Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಬೀದಿ ಬದಿಯಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಇಂಟರ್ನೆಟ್ ಸೆನ್ಸೇಷನ್ ಆದ ಕತೆ
ಯಾರ ಅದೃಷ್ಟ ಹೇಗೆ ಬದಲಾಗುತ್ತೋ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ವ್ಯಕ್ತಿ ಒಂದೇ ದಿನದಲ್ಲಿ ಸ್ಟಾರ್ ಆದ ಎಷ್ಟೋ ಉದಾಹರಣೆಗಳಿವೆ. ಇತ್ತೀಚೆಗೆ ಕೇರಳದಲ್ಲಿ 60 ವರ್ಷದ ಕೂಲಿ ಕಾರ್ಮಿಕರಾಗಿದ್ದ ವ್ಯಕ್ತಿ ರಾತ್ರೋ ರಾತ್ರಿ ಮಾಡೆಲ್ ಆದ ಕತೆ ಕೇಳಿದ್ದೀರಿ. ಇದೂ ಕೂಡ ಅಂಥದ್ದೇ ಒಂದು ಸ್ಟೋರಿ ಇದು .

ಬಲೂನ್ ಮಾರುತ್ತಿದ್ದ ಹುಡುಗಿ ಮಾಡೆಲ್ ಆದ ಕತೆ
ಕೇರಳದಲ್ಲಿ ರಸ್ತೆ ಬದಿಯಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಈಗ ಇಂಟರ್‌ನೆಟ್ ಸೆನ್ಸೇಷನ್. ಸನ್ ಟ್ಯಾನ್ ಬಗ್ಗೆ ಚಿಂತಿಸದೆ ಬಿರು ಬಿಸಿಲಿನಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಈಗ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲದ ಲುಕ್‌ನಲ್ಲಿ ಸಾಮಾಜಿಕ ತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಆ ಫೋಟೋಗ್ರಾಫರ್ ಕಣ್ಣಿಗೆ ಬಿದ್ದ ಬಲೂನ್ ಮಾರು ಹುಡುಗಿ
ಅರ್ಜುನ್ ಕೃಷ್ಣನ ಕಣ್ಣಿಗೆ ಬಿದ್ದಿದ್ದೇ ತಡ ಆ ಬಲೂನ್ ಮಾರುವ ಹುಡಗಿಯ ಲಕ್ ಬದಲಾಗಿ ಹೋಯ್ತು.
ಆಕೆಯ ಹೆಸರು ಕಿಸ್ಬು. ರಾಜಾಸ್ಥಾನ ಕುಟುಂಬವು ಕೇರಳದಲ್ಲಿ ಬಂದು ಬಲೂನ್ ಮಾರುತ್ತಿತ್ತು, ಆ ಕುಟುಂಬದ ಮಗಳು ಕಿಸ್ಬು.

ಕ್ಯಾಮರಾದಲ್ಲಿ ಸೆರೆಯಾದ ಕಿಸ್ಬು
ಕಿಸ್ಬು ತನ್ನ ತಾಯಿ ಜೊತೆ ಅಂದಾಲೂರ್ ಕಾವು ಹಬ್ಬದಲ್ಲಿ ಬಲೂನ್ ಮಾರುತ್ತಿದ್ದಳು, ಆಗ ಆ ಹಬ್ಬಕ್ಕೆ ಬಂದಿದ್ದ ಅರ್ಜುನ್ ಕೃಷ್ಣನ್ ಎಂಬ ಫೋಟೋಗ್ರಾಫರ್ ಕಣ್ಣಿಗೆ ಈ ಹುಡುಗಿ ಬೀಳ್ತಾಳೆ. ಕೂಡಲೇ ಆಕೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ.

ವೈರಲ್ ಆಯ್ತು ಪೋಟೋ
ತಾನು ತೆಗೆದ ಫೋಟೋವನ್ನು ಕಿಸ್ಬು ಹಾಗೂ ಅವಳ ತಾಯಿಗೆ ತೋರಿಸುತ್ತಾರೆ, ಇಬ್ಬರಿಗೂ ಖುಷಿಯಾಗುತ್ತೆ.
ತಾನು ತೆಗೆದ ಫೋಟೋವನ್ನು ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ, ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಸ್ವತಃ ಅವರೇ ದಂಗಾಗುತ್ತಾರೆ, ಆಕೆಯ ಫೋಟೋ ವೈರಲ್ ಆಗುತ್ತೆ.

ಕಿಸ್ಬು ಫೋಟೋ ಶೂಟ್
ಕಿಸ್ಬು ಫೋಟೋ ವೈರಲ್ ಆದ ಬಳಿಕ ಬೇರೆ ಯಾರೋ ಒಬ್ಬರು ಆಕೆಯ ಕುಟುಂಬವನ್ನು ಸಂಪರ್ಕಿಸಿ ಆಕೆಯ್ನು ಮೇಕೋವರ್ ಮಾಡಿ ಫೋಟೋಶೂಟ್ ಮಾಡುತ್ತಾರೆ.

ಅದೃಷ್ಟ ಎಂದರೆ ಇದೇ ತಾನೆ?
ಸ್ಟೈಲಿಷ್ಟ್ ರಮ್ಯಾ ಎನ್ನುವವರು ಕಿಸ್ಬುಗೆ ಮೇಕಪ್ ಮಾಡಿಸಿ ಫೋಟೋಶೂಟ್ ಮಾಡಿಸುತ್ತಾರೆ, ಅದಕ್ಕೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ತನ್ನಿಂದ ಒಬ್ಬ ಹುಡುಗಿಯ ಬದುಕು ಒಳ್ಳೆಯ ರೀತಿಯಲ್ಲಿ ಬದಲಾಗಿದ್ದು ಫೋಟೋಗ್ರಾಫರ್ ಅರ್ಜುನ್ ಕೃಷ್ಣನ್‌ಗೆ ಖುಷಿ ತಂದಿದೆ.



Click it and Unblock the Notifications
