Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಅನುಪ್ರಭಾಕರ್ ಇಂಥ ಡ್ರೆಸ್ಸಿಂಗ್‌ನಲ್ಲಿ ಸೂಪರೋ ಸೂಪರ್!
ಸ್ಯಾಂಡಲ್‌ವುಡ್ ನಟಿ ಅನುಪ್ರಭಾಕರ್ ಸಾಮಾಜಿಕ ತಾಣದಲ್ಲೂ ಸಕ್ರೀಯರಾಗಿರುತ್ತಾರೆ. ಇದೀಗ ಕನ್ನಡ ರಿಯಾಲಿಟಿ ಶೋದಲ್ಲೂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಅವರ ಡ್ರೆಸ್ಸಿಂಗ್ ಸ್ಟೈಲ್ ತುಂಬಾನೇ ಗಮನ ಸೆಳೆದಿದೆ.
ಅನುಪ್ರಭಾಕರ್ ಅವರಿಗೆ ಟ್ರೆಡಿಷನ್, ವೆಸ್ಟರ್ನ್ ಎರಡೂ ಬಗೆಯ ಡ್ರೆಸ್‌ಗಳು ಚೆನ್ನಾಗಿ ಕಾಣುತ್ತದೆ, ಆದರೆ ಅವರು ತುಂಬಾನೇ ಗಮನ ಸೆಳೆಯುವುದು ಸೀರೆಯಲ್ಲಿ ಅದರಲ್ಲೂ ಸಾಂಪ್ರದಾಯಿಕವಾಗಿ ಅಲಂಕಾರ ಮಾಡಿಕೊಂಡ ಲುಕ್‌ನಲ್ಲಿ ತುಂಬಾನೇ ಗಮನ ಸೆಳೆಯುತ್ತಾರೆ. ಅವರ ಆ ಲುಕ್ ಅನ್ನು ಅವರ ಯಾವ ವೆಸ್ಟರ್ನ್ ಲುಕ್ ಬೀಟ್ ಮಾಡೋಕೆ ಆಗಲ್ಲ, ಅಷ್ಟೊಂದು ಆಕರ್ಷಕವಾಗಿ ಕಾಣುತ್ತಾರೆ.
ಇತ್ತೀಚೆಗೆ ಅವರು ಒಂದು ಫೋಟೋ ಹಾಕಿದ್ದಾರೆ, ಆ ಫೋಟೋ ನೋಡಿದ ಅವರ ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ಅವರ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಹೆಚ್ಚಿನವರು ಫಾಲೋ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಅವರ ಈ ಲುಕ್ ತುಂಬಾನೇ ಆಕರ್ಷಕವಾಗಿದೆ ನೋಡಿ:

ರಾಣಿಯಂತೆ ಕಂಗೊಳಿಸಿದ ಅನುಪ್ರಭಾಕರ್
ರಿಯಾಲಿಟಿ ಶೋಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಅನುಪ್ರಭಾಕರ್ ಈ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ. ತಲೆಗೆ ನೆತ್ತಿ ಸರ, ಕುತ್ತಿಗೆಗೆ ನೆಕ್ಲೇಸ್, ದೊಡ್ಡ ಕಿವಿಯೋಲೆ, ಬಳೆ ಮೂಗುತಿ ಲುಕ್‌ನಲ್ಲಿ ರಾಣಿಯ ರೀತಿ ಕಂಗೊಳಿಸುತ್ತಿದ್ದಾರೆ.

ಸಾಂಪ್ರದಾಯಿಕ ಲುಕ್‌ನಲ್ಲಿ ಅನುಪ್ರಭಾಕರ್
ಅನು ಅವರ ಈ ಲುಕ್ ನೋಡಿ ತುಂಬಾನೇ ಚೆನ್ನಾಗಿದೆ ಅಲ್ವಾ? ದೊಡ್ಡ ಮೂಗುತಿ, ಸಾಂಪ್ರದಾಯಿಕ ಆಭರಣ, ತುರುಬು ಕಟ್ಟಿ ಮಲ್ಲಿಗೆ ಮುಡಿದು ಲಕ್ಷ್ಮಿ ಕಳೆಯಿಂದ ಕಂಗೊಳಿಸುತ್ತಿದ್ದಾರೆ.

ಅನುಪ್ರಭಾಕರ್ ವಾವ್ ಲುಕ್
ಈ ಲುಕ್ ನೋಡಿದ ಹೆಣ್ಣು ಮಕ್ಕಳಿಗೆ ತಮಗೂ ಈ ರೀತಿ ಅಲಂಕಾರ ಮಾಡಬೇಕೆಂದು ಅನಿಸದೆ ಇರಲ್ಲ, ಅಷ್ಟೊಂದು ಸೂಪರ್ ಆಗಿದೆ. ಫುಲ್ ಸ್ಲೀವ್‌ನ ಬ್ಲೌಸ್, ಕಾಟನ್ ಸೀರೆಯಲ್ಲಿ ತುಂಬಾನೇ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಬೇಸಿಗೆ ಕಾಲಗಿಂತೂ ಈ ರೀತಿಯ ಡ್ರೆಸ್ಸಿಂಗ್ ತುಂಬಾನೇ ಆಕರ್ಷಕವಾಗಿದೆ.

ಸೆಲ್ವಾರ್‌ನಲ್ಲಿ ಅನುಪ್ರಭಾಕರ್ ಲುಕ್
ಸೆಲ್ವಾರ್‌ನಲ್ಲಿ ಅನುಪ್ರಭಾಕರ್ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.
ಅನು ಅವರಿಗೆ ಸಾಂಪ್ರದಾಯಿಕ ಅಲಂಕಾರವೇ ಸೂಪರ್ ಅಲ್ವಾ?
ಸೀರೆಯಲ್ಲಿ ಅವರು ತುಂಬಾನೇ ಲಕ್ಷಣವಾಗಿ ಕಾಣುತ್ತಾರೆ. ಹಣೆಗೆ ಇಡುವ ಬಿಂದಿ, ಮಾಡಿಕೊಳ್ಳುವ ಅಲಂಕಾರ ಅವರ ಅಂದಕ್ಕೆ ತುಂಬಾನೇ ಮೆರಗು ನೀಡುವುದು. ಸರಳ-ಸುಂದರಿಯಾಗಿರುವ ಅನುಪ್ರಭಾಕರ್ ಇತರ ಡ್ರೆಸ್ಸಿಂಗ್‌ನಲ್ಲೂ ಆಕರ್ಷಕವಾಗಿ ಕಾಣುವುದಾದರೂ ಅವರು ಸೀರೆಯಲ್ಲಿ ತುಂಬಾನೇ ಆಕರ್ಷಕವಾಗಿ ಕಾಣುತ್ತಾರೆ.



Click it and Unblock the Notifications
