ಮ ಡೆನೀಮ್‌ನಿಂದ ಹಿಡಿದು ಆಳವಾದ ಮುಂಭಾಗ ಸ್ಲಿಟ್‌ವರೆಗೆ ಪ್ರಿಯಾಂಕ ತುಂಬಾ ಸ್ಟೈಲಿಶ್ ದಿರಿಸುಗಳನ್ನೇ ಧರಿಸುತ್ತಾರೆ. ಹಾಲಿವುಡ್‌ನಲ್ಲಿ ಕೂಡ ಹೆಸರು ಮಾಡಿರುವ ಪಿಗ್ಗಿ ಅಲ್ಲಿನವರನ್ನೂ ಕೂಡ ತನ್ನ ಸ್ಟೈಲ್‌ನಿಂದ ಮೆಚ್ಚಿಸಿ ಸೈ ಎನ್ನಿಸಿ ಕೊಂಡಿದ್ದಾರೆ. ಸರಳವಾಗಿ ಕಾಣುವ ಆಕೆಯ ಉಡುಗೆಯನ್ನು ನಾವು ಅನುಸರಿಸಲು ಹೋದರೂ ಅದು ಅಷ್ಟೊಂದು ಫರ್ಫೆಕ್ಟ್ ಎಂದೆನಿಸುವುದಿಲ್ಲ.

ಬಿಳಿ ಬಣ್ಣದ ಉಡುಪುಗಳನ್ನು ಧರಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಪಿಗ್ಗಿಗೆ ಆಕೆಯೇ ಸಾಟಿಯಾಗಿದ್ದಾರೆ. ತನ್ನ ಮೊದಲು ಬಿಳಿ ದಿರಿಸಿನಲ್ಲಿ ಆಕೆ ಬಿಳಿ ಶರ್ಟ್ ಮತ್ತು ಅದಕ್ಕೆ ಹೊಂದು ಟೋರ್ಡ್ ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಮನವನ್ನು ಕದ್ದವರು ಎಂದೆನಿಸಿದ್ದಾರೆ. ಬೀಜ್ ಶೂಗಳನ್ನು ಧರಿಸಿರುವ ಪಿಗ್ಗಿ ತಮ್ಮ ಕೈಯಲ್ಲಿ ಫೆಂಡಿ ಹ್ಯಾಂಡ್ ಬ್ಯಾಗ್ ಅನ್ನು ಹಿಡಿದುಕೊಂಡಿದ್ದಾರೆ.
ಇನ್ನು ತಮ್ಮ ಎರಡನೆಯ ಲುಕ್‌ನಲ್ಲಿ ಬಿಳಿ ಬ್ರೀಜ್ ಸ್ಲೀವ್ ಎ.ಎಲ್.ಸಿ ಕ್ರಾಪ್ ಟಾಪ್ ಅನ್ನು ಪಿಗ್ಗಿ ಧರಿಸಿದ್ದು ಡೆನೀಮ್ ಪ್ಯಾಂಡ್ ಧರಿಸಿ ಇನ್ನಷ್ಟು ಹಾಟ್ ಆಗಿ ಕಾಣುತ್ತಿದ್ದಾರೆ. ವೈಎಸ್‌ಎಲ್ ಸ್ನೀಕರ್ಸ್ ಮತ್ತು ರೆಟ್ರೊ ಶೇಡ್‌ಗಳ ಶೂವನ್ನು ಧರಿಸಿದ್ದಾರೆ. ಬನ್ ಮಾದರಿಯ ಹೇರ್ ಸ್ಟೈಲ್ ಅನ್ನು ಆಕೆ ತನ್ನದಾಗಿಸಿಕೊಂಡಿದ್ದು ಕೆಂಪು ಬಣ್ಣದ ತುಟಿ ಬಣ್ಣವನ್ನು ಹಚ್ಚಿಕೊಂಡಿದ್ದಾರೆ. ಅಂತೂ ಪಿಗ್ಗಿಯ ಈ ಹಾಟ್ ಲುಕ್‌ಗೆ ನಾವು ಮನಸೋತಿದ್ದು ಆಕೆಯ ಸ್ಟೈಲ್ ಅನ್ನು ನೀವು ಕೂಡ ಅನುಸರಿಸಬಹುದಾಗಿದೆ.



Click it and Unblock the Notifications


