Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಹೊಸ ಫೋಟೋ ಶೂಟ್‌ನಲ್ಲಿ ಮೇಘನಾ ರಾಜ್ ಲುಕ್ ನೋಡಿ
ಮೇಘನಾ ರಾಜ್ ಸರ್ಜಾ ಬಹುಭಾಷೆ ತಾರೆ. ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಇವರು ಇದೀಗ ಕನ್ನಡದ ಕಿರುತೆರೆಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಕೊರೊನಾ ಸಮಯ ಹಲವರ ಜೀವನದಲ್ಲಿ ಹಲವು ರೀತಿಯ ಆಘಾತ ಉಂಟು ಮಾಡಿತ್ತು. ಆದರೆ ಮೇಘನಾ ರಾಜ್ ಅವರ ಬದುಕಿನಲ್ಲಿ ಬಹು ದೊಡ್ಡ ಆಘಾತವೇ ಉಂಟಾಗಿತ್ತು. ಗರ್ಭಿಣಿಯೆಂದು ಸಂಭ್ರಮದಲ್ಲಿದ್ದ ಅವರ ಬದುಕಿನಲ್ಲಿ ಯಾರೂ ಊಹಿಸಿರದ ದುರ್ಘಟನೆ ನಡೆಯಿತು. ಪತಿ ಚಿರಂಜೀವಿ ಸರ್ಜಾರವರ ಅಕಾಲಿಕ ಸಾವಿನಿಂದ ಕತ್ತಲೆ ಕವಿದಿದ್ದ ಅವರ ಬದುಕನ್ನು ಬೆಳಕಿನೆಡೆಗೆ ತಂದಿದ್ದು ಅವರ ಮಗ ರಾಯನ್ ರಾಜ್ ಸರ್ಜಾ... ಒಂದು ವರ್ಷ ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದ ಮೇಘನಾರವರು ಇದೀಗ ಚಿತ್ರರಂಗಕ್ಕೆ ಮರಳಿದ್ದು ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ತಾಣದಲ್ಲಿಯೂ ಸಕ್ರೀಯರಾಗಿರುವ ಇತ್ತೀಚೆಗೆ ಫೋಟೋಶೂಟ್ ಮಾಡಿಸಿ ಹಾಕಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.....

ಜೀನ್ ಲುಕ್‌ನಲ್ಲಿ ಮೇಘನಾ
ಬ್ಲೂ ಜೀನ್‌ಗೆ ಬ್ಲೂ ಟಾಪ್, ಕಪ್ಪು ಕೂಲಿಂಗ್ ಗ್ಲಾಸ್ ಜೊತೆ ಸ್ಟೈಲಿಷ್ ಬ್ಯಾಗ್ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಅವರು ಕೂಡ ಆ ಫೋಟೋವನ್ನು ಇನ್‌ಸ್ಟಾದಲ್ಲಿ ಹಾಕಿ ಹ್ಯಾಂಡ್‌ಬ್ಯಾಗ್ ಎಂದು ಮೆನ್ಷನ್ ಮಾಡಿದ್ದಾರೆ.

ಕ್ಲಾಸಿಕ್ ಲುಕ್‌ನಲ್ಲಿ ಮೇಘನಾ
ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ ಜಡ್ಜ್ ಆಗಿರುವ ಮೇಘನಾ ಕ್ಲಾಸಿಕ್ ಲುಕ್‌ನಲ್ಲಿ ರೆಡಿಯಾಗಿ ನೀಡಿರುವ ಫೋಟೋ ಪೋಸ್.

ಯೆಲ್ಲೋ ಗೌನ್‌ನಲ್ಲಿ ಕ್ಯೂಟ್ ಮೇಘನಾ
ಯೆಲ್ಲೋ ಗೌನ್‌ಗೆ ನೆಕ್ಲೇಸ್, ಹ್ಯಾಂಗಿಂಗ್ ಕಿವಿಯೋಲೆ ಧರಿಸಿ ಮುದ್ದಾಗಿ ಕಾಣುತ್ತಿರುವ ಮೇಘನಾ ರಾಜ್ ಸರ್ಜಾ. ವೇವಿ ಹೇರ್ ಸ್ಟೈಲ್ ಅವರ ಈ ಲುಕ್‌ಗೆ ಪರ್ಫೆಕ್ಟ್ ಆಗಿದೆ.

ಗ್ರ್ಯಾಂಡ್ ಜೂಡಿದಾರ್‌ನಲ್ಲಿ ಮೇಘನಾ ಪೋಸ್
ಗ್ರ್ಯಾಂಡ್ ಜೂಡಿದಾರ್‌ಗೆ ಗ್ರ್ಯಾಂಡ್ ನೆಕ್ಲೇಸ್ ಧರಿಸಿ, ತುರುಬು ಹೇರ್‌ಸ್ಟೈಲ್‌ನಲ್ಲಿ ಮೇಘನಾ ರಾಜ್ ಪೋಸ್ ಗ್ರ್ಯಾಂಡ್ ಆಗಿಯೇ ಇದೆ ಅಲ್ವಾ?

ರೆಡ್ ಗೌನ್‌ನಲ್ಲಿ ಕಾನ್ಫಿಡೆನ್ಸ್ ಲುಕ್ ಬೀರಿದ ಮೇಘನಾ
ರೆಡ್ ಲಾಂಗ್ ಗೌನ್‌ನಲ್ಲಿ ಕಾನ್ಫಿಡೆನ್ಸ್ ಲುಕ್‌ನಲ್ಲಿ ಪೋಸ್ ನೀಡಿದ ಮೇಘನಾ.... ಈ ರೆಡ್ ಗೌನ್ ಅನ್ನೂ ಆಫೀಸ್‌ಗೂ ಬಳಸಬಹುದು, ಪಾರ್ಟಿಗೂ ಬಳಸಬಹುದು.

ಅನೇಕರಿಗೆ ಸ್ಪೂರ್ತಿಯಾಗಿರುವ ಮೇಘನಾ ರಾಜ್
ಅತೀ ಚಿಕ್ಕ ಪ್ರಾಯದಲ್ಲಿ ಪತಿ ಚಿರಂಜೀವಿ ಸರ್ಜಾವನ್ನು ಕಳೆದುಕೊಂಡಿರುವ ಮೇಘನಾರಿಗೆ ಅವರ ಮಗ ರಾಯನ್ ರಾಜ ಸರ್ಜಾ ಈಗ ಸರ್ವಸ್ವ. ಜೀವನದಲ್ಲಿ ಎದುರಾದ ಸವಾಲುಗಳನ್ನು ಎದುರಿಸಿ ದಿಟ್ಟತನದಿಂದ ಹೆಜ್ಜೆ ಇಡುವ ಮೂಲಕ ತನ್ನಂಥ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications
