Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಚಂದನ್ ಶೆಟ್ಟಿ , ನಿವೇದಿತಾ ಗೌಡ ಮದುವೆ ಲುಕ್ ಹೇಗಿದೆ ನೋಡಿ
ಕನ್ನಡ ರ‍್ಯಾಪರ್, ಬಿಗ್ ಬಾಸ್ 5ನೇ ಸೀಸನ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ಅದೇ ಸೀಸನ್‌ನ ಫೈನಲಿಸ್ಟ್ ನಿವೇದಿತಾ ಗೌಡ ಮದುವೆ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.
ಡಬ್‌ಸ್ಮ್ಯಾಶ್ ಮೂಲಕ ಸಾಮಾಜಿಕ ತಾಣದಲ್ಲಿ ಆ್ಯಕ್ಟಿವ್ ಆಗಿದ್ದ ನಿವೇದಿತಾ ಗೌಡ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಸೆಲೆಬ್ರಿಟಿಯಾಗಿ ಬಿಟ್ಟರು. ಬಿಗ್‌ಬಾಸ್‌ನಲ್ಲಿ ಅವರು ಅತೀ ಹೆಚ್ಚು ಗಮನ ಸೆಳೆದದ್ದು ಅವರ ಫ್ಯಾಷನ್ ಸೆನ್ಸ್ ಮೂಲಕ. ಗೌನ್ ಡ್ರೆಸ್‌ಗಳಲ್ಲಿ ಗೊಂಬೆ ರೀತಿ ಕಾಣುತ್ತಿದ್ದ ನಿವೇದಿತಾ ಗೌಡ ಗೊಂಬೆಯೆಂದೇ ಫೇಮಸ್ ಆದರು.

ಇದೀಗ ಆ ಬಾರ್ಬಿ ಡಾಲ್ ಮನಸಾರೆ ಮೆಚ್ಚಿದ ಹಾಡಿನ ಮೂಲಕ ಎಲ್ಲರನ್ನು ಮೋಡಿ ಮಾಡಿರುವ ಚಂದನ್ ಶೆಟ್ಟಿ ಕೈ ಹಿಡಿಯುತ್ತಿದ್ದು, ಈ ನವ ಜೋಡಿಗೆ ಕನ್ನಡ ಬೋಲ್ಡ್ ಸ್ಕೈ ಶುಭ ಕೋರುತ್ತಿದೆ.
ಫ್ಯಾಷನಬಲ್ ಡ್ರೆಸ್ ಕಡೆಗೆ ಹೆಚ್ಚಿನ ಗಮನ ಕೊಡುವ ಬಾರ್ಬಿ ಡಾಲ್ ನಿವೇದಿತಾ ಗೌಡ ಹಾಗೂ ಫ್ಯಾಷನ್ ಪ್ರಿಯ ಚಂದನ್ ಶೆಟ್ಟಿಯ ರಿಸೆಪ್ಷನ್ ಹಾಗೂ ಮದುವೆ ಧಿರಿಸು ಹೀಗಿತ್ತು ನೋಡಿ:

ಮ್ಯಾಚಿಂಗ್ ಡ್ರೆಸ್‌ನಲ್ಲಿ ಮಿಂಚಿದ ಮದುಮಗ-ಮದುಮಗಳು
ಸ್ವೀಕ್ವೆನ್ ಮೆರೂನ್ ಬಾಲ್ ಗೌನ್ ಧರಿಸಿ ನಿವೇದಿತಾ ಗೌಡ ಅಕರ್ಷಕವಾಗಿ ಕಾಣಿಸಿದರೆ ಅವರಿಗೆ ಮ್ಯಾಚ್ ಹೊಂದುವಂತೆ ಚಂದನ್ ಶೆಟ್ಟಿ ಮೆರೂನ್ ಬ್ಲೇಝರ್‌ಗೆ ಹಾಗೂ ಬ್ಲ್ಯಾಕ್ ವೆಸ್ಟ್ ಕೋಟ್, ವೈಟ್ ಶರ್ಟ್ ಧರಿಸಿದ ಚಂದನ್ ಶೆಟ್ಟಿ ಮುಖದಲ್ಲಿ ಮದುಮಗನ ಕಳೆ ಎದ್ದು ಕಾಣುತ್ತಿತ್ತು.

ಡಿಸೈನರ್ ವೇರ್
ನಿವೇದಿತಾ ಗೌಡಗೆ ಗೌನ್‌ಗಳೆಂದರೆ ತುಂಬಾ ಪ್ರೀತಿ. ಬಿಗ್‌ಬಾಸ್ ಮನೆಯಲ್ಲಿ ಪ್ರತಿವಾರ ಗೌನ್ ಹಾಕುವ ಮೂಲಕ ಬಾರ್ಬಿಡಾಲ್ ರೀತಿ ಮಿಂಚುತ್ತಿದ್ದ ನಿವೇದಿತಾ ಗೌಡ ಇನ್ನು ತಮ್ಮ ಮದುವೆ ಡ್ರೆಸ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುತ್ತಾರೆಯೇ. ಹಾಗಾಗಿ ಮದುವೆ ರಿಸೆಪ್ಷನ್ ಡ್ರೆಸ್ ವಿನ್ಯಾಸ ಹೀಗೆ ಇರಬೇಕೆಂದು ಹೇಳಿ ಮಾಡಿಸಿದ ಗೌನ್ ಇದು. ಆ ಗೌನ್ ಮ್ಯಾಚ್ ಆಗುವಂತೆ ಚಂದನ್‌ಶೆಟ್ಟಿ ಸೂಟ್ ಧರಿಸಿದ್ದಾರೆ.

ಕಿಂಗ್ ಅಂಡ್ ಕ್ವೀನ್‌ನಂತೆ ಮಿಂಚಿದ ನಿವೇದಿತಾ ಗೌಡ, ಚಂದನ್ ಶೆಟ್ಟಿ
ಇವರ ಮದುವೆ ಆರತಕ್ಷತೆಯನ್ನು ರಾಯಲ್ ಥೀಮ್‌ನಲ್ಲಿ ಮಾಡಿದರು. ವೇದಿಕೆ ಮೇಲೆ ಗೌನ್ ಹಾಗೂ ಸೂಟ್‌ನಲ್ಲಿ ಮಿಂಚುತ್ತಿದ್ದ ಮದುಮಗ, ಮದುಮಗಳು ಕಿಂಗ್ ಅಂಡ್ ಕ್ವೀನ್‌ನಂತೆ ಕಂಗೊಳಿಸುತ್ತಿದ್ದರು.

ಗಮನ ಸೆಳೆದ ನಿವೇದಿತಾರ ಕೇಶ ವಿನ್ಯಾಸ
ನಿವೇದಿತಾ ಹೇರ್ ಸ್ಟೈಲ್ ನೋಡುವುದಕ್ಕೆ ಸಿಂಪಲ್ ಆಗಿ ಕಾಣಿಸಿದರೂ ಸಕತ್ ಸ್ಟೈಲಿಷ್ ಆಗಿ, ಹೊಸತನ ಎದ್ದು ಕಾಣುತ್ತಿತ್ತು. ಗೌನ್‌ಗೆ ಅಟ್ಯಾಚ್ ಆಗಿ ನೆಕ್‌ಗೆ ತೆಳುವಾಗ ನೆಟಡ್ ವಸ್ತ್ರದಿಂದ ವಿನ್ಯಾಸ ಮಾಡಲಾಗಿತ್ತು, ಅದೇ ವಸ್ತ್ರವನ್ನು ತಲೆ ಮೇಲೆ ಹಾಕುವ ಮೂಲಕ ಹೊಸದೊಂದು ಸ್ಟೈಲ್ ಸ್ಟೇಟ್‌ಮೆಂಟ್ ನೀಡಿದ್ದಾರೆ.

ವಿವಾಹ ಶಾಸ್ತ್ರದಲ್ಲಿ ಗೋಲ್ಡನ್ ಕಲರ್ ಸ್ಯಾರಿಯಲ್ಲಿ ಮಿಂಚಿದ ನಿವೇದಿತಾ
ಮದುವೆ ಶಾಸ್ತ್ರಕ್ಕೆ ಗೋಲ್ಡನ್ ಕಲರ್ ಸ್ಯಾರಿ ಧರಿಸಿದ್ದ ನಿವೇದಿತಾ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದರು. ಬೈತಲೆ ತೆಗೆದು ಜಡೆ ಹಾಕಿ ಮಲ್ಲಿಗೆ ಹೂ ಮುಡಿದಿದ್ದರು. ಕಿವಿಗೆ ಮಾಟಿ, ಸಾಂಪ್ರದಾಯಿಕ ಆಭರಣ, ಸೊಂಟಕ್ಕೆ ಡಾಬು ಧರಿಸಿದ ನಿವೇದಿತಾ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದರು.

ಚಂದನ್ ಶೆಟ್ಟಿ ಕ್ಯಾಸ್ಯೂಯಲ್ ಲುಕ್
ನಿವೇದಿತಾ ಜೊತೆ ಸೆಲ್ಫಿ ಕ್ಲಿಕ್ ಮಾಡುತ್ತಿರುವ ಚಂದನ್‌ಶೆಟ್ಟಿ ಕ್ಯಾಸ್ಯೂಯಲ್ ಧರಿಸಿದ್ದರು. ಅವರು ಡ್ರೆಸ್ಸಿಂಗ್‌ನಲ್ಲಿ ಅಷ್ಟೇನೂ ವಿಶೇಷತೆ ಇರಲಿಲ್ಲ. ಸಿಂಪಲ್ ಆಗಿ ಕಾಣಿಸಿದ್ದರು.

ಮದುಮಗಳಾದ ಗೊಂಬೆ
ಬಿಳಿ ರೇಷ್ಮೆ ಸೀರೆಗೆ ಪಿಂಕ್ ಬ್ಲೌಸ್ ಧರಿಸಿರುವ ನಿವೇದಿತಾ ಗೌಡ ಈ ಡ್ರೆಸ್‌ನಲ್ಲಿ ಆಕರ್ಷಕವಾಗಿ ಕಾಣಿಸಿದ್ದಾರೆ. ಕೆನ್ನೆಯಲ್ಲಿ ಮದುಮಗಳ ನಾಚಿಕೆ ಆಕೆಯ ಚೆಲುವೆಗೆ ಮತ್ತಷ್ಟು ಮೆರಗು ನೀಡಿದೆ.

ಹಳದಿ ಸೀರೆಗೆ ಹೂವಿನ ಅಲಂಕಾರ
ಇದೀಗ ಹೂವನ್ನು ಆಭರಣಗಳ ರೀತಿ ಧರಿಸುವ ಟ್ರೆಂಡ್ ಶುರುವಾಗಿದೆ. ರಾಧಿಕಾ ಕೂಡ ತಮ್ಮ ಮದುವೆ ಶಾಸ್ತ್ರದಲ್ಲಿ ಹೂವನ್ನೇ ಬೈಲೆ ಬೊಟ್ಟಾಗಿ ಬಳಸಿದ್ದರು. ತುಂಬಾ ಜನರು ಮದುವೆಯಲ್ಲಿ ಈ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ. ನಿವೇದಿತಾ ಕೂಡ ಹಳದಿ ಬಣ್ಣದ ಸೀರೆಗೆ ಹೂವಿನ್ನೇ ಆಭರಣವಾಗಿ ಧರಿಸಿ ಆಕರ್ಷಕವಾಗಿ ಕಂಗೊಳಿಸಿದರು.

ಧಾರೆಗೆ ಕೆಂಪು -ಹಸಿರು ಕಾಂಬಿನೇಷನ್‌ನಲ್ಲಿ ಕಂಗೊಳಿಸಿದ ನಿವೇದಿತಾ
ಕೆಂಪು ಬಣ್ಣದ ಸೀರೆಗೆ ಹಸಿರು ಬಣ್ಣದ ಬ್ಲೌಸ್ ಕಾಂಬಿನೇಷನ್‌ನಲ್ಲಿ ಮಿಂಚಿರುವ ನಿವೇದಿತಾ ತಾವು ಧರಿಸಿರುವ ಆ್ಯಂಟಿಕ್ ಜ್ಯುವೆಲರಿಗೆ ಮ್ಯಾಚ್ ಹೊಂದುವ ಬೈತಲೆ ಬೊಟ್ಟು ಧರಿಸಿದ್ದಾರೆ.

ಸಾಂಪ್ರದಾಯಿಕ ಮದುಮಗನ ಲುಕ್‌ನಲ್ಲಿ ಚಂದನ್ ಶೆಟ್ಟಿ
ಬಿಳಿ ಧೋತಿ ಹಾಕಿರುವ ಚಂದನ್ ಶೆಟ್ಟಿ ತಲೆಗೆ ಪೇಟಾ ಧರಿಸಿ ಸಾಂಪ್ರದಾಯಕ ಮದುಮಗನ ಲುಕ್‌ನಲ್ಲಿ ಮಿಂಚಿದ್ದಾರೆ.

ಹೊಸ ಬಾಳಿನ ಹೊಸ್ತಿಲಿನಲ್ಲಿರುವ ಜೋಡಿಗೆ ಶುಭವಾಗಲಿ
ಪ್ರಣಯ ಪಕ್ಷಿಗಳಾಗಿದ್ದ ಜೋಡಿ, ಇದೀಗ ಹೊಸದೊಂದು ಬಾಳಿಗೆ ಪಾದಾರ್ಪಣೆ ಮಾಡುತ್ತಿದ್ದು ಈ ಜೋಡಿಗೆ ಒಳಿತಾಗಲಿ.



Click it and Unblock the Notifications