Latest Updates
-
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ! -
ಸ್ವಾತಂತ್ರ್ಯ ದಿನದ ಸಂಭ್ರಮ: ಕಡಿಮೆ ಬಜೆಟ್ನಲ್ಲಿ ಆರೋಗ್ಯಕರ 'ತ್ರಿವರ್ಣ' ಉಪಾಹಾರ ತಯಾರಿಸುವುದು ಹೇಗೆ? -
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಎಥ್ನಿಕ್ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದ ನಟಿ ಶ್ರೀಲೀಲಾ ಫೋಟೋಗಳು
ಕನ್ನಡ ಚಿತ್ರರಂಗದ ಬಹುಬೇಡಿಕೆಯ ಮೋಹಕ ನಟಿ ಶ್ರೀಲೀಲಾ. ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಈ ನಟಿ ತಮ್ಮ ನಟನೆ ಹಾಗೂ ಸೌಂದರ್ಯದಿಂದಾಗಿ ಸಿನಿ ರಸಿಕರ ಮನಗೆದ್ದಿದ್ದಾರೆ.
ಮಾಡರ್ನ್ ಹಾಗೂ ಟ್ರೆಡಿಷನಲ್ ಡ್ರೆಸ್ಸಿಂಗ್ ಎರಡೂ ಈ ನಟಿಗೆ ಒಪ್ಪುವುದಾದರೂ ನಮ್ಮ ಭಾರತೀಯ ಶೈಲಿಯ ಡ್ರೆಸ್ಸಿಂಗ್‌ನಲ್ಲಿ ಮತ್ತಷ್ಟು ಮುದ್ದಾಗಿ ಕಾಣುತ್ತಾರೆ. ಎಥ್ನಿಕ್ ಡ್ರೆಸ್ಸಿಂಗ್‌ನಲ್ಲಿ ಅವರನ್ನು ನೋಡಿದಾಗ ಈ ರೀತಿಯ ಡ್ರೆಸ್ಸಿಂಗ್ ನಾವೂ ಮಾಡಬೇಕು ಎಂದು ಯುವತಿಯರು ಬಯಸುವಷ್ಟು ಆಕರ್ಷಕವಾಗಿ ಕಂಗೊಳಿಸಿರುತ್ತಾರೆ.
ಎಥ್ನಿಕ್ ಡ್ರೆಸ್ಸಿಂಗ್‌ನಲ್ಲಿ ಮಿಂಚಿದ ಶ್ರೀಲೀಲಾ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಅವರ ಸ್ಟೈಲ್‌ನ ಝಲಕ್ ನೋಡಿ:

ಲೈಟ್ ಪರ್ಪಲ್ ಸೀರೆಗೆ ಮಾಡರ್ನ್ ಲುಕ್
ಸಿಲ್ವರ್ ಸ್ಲೀವ್‌ಲೆಸ್ ಬ್ಲೌಸ್‌ಗೆ ಲೈಟ್ ಪರ್ಪಲ್ ಸೀರೆ ಧರಿಸಿ, ಫ್ರೀ ಹೇರ್ ಬಿಟ್ಟಿದ್ದಾರೆ.
ಹೇರ್‌ಗೆ ಕಲರಿಂಗ್ ಮಾಡಲಾಗಿದೆ. ವಿಶೇಷ ಆಭರಣಗಳೇನು ಧರಿಸದೆ ಸಿಂಪಲ್ ಅಂಡ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿದ್ದಾರೆ.

ವೈಟ್ ಲೆಹಂಗಾ
ರೆಡ್ ಬ್ಲೌಸ್‌ಗೆ ವೈಟ್ ಲೆಹಂಗಾ ಮ್ಯಾಚ್ ಮಾಡಲಾಗಿದ್ದು ದೊಡ್ಡ ನೆಕ್ಲೇಸ್, ಬೈತಲೆ ಬೊಟ್ಟು, ದೊಡ್ಡ ಮೂಗುತಿ, ಜುಮುಕಿ, ಬಳೆ ಹೀಗೆ ಸರ್ವಾಲಂಕಾರದಿಂದ ರಾಣಿಯಂತೆ ಕಂಗೊಳಿಸುತ್ತಿರುವ ಶ್ರೀಲೀಲಾ.

ಫ್ಯಾನ್ಸಿ ಸೀರೆಯಲ್ಲಿ ಶ್ರೀಲೀಲಾ ಲುಕ್
ಮೆರೂನ್ ಫ್ಯಾನ್ಸಿ ಸೀರೆಗೆ ಮಾಡರ್ನ್ ಡ್ರೆಸ್ಸಿಂಗ್‌ಗೆ ಸೂಟ್ ಆಗುವ ನೆಕ್ಲೇಸ್, ಪರ್ಲ್ ಬ್ಯಾಂಗಲ್ ಧರಿಸಿ, ಫ್ರೀ ಹೇರ್‌ನಲ್ಲಿ ಶ್ರೀಲೀಲಾ ಲುಕ್... ಆಫೀಸ್‌ಗೆ ಹೋಗುವಾಗ ಈ ರೀತಿಯ ಲುಕ್ ತುಂಬಾನೇ ಪರ್ಫೆಕ್ಸ್ ಆಗಿರುತ್ತೆ.

ಫ್ಲವರ್ ಸೀರೆಯಲ್ಲಿ ಫೋಟೋಶೂಟ್
ಫ್ಲವರ್ ಸೀರೆಗೆ ದೊಡ್ಡ ಮ್ಯಾಚ್ ಹೊಂದಿವಂತೆ ದೊಡ್ಡ ಕಿವಿಯೋಲೆ ಧರಿಸಿ ನವಿಲುಗರಿ ಹಿಡಿದು ಶ್ರೀಲೀಲಾ ಪೋಸ್.

ಹಬ್ಬಕ್ಕೆ ಪರ್ಫೆಕ್ಟ್ ಲುಕ್
ಹಬ್ಬದಲ್ಲಿ ಈ ರೀತಿಯ ಡ್ರೆಸ್ಸಿಂಗ್ ಸೂಪರ್ ಅಲ್ವಾ? ದೀಪಾವಳಿ ಹಬ್ಬ ಬರುತ್ತಿದೆ, ಸೆಲ್ವಾರ್‌ನಲ್ಲಿ ಗ್ರ್ಯಾಂಡ್ ಆಗಿ ಮಿಂಚುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಈ ಡ್ರೆಸ್ಸಿಂಗ್ ಫಾಲೋ ಮಾಡಬಹುದು ನೋಡಿ.

ಡಿಫರೆಂಟ್ ಲುಕ್‌ನಲ್ಲಿ ಶ್ರೀಲೀಲಾ
ಇತ್ತ ಸೀರೆಯೂ ಅಲ್ಲ, ಅತ್ತ ಲಂಗ ದಾವಣಿಯೂ ಅಲ್ಲ, ಎರಡೂ ಮಿಕ್ಸ್ ಕಾಂಬಿನೇಷನ್‌ನ ಡ್ರೆಸ್ಸಿಂಗ್ ಇದಾಗಿದ್ದು ಮದುವೆ ಮುಂತಾದ ಸಂದರ್ಭದಲ್ಲಿ ಇಂತ ಡ್ರೆಸ್ಸಿಂಗ್ ಮೂಲಕ ಎಲ್ಲರ ಗಮನ ಸೆಳೆಯಬಹುದು.

ಪಿಂಕ್ ಲೆಹಂಗಾ
ಪಿಂಕ್ ಲೆಹಂಗಾಕ್ಕೆ ಸರಿ ಹೊಂದುವ ಅಲಂಕಾರದಲ್ಲಿ ಶ್ರೀಲೀಲಾ ಪೋಸ್. ಹಬ್ಬ, ಮದುವೆ ಮುಂತಾದ ವಿಶೇಷ ಸಂದರ್ಭಕ್ಕೆ ಇಂಥ ಅಲಂಕಾರ ಆಕರ್ಷಕವಾಗಿರುತ್ತದೆ.

ಪಿಂಕ್ ಸೀರೆಯಲ್ಲಿ ಮಿಂಚಿದ ಶ್ರೀಲೀಲಾ
ಕಾಲೇಜು ಹುಡುಗಿಯರು ತಮ್ಮ ಕಾಲೇಜಿನಲ್ಲಿ ಎಥ್ನಿಕ್ ಡೇ ಅಥವಾ ವಿಶೇಷ ದಿನಕ್ಕೆ ಇಂಥ ಡ್ರೆಸ್ಸಿಂಗ್ ಸೂಪರ್ ಆಗಿರುತ್ತೆ.

ಪಿಂಕ್ ಗ್ರ್ಯಾಂಡ್ ಗೌನ್‌ನಲ್ಲಿ ಮಿಂಚಿದ ಶ್ರೀಲೀಲಾ
ನೀವು ಎಂಗೇಜ್‌ಮೆಂಟ್ ಅಥವಾ ರಿಸೆಪ್ಷನ್‌ಗೆ ತುಂಬಾ ಗ್ರ್ಯಾಂಡ್ ಆಗಿ ಡ್ರೆಸ್ ಮಾಡಬೇಕೆಂದಿದ್ದರೆ ಈ ರೀತಿ ಸೊಂಕ್ಕೆ ಡಾಬು , ಗ್ರ್ಯಾಂಡ್ ಆಭರಣ ಹಾಕಿದರೆ ಗ್ರ್ಯಾಂಡ್ ಲುಕ್‌ನಲ್ಲಿ ಮಿಂಚ ಬಹುದು.

ದಾವಣಿಯಲ್ಲಿ ಮಿಂಚಿದ ಶ್ರೀಲೀಲಾ
ದಾವಣಿ ನಮ್ಮ ಭಾರತೀಯರ ಹುಡುಗಿಯರ ಮೆಚ್ಚಿನ ಡ್ರೆಸ್ಸಿಂಗ್, ಅದರಲ್ಲಿ ಮಿಂಚಿದ ಶ್ರೀಲೀಲಾ.



Click it and Unblock the Notifications