Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆಯ ನಂತರವೂ ಮದುಮಗಳ ಕಳೆ ಮಾಸದಿರಲಿ
ಹೊಸ ಮದುಮಗಳು ಎಂಬ ವಿಶೇಷತೆ ಇರುವುದರಿಂದ ನೀವು ಬರೇ ಒಂದೆರಡು ಜೊತೆ ಸರಳ ಸೀರೆಗಳೊಂದಿಗೆ ಆ ಮನೆ ಸೇರುವುದು ಸರಿಯಲ್ಲ. ಆ ಮನೆಯಲ್ಲೂ ಏನಾದರೂ ಸಮಾರಂಭಗಳು ಇರುತ್ತವೆ ಎಂಬುದನ್ನು ನೀವು ಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕುದಾದ ಉಡುಪುಗಳನ್ನು ಕೊಂಡೊಯ್ಯಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮಗೆ ಸಹಾಯ ಮಾಡುವ ಸದುದ್ದೇಶದಿಂದ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿರುವೆವು.

ಮದುವೆಯ ನಂತರ ಪ್ರಥಮ ದಿನಕ್ಕಾಗಿ ಕೆಂಪು ಹಾಗೂ ಗೋಲ್ಡನ್ ಸೀರೆ ಹೆಚ್ಚಿನ ಮದುವಣಗಿತ್ತಿಯರು ಸಾಂಪ್ರಾದಾಯಿಕ ಬಣ್ಣವನ್ನು ತಮ್ಮ ಸೀರೆಗಳಲ್ಲಿ ಹೊಂದಲು ಬಯಸುತ್ತಾರೆ. ಕೆಂಪು ಸೀರೆಯೊಂದಿಗೆ ಚಿನ್ನದ ಬಣ್ಣದ ವಿನ್ಯಾಸಗಳು ಸೀರೆಯನ್ನು ಸಾಂಪ್ರದಾಯಿಕವಾಗಿ ಇರಿಸುವುದರ ಜೊತೆಗೆ ಆಧುನಿಕ ನೋಟವನ್ನು ನೀಡುತ್ತದೆ. ಇನ್ನು ಇದಕ್ಕೆ ತಕ್ಕುದಾದ ಆಭರಣ ಹಾಗೂ ಕೆಂಪು ಬಿಂದಿಯನ್ನಿಟ್ಟುಕೊಂಡು ಲಕಲಕನೇ ಮಿಂಚಬಹುದಾಗಿದೆ.
ಫ್ಲೋರಲ್ ಪ್ರಿಂಟ್ ಸೀರೆ
ಸಾಂಪ್ರಾದಾಯಿಕ ಹೆಚ್ಚಿನ ವರ್ಕ್ ಉಳ್ಳ ರೇಷ್ಮೆ ಸೀರೆಯ ಆಯ್ಕೆಯನ್ನು ಮಾಡುವವರೂ ಇದ್ದಾರೆ. ಪ್ಲೋರಲ್ ಪ್ರಿಂಟ್ ಸೀರೆಯೊಂದಿಗೆ ಮದುವಣಗಿತ್ತಿಯ ನೋಟವನ್ನು ಆಧುನಿಕಗೊಳಿಸಬಹುದಾಗಿದೆ. ಮುತ್ತಿನ ನೆಕ್ಲೇಸ್ ಮತ್ತು ರಾಮ್ ಲೀಲಾ ಕಿವಿಯಾಭರಣ ಸೀರೆಗೆ ಹೊಂದುತ್ತದೆ
ಮನ ಮೆಚ್ಚುವ ಸರಳ ಸೀರೆ
ಇನ್ನು ಹೆಚ್ಚು ವಿನ್ಯಾಸವುಳ್ಳ ಸೀರೆಗಳನ್ನು ಆಯ್ದುಕೊಳ್ಳುವುದರ ಬದಲಿಗೆ ಸರಳವಾದ ನಿಮ್ಮ ಅಂದವನ್ನು ಹೆಚ್ಚಿಸುವ ಸುಂದರ ಕಡಿಮೆ ವಿನ್ಯಾಸಗಳುಳ್ಳ ಸೀರೆಗಳನ್ನು ಆಯ್ದುಕೊಳ್ಳಬಹುದು.
ಸುಂದರ ಹಳದಿ ಸೀರೆ
ಇನ್ನು ಹೊಸದಾಗಿ ಮದುವೆಯಾಗಿರುವ ಮದುಮಗಳಿಗೆ ಹಳದಿ ಚೆನ್ನಾಗಿ ಒಪ್ಪುತ್ತದೆ. ಸೀರೆಗೆ ಒಪ್ಪುವಂತಹ ಮುತ್ತಿನ ಸೊಂಟದ ಪಟ್ಟಿಯನ್ನು ಧರಿಸಿ. ಕೆಂಪು ಬಿಂದಿಯ ಜೊತೆಗೆ ಚಿನ್ನದ ಬಳೆಗಳನ್ನು ಧರಿಸಿದರೆ ನಿಮ್ಮ ಅಂದಕ್ಕೆ ನಿಮ್ಮ ಪತಿ ಮನಸೋಲುವುದು ಖಂಡಿತ. ಹಾಗಿದ್ದರೆ ಮದುವಣಗಿತ್ತಿಯರೇ ಮದುವೆಯ ನಂತರ ದಿನಗಳ ಸಿಂಗಾರಕ್ಕೆ ನೀವು ಸಿದ್ಧರಾಗಿರುವಿರಾ? ನಿಮ್ಮ ಉತ್ತರ ಹೌದು ಎಂಬುದಾಗಿರುತ್ತದೆ ಎಂಬುದು ನಮ್ಮ ಅಭಿಪ್ರಾಯ.
Read in english - BridalFashion: Saree Collection For The First Day And A Few More Days After The Wedding



Click it and Unblock the Notifications


